ADVERTISEMENT
Thursday, August 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

Shwetha by Shwetha
August 20, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಹೊಸದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿನ್ ಝಿ (Gen Z) ಯುವಪೀಳಿಗೆಯ ಕುರಿತಾದ ಹೇಳಿಕೆಯಿಂದ ಆರಂಭವಾದ ಈ ವಿವಾದ, ಇದೀಗ ವೈಯಕ್ತಿಕ ಕೆಸರೆರಚಾಟಕ್ಕೆ ನಾಂದಿ ಹಾಡಿದೆ. ಬಾಬಾ ರಾಮ್‌ದೇವ್ ಅವರ ಸುದೀರ್ಘ ವಾಗ್ದಾಳಿಗೆ ಕಟು ಶಬ್ದಗಳಲ್ಲಿ ಉತ್ತರ ನೀಡಿರುವ ಕಂಗನಾ, ನನ್ನ ಯೌವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಹಗಲುಗನಸು ಕಾಣುವುದನ್ನು ನಿಲ್ಲಿಸಿ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನನ್ನ ವ್ಯಕ್ತಿತ್ವಕ್ಕೆ ಪಾಠ ಮಾಡಲು ಬರಬೇಡಿ

Related posts

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

August 20, 2026
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ರೋಗಕ್ಕೆ ತಕ್ಕ ಪೌಷ್ಟಿಕ ಆಹಾರ; 4 ಮಾದರಿಯ ಮೆನು ಸಿದ್ಧತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ರೋಗಕ್ಕೆ ತಕ್ಕ ಪೌಷ್ಟಿಕ ಆಹಾರ; 4 ಮಾದರಿಯ ಮೆನು ಸಿದ್ಧತೆ

August 20, 2026

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ಕಂಗನಾ ರಣಾವತ್, ಬಾಬಾ ರಾಮ್‌ದೇವ್ ಅವರಿಗೆ ನೇರ ಸವಾಲು ಹಾಕಿದ್ದಾರೆ. ನನ್ನ ಯೌವನ ಅಥವಾ ಬೆಡ್‌ರೂಮ್ ಕುರಿತು ಊಹಾಪೋಹಗಳನ್ನು ಮಾಡುತ್ತಾ ಹಗಲುಗನಸು ಕಾಣುವುದನ್ನು ಬಾಬಾ ರಾಮ್‌ದೇವ್ ತಕ್ಷಣವೇ ನಿಲ್ಲಿಸಬೇಕು. ಕೇವಲ ವದಂತಿಗಳು ಮತ್ತು ಗಾಸಿಪ್‌ಗಳ ಆಧಾರದ ಮೇಲೆ ನನ್ನ ವ್ಯಕ್ತಿತ್ವವನ್ನು ಅಳೆಯುವುದು ಮತ್ತು ನನಗೆ ನೀತಿ ಬೋಧನೆ ಮಾಡುವುದು ಸೂಕ್ತವಲ್ಲ ಎಂದು ಕಂಗನಾ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಛೀಮಾರಿ ನೆನಪಿಸಿ ತಿವಿದ ಕಂಗನಾ

ಇಷ್ಟಕ್ಕೇ ಮುಗಿಯದ ಕಂಗನಾ, ಪತಂಜಲಿ ಸಂಸ್ಥೆಯ ತಪ್ಪು ವೈದ್ಯಕೀಯ ಜಾಹೀರಾತುಗಳ ವಿವಾದವನ್ನು ಪ್ರಸ್ತಾಪಿಸಿ ರಾಮ್‌ದೇವ್ ಅವರಿಗೆ ಕೌಂಟರ್ ನೀಡಿದ್ದಾರೆ. ಸುಳ್ಳು ಮತ್ತು ದೇಶದ ಜನರನ್ನು ದಾರಿ ತಪ್ಪಿಸುವ ವೈದ್ಯಕೀಯ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ನನಗೆ ಸುಪ್ರೀಂ ಕೋರ್ಟ್‌ನಿಂದ ಎಂದಿಗೂ ಛೀಮಾರಿ ಬಿದ್ದಿಲ್ಲ. ನಿಮ್ಮ ಮೇಲಿರುವ ಆರೋಪಗಳು ದೇಶದ ಅತ್ಯುನ್ನತ ನ್ಯಾಯಾಲಯದ ದಾಖಲೆಗಳಲ್ಲಿವೆ. ಆದರೆ ನನ್ನ ಮೇಲಿರುವ ಮಾತುಗಳು ಕೇವಲ ಗಾಸಿಪ್‌ಗಳ ಆಧಾರಿತವಾಗಿವೆ ಎಂಬುದನ್ನು ಮರೆಯಬೇಡಿ ಎಂದು ಪತಂಜಲಿ ಸಂಸ್ಥೆಯ ಕಾನೂನು ಸಂಕಷ್ಟವನ್ನು ನೆನಪಿಸಿ ತಿರುಗೇಟು ನೀಡಿದ್ದಾರೆ.

ವಿವಾದ ಹುಟ್ಟಿಕೊಂಡಿದ್ದು ಹೇಗೆ?

ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಇಂದಿನ ಯುವಪೀಳಿಗೆಯನ್ನು (Gen Z) ಗಟರ್ ಜನರೇಷನ್ (ಚರಂಡಿ ಪೀಳಿಗೆ) ಎಂದು ಕಂಗನಾ ಕರೆದಿದ್ದರು. ದೇಶದ ಯುವಶಕ್ತಿಯನ್ನು ಇಂತಹ ಕೆಟ್ಟ ಪದಗಳಿಂದ ಕರೆಯುವುದಕ್ಕೆ ಬಾಬಾ ರಾಮ್‌ದೇವ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯುವಕರನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದ ರಾಮ್‌ದೇವ್, ಕಂಗನಾ ಅವರ ಹಿಂದಿನ ಜೀವನಶೈಲಿ ಮತ್ತು ನಡೆನುಡಿಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಟೀಕಿಸಿದ್ದರು.

ಸದ್ಯ ಈ ಇಬ್ಬರು ಪ್ರಭಾವಿ ವ್ಯಕ್ತಿಗಳ ನಡುವಿನ ಸಾರ್ವಜನಿಕ ಸಮರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಿಜೆಪಿ ಸಂಸದೆಯಾದ ಮೇಲೆಯೂ ಕಂಗನಾ ತಮ್ಮ ಆಕ್ರಮಣಕಾರಿ ಶೈಲಿಯನ್ನು ಕಾಯ್ದುಕೊಂಡಿದ್ದು, ಈ ಕಟು ವಾಕ್ಸಮರ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ.

ShareTweetSendShare
Join us on:

Related Posts

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

by Shwetha
August 20, 2026
0

ಹೊಸದೆಹಲಿ: ಭಾರತದ ಚುನಾವಣಾ ವ್ಯವಸ್ಥೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರವಾಗಿ...

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ರೋಗಕ್ಕೆ ತಕ್ಕ ಪೌಷ್ಟಿಕ ಆಹಾರ; 4 ಮಾದರಿಯ ಮೆನು ಸಿದ್ಧತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ರೋಗಕ್ಕೆ ತಕ್ಕ ಪೌಷ್ಟಿಕ ಆಹಾರ; 4 ಮಾದರಿಯ ಮೆನು ಸಿದ್ಧತೆ

by Shwetha
August 20, 2026
0

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇನ್ಮುಂದೆ ವಯಸ್ಸು, ಕಾಯಿಲೆ ಹಾಗೂ ಚಿಕಿತ್ಸೆಯ ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಮಾದರಿಯ ಪೌಷ್ಟಿಕ ಆಹಾರ ನೀಡಲು ಆರೋಗ್ಯ ಇಲಾಖೆ ಸಿದ್ಧತೆ...

ನನ್ನೊಳಗಿನ ಅತೀವ ನೋವೇ ನನ್ನನ್ನು ರಾಜಕೀಯಕ್ಕೆ ತಳ್ಳಿತು: ಆತ್ಮಚರಿತ್ರೆಯಲ್ಲಿ ಬದುಕಿನ ಕಹಿ ಸತ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

ನನ್ನೊಳಗಿನ ಅತೀವ ನೋವೇ ನನ್ನನ್ನು ರಾಜಕೀಯಕ್ಕೆ ತಳ್ಳಿತು: ಆತ್ಮಚರಿತ್ರೆಯಲ್ಲಿ ಬದುಕಿನ ಕಹಿ ಸತ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

by Shwetha
August 20, 2026
0

ಹೊಸದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಜೀವನದ ಅತ್ಯಂತ ಖಾಸಗಿ, ಭಾವುಕ ಮತ್ತು ರಾಜಕೀಯ ಪಯಣದ ರಹಸ್ಯಗಳನ್ನು ಜಗತ್ತಿನ ಮುಂದೆ ತೆರೆದಿಡಲು...

ಹೋಟೆಲ್, ರೆಸ್ಟೋರೆಂಟ್, ಮೆಡಿಕಲ್ ಶಾಪ್‌ಗಳಲ್ಲಿ QR ಕೋಡ್; ದೂರು ನೀಡುವುದು ಇನ್ಮುಂದೆ ಸುಲಭ

ಹೋಟೆಲ್, ರೆಸ್ಟೋರೆಂಟ್, ಮೆಡಿಕಲ್ ಶಾಪ್‌ಗಳಲ್ಲಿ QR ಕೋಡ್; ದೂರು ನೀಡುವುದು ಇನ್ಮುಂದೆ ಸುಲಭ

by Shwetha
August 20, 2026
0

ರಾಜಧಾನಿಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳು, ಪಬ್‌ಗಳು ಹಾಗೂ ವಿಶ್ವವಿದ್ಯಾಲಯಗಳ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಲು ಹೊಸ ವ್ಯವಸ್ಥೆ ಜಾರಿಗೆ...

ನನ್ನನ್ನು ದಲಿತ ಎನ್ನುವ ಕಾರಣಕ್ಕೇ ಟಾರ್ಗೆಟ್ ಮಾಡುತ್ತಿದ್ದಾರೆ: ಸಾಯುವವರೆಗೂ ದಲಿತನಾಗಿಯೇ ಇರುತ್ತೇನೆ, ರಾಜೀನಾಮೆ ಪಟ್ಟಿಗೆ ಸಂವಿಧಾನ ಹಿಡಿದು ನಾಗೇಂದ್ರ ತಿರುಗೇಟು

ನನ್ನನ್ನು ದಲಿತ ಎನ್ನುವ ಕಾರಣಕ್ಕೇ ಟಾರ್ಗೆಟ್ ಮಾಡುತ್ತಿದ್ದಾರೆ: ಸಾಯುವವರೆಗೂ ದಲಿತನಾಗಿಯೇ ಇರುತ್ತೇನೆ, ರಾಜೀನಾಮೆ ಪಟ್ಟಿಗೆ ಸಂವಿಧಾನ ಹಿಡಿದು ನಾಗೇಂದ್ರ ತಿರುಗೇಟು

by Shwetha
August 20, 2026
0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿಪಕ್ಷಗಳ ವಿರುದ್ಧ ಸಚಿವ ಬಿ ನಾಗೇಂದ್ರ ಭಾರಿ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram