ಕೋಲಾರ : ಸೇವಾಶ್ರಮ ಹೆಸರಿನಲ್ಲಿ ಮಠಕಟ್ಟಲು ಬಂದಿದ್ದ ಸ್ವಾಮೀಜಿ ಪ್ರೇಮಪಾಶಕ್ಕೆ ಬಿದ್ದು, 19 ವರ್ಷದ ಯುವತಿಯನ್ನು ಕರೆದುಕೊಂಡು ಓಡಿ ಹೋಗಿ ತಿರುಪತಿಯಲ್ಲಿ ಮದುವೆಯಾಗಿರುವ ಘಟನೆ ಕೋಲಾರ ಹೊಳಲಿಯಲ್ಲಿ ನಡೆದಿದೆ. ಸಂಕ್ರಾಂತಿ ಹಬ್ಬದಂದು ಸೇವಾಶ್ರಮ ಪೀಠಾ ಸ್ಥಾಪಿಸಿ ದತ್ತಾತ್ರೇಯ ಅವಧೂತ ಸ್ವಾಮೀಜಿ ಎಂದು ಹೆಸರು ಇಟ್ಟುಕೊಂಡು ಪೀಠಾಧ್ಯಕ್ಷ ಪದವಿ ಏರಿದ್ದ ಸ್ವಾಮೀಜಿ, ಎರಡು ತಿಂಗಳಿನಿಂದ ಮಠದಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದರು. ಈ ವೇಳೆ, ಮಠಕ್ಕೆ ಬರುತ್ತಿದ್ದ ಯುವತಿಯ ಮೇಲೆ ಸ್ವಾಮೀಜಿಗೆ ಪ್ರೇಮವಾಗಿದೆ. ಇದನ್ನು ಆಕೆಯ ಬಳಿ ಹೇಳಿದ ಸ್ವಾಮೀಜಿ, ಯುವತಿಯನ್ನು ಪುಸಲಾಯಿಸಿ ಆಕೆಯೊಂದಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಇವರಿಗಾಗಿ ಹುಡುಕಾಟ ಶುರುವಾಗಿದ್ದು, ಯುವತಿಯ ಕುಟುಂಬದವರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ನಡುವೆಯೇ ಸ್ವಾಮೀಜಿ ಯುವತಿಯ ಸಹೋದರನಿಗೆ ಕರೆ ಮಾಡಿದ್ದು, ಯುವತಿಯನ್ನು ತಿರುಪತಿಯಲ್ಲಿ ಮದುವೆಯಾಗಿದ್ದೇನೆ. ಪೋಲಿಸರಿಗೆ ದೂರು ಕೊಡಬೇಡಿ ನಿಮ್ಮ ಜೊತೆಯಲ್ಲಿ ನಾನಿರುತ್ತೇನೆ ಎನ್ನುವ ಸಂಭಾಷಣೆಯನ್ನು ಕಳುಹಿಸಿದ್ದಾರೆ. ಇದೇ ವೇಳೆ, ಸ್ವಾಮೀಜಿ ನಿನ್ನ ತಂಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಬೆಂಗಳೂರಿನಲ್ಲಿ ಮನೆ ಮಾಡಿ ಎಲ್ಲವೂ ಸರಿಹೋದಮೇಲೆ ಗ್ರಾಮಕ್ಕೆ ಬರುವುದಾಗಿ ತಿಳಿಸಿದ್ದಾರಂತೆ
ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಿಕೆ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಗುತ್ತಿಗೆದಾರರ ಸಂಘದಿಂದ ಅತಿ ದೊಡ್ಡ ಸಂಕಷ್ಟ ಎದುರಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬಾಕಿ ಇರುವ...








