ADVERTISEMENT
Friday, August 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶ್ರಾವಣ ಶನಿವಾರ ‘ಪಡಿ’ ಬೇಡುವುದು: ಆಚಾರ, ವಿಧಿ ಮತ್ತು ಮಹತ್ವ

admin by admin
August 21, 2026
in Astrology, Newsbeat, ಜ್ಯೋತಿಷ್ಯ
shravana-shanivara-padi-beduvudu-tradition-meaning-and-rituals-kannada

shravana-shanivara-padi-beduvudu-tradition-meaning-and-rituals-kannada

Share on FacebookShare on TwitterShare on WhatsappShare on Telegram

ಪಡಿ” ಬೇಡುವುದು ಅಂದರೆ ಪ್ರಮುಖವಾಗಿ ಅಕ್ಕಿ ಅಥವಾ ಧಾನ್ಯವನ್ನು ಬೇಡುವುದು. ಷ ಇದೊಂದು ಆಚರಣೆಯಾಗಿದೆ. ಶ್ರಾವಣ ಮಾಸದ ಶನಿವಾರಗಳಂದು ಶ್ರೀನಿವಾಸ, ವೆಂಕಟೇಶ ಲಕ್ಷ್ಮೀನರಸಿಂಹ ಸ್ವಾಮಿ ಈ ದೇವರುಗಳ ಒಕ್ಕಲಾದವರ ಮನೆಯವರು ಪಡಿ ಬೇಡುವ ಪದ್ಧತಿ ಇದೆ.
ಪಡಿಬೇಡಲು ಹೋಗುವರು “ಶ್ರೀ ಲಕ್ಷ್ಮಿ ವೆಂಕಟೇಶಾಯ ಮಂಗಳಂ” ಎಂದು ಹೇಳಿ ಪಡಿ ಪಡೆಯಬೇಕು.‌ ಪುಟ್ಟ ವಟು ಗಳಿಂದ ಹಿಡಿದು
ಹಿರಿಯ ವಯಸ್ಸಿನವರು ಆದಿಯಾಗಿ ಎಲ್ಲರೂ ಊರಿನ ನೆರೆಹೊರೆಯವರ ಮನೆಯಲ್ಲಿ ಪಡಿಬೇಡಿ ಪಡೆಯುವುದು ನಮ್ಮಲ್ಲಿ ನಡೆದು ಬಂದ ಸಂಪ್ರದಾಯವಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

Related posts

shravana-shukravara-varamahalakshmi-vrata-katha-and-pooja-vidhi-kannada

ಶ್ರಾವಣ  ಶುಕ್ರವಾರ ಮಹಾಲಕ್ಷ್ಮಿ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಪ್ರಭಾವವಿರಲಿ

August 21, 2026
varamahalakshmi-vrat-tantric-secrets-and-spiritual-meaning-kannada

ಲಕ್ಷ್ಮೀ ಮನೆಗೆ ಬರುವುದಿಲ್ಲ… ಅವಳು ಉಳಿಯುವ ಮನೆ ನಿರ್ಮಾಣವಾಗಬೇಕು

August 21, 2026

ಹೆಚ್ಚಾಗಿ ಮನೆಯ ಗಂಡು ಮಕ್ಕಳನ್ನು ಪಡಿ ಬೇಡಲು ಕಳಿಸುತ್ತಾರೆ. ಮಕ್ಕಳು ಹೋಗುವುದಿಲ್ಲ ಎಂದು ಹಠ ಹಿಡಿದರೆ ಜೊತೆಯಲ್ಲಿ ದೊಡ್ಡ ಮಕ್ಕಳು ಅಥವಾ ತಂದೆ- ತಾಯಿ ಹೋಗುತ್ತಾರೆ. ಕೆಲವು ಸಂಪ್ರದಾಯ ಸ್ಥರಲ್ಲಿ ಕಡ್ಡಾಯವಾಗಿ ಹಿರಿಯರು ಪಡಿ ಬೇಡಲು ಹೋಗುತ್ತಾರೆ. ಇದರ ಹಿಂದಿನ ಉದ್ದೇಶ ಹಲವು ಇದೆ. ಮನೆಗೆ ಬಂದ ಅತಿಥಿಗಳಿಗೆ ಗೌರವ ಕೊಡಬೇಕು. ಗುರು ಹಿರಿಯರನ್ನು ಕಂಡರೆ ಗೌರವ ಕೊಡುವುದು ಹಾಗೆ ಊರಿನ ಎಲ್ಲ ಮನೆಗಳ ಪರಿಚಯ ಆಗುವುದರೊಂದಿಗೆ ಮಕ್ಕಳು ನೇರವಾಗಿ ಸಂಪರ್ಕ ಪಡೆಯುತ್ತಾರೆ. ಇನ್ನು ಹಲವು ಕಾರಣಗಳು.

ಪಡಿ ಬೇಡುವ ಕ್ರಮ:- ಪಡಿಬೇಡಲು ಹೋಗುವ ಮಕ್ಕಳಿಗೆ ತಲೆಗೆ ಸ್ನಾನ ಮಾಡಿಸಿ ( ಎರೆದು) ಚಿಕ್ಕ ಮಕ್ಕಳಿಗೆ ದೊಡ್ಡ ಶಲ್ಯವನ್ನು ಬೆನ್ನಿನ ಭಾಗ ದಿಂದ ಮುಂದಕ್ಕೆ ತಂದು ಎರಡು ತುದಿಗಳನ್ನು ಜೋಡಿಸಿ (×) ಇಂಟು ಮಾರ್ಕ್ ನಂತೆ ಕುತ್ತಿಗೆ ಹಿಂಬಾಗಕ್ಕೆ ಕಟ್ಟಬೇಕು ಇದು ಮೈತುಂಬ ಬರುತ್ತದೆ ಜಾರಿ ಬೀಳುವುದಿಲ್ಲ. ಮಕ್ಕಳಿಗೆ ಬಿಳಿ ಗಂಧದಿಂದ U ಶೇಪ್ ನಲ್ಲಿ ಹಣೆಗೆ ಬರೆದು. ನಡುವೆ ಚಿಕ್ಕದಾಗಿ ಕೆಂಪು ನಾಮ ಹಾಕಬೇಕು.‌
ಹಿತ್ತಾಳೆ ಅಥವಾ ತಾಮ್ರ ತಂಬಿಗೆಗೆ ಗಂಧದಿಂದ ನಾಮ ತೆಗೆದು ಅರಿಶಿನ ಕುಂಕುಮ ಹಚ್ಚಬೇಕು. ಕೆಲವರು ತಂಬಿಗೆಯ ಕಂಠಕ್ಕೆ ಹೂಮಾಲೆಯನ್ನು ಸುತ್ತುತ್ತಾರೆ. ತಂಬಿಗೆ ಒಳಗೆ ಮೂರು ಮುಷ್ಟಿ ಅಕ್ಕಿ, ಬೆಲ್ಲ ಒಂದು ಕಾಯಿ ನ್ ಹಾಕಬೇಕು. ಬೆಳ್ಳಿ ಪಂಚಪಾತ್ರೆ ಅಂದ್ರೆ ಲೋಟ ಕಳಿಸಬಹುದು ಅದು ಅಕ್ಕಿ ಹಾಕುವಾಗ ಚೆಲ್ಲುತ್ತದೆ. ತಂಬಿಗೆ ಆದರೆ ಒಳ ಮುಷ್ಟಿಯಿಂದ ಹಾಕಿದ ಅಕ್ಕಿ ಒಳಗೆ ಸರಿಯಾಗಿ ಬೀಳುತ್ತದೆ. ತಯಾರು ಮಾಡಿ ಪಡಿ ಕಳಿಸುವ ಮಕ್ಕಳನ್ನು ದೇವರ ಮುಂದೆ ಮಕ್ಕಳನ್ನು ನಿಲ್ಲಿಸಿ ಒಂದೆರಡು ಸ್ತೋತ್ರಗಳನ್ನು ಹೇಳಿಸಿ “ಶ್ರೀ ಲಕ್ಷ್ಮಿ ವೆಂಕಟೇಶಾಯ ಮಂಗಳಂ” ಇದನ್ನು ಜೋರಾಗಿ ಮೂರು ಸಲ ಹೇಳಿಸಬೇಕು. ನಂತರ ದೇವರಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ ಪಡಿ ತರಲು ಹೊರಡಬೇಕು. ಊರಿನ ಹತ್ತಿರದಲ್ಲಿ ಮಠ ಇದ್ದರೆ ಮೊದಲು ಮಠಕ್ಕೆ ಹೋಗಿ ಪಡಿ ಹಾಕಿಸಿಕೊಂಡು ಮನೆ ಗಳಿಗೆ ಹೋಗಬೇಕು. ಊರಿನ ಎಲ್ಲಾ ಮನೆಗಳಿಗೂ ಹೋಗಬೇಕು ಆಗದಿದ್ದರೆ ಐದು ಮನೆಗಳಿಗೆ ಹೋಗಬೇಕು. ಪ್ರತಿ ಮನೆಯಲ್ಲೂ ಹೊಸಿಲ ಮುಂದೆ ನಿಂತು ಶ್ರೀ ಲಕ್ಷ್ಮಿ ವೆಂಕಟೇಶಾಯ ಮಂಗಳಂ, ಲಕ್ಷ್ಮಿ ನರಸಿಂಹಾಯ ಅಥವಾ ರಂಗನಾಥಾಯ ಮಂಗಳಂ ಎಂದ ಅವರವರ ಮನೆ ದೇವತೆಯನ್ನು ಹೇಳಿ ಕೂಗಬೇಕು.

ಪಡಿ ಹಾಕುವ ಕ್ರಮ: ಪಡಿ ಹಾಕುವವರು ತಟ್ಟೆ ಅಥವಾ ಬಟ್ಟಲಲ್ಲಿ ಅಕ್ಕಿ ಬೆಲ್ಲ- ದಕ್ಷಿಣೆ ತಂದು ಪಡಿ ಬೇಡಲು ಬಂದ ಮಕ್ಕಳ ಕೈಲಿ ಶ್ರೀ ಲಕ್ಷ್ಮಿ ವೆಂಕಟೇಶಾಯ ಮಂಗಳಂ ಎಂದು ಹೇಳಿಸಿ ನಂತರ ಮೂರು ಮುಷ್ಟಿ
ಅಕ್ಕಿ ಹಾಕಿ ಬೆಲ್ಲ ದಕ್ಷಿಣೆ ಹಾಕಬೇಕು.‌ ನಂತರ ಅದೇ ತಂಬಿಗೆಯಿಂದ ಅಕ್ಷತೆ ಯಷ್ಟು ಅಕ್ಕಿ ಕಾಳು ತೆಗೆದು ತಾವು ತಂದ ತಟ್ಟೆ ಅಥವಾ ಪಾತ್ರೆಗೆ ಹಾಕಿಕೊಂಡು ನಿತ್ಯ ಬಳಸುವ ಅಕ್ಕಿ ಡಬ್ಬಿಗೆ ಹಾಕಿಕೊಳ್ಳುತ್ತಾರೆ. ಅವರ ಮನೆಯಲ್ಲಿ ಎಂದೆಂದಿಗೂ ದಾನ ಧರ್ಮ ಮಾಡುವಷ್ಟು ಆಹಾರ ಸಾಮಗ್ರಿಗಳು ಅಕ್ಷಯವಾಗಲಿ ಎಂದು ಪ್ರಾರ್ಥಿಸುತ್ತಾರೆ.

ಪಡಿ ಬಂದ ಅಕ್ಕಿಯನ್ನು ಏನು ಮಾಡಬೇಕು: ಪ್ರತಿ ಶನಿವಾರ ಪಡಿ ಬಂದ ಅಕ್ಕಿ ಬೆಲ್ಲ ಸಂಗ್ರಹಿಸಿಟ್ಟು ಕೊನೆಯ ಶನಿವಾರ ಅಕ್ಕಿ ಬೆಲ್ಲ ಬೇಳೆ ಹಾಕಿ ಪಾಯಸ ಅಥವಾ ಸಿಹಿ ಹುಗ್ಗಿ ಇನ್ನೇನಾದರೂ ಸಿಹಿ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ಪ್ರಸಾದ ಊಟ ಮಾಡಬೇಕು. ಪಡಿಯಲ್ಲಿ ಹಾಕಿದ ಹಣ್ಣು ಹಂಪಲು ಸ್ವೀಟು ಏನಾದರೂ ಇದ್ದರೆ ಮಕ್ಕಳು ಮನೆಯವರು ತಿನ್ನಬಹುದು. ಬಂದ ದಕ್ಷಿಣೆ ಗಳನ್ನು ದೇವರ ಹುಂಡಿಗೆ ಹಾಕಬೇಕು.
ಹುಂಡಿ ತುಂಬುತ್ತಾ ಬಂದಂತೆ ಮನೆದೇವರ ಕ್ಷೇತ್ರಕ್ಕೆ ಹೋಗಿ ಸಾಮಾನ್ಯ ವಾಗಿ ತಿರುಪತಿ ಆಗಿರುತ್ತದೆ. ಹುಂಡಿಗೆ ಹಾಕಬೇಕು. ಹುಂಡಿಯನ್ನು ಭಗವಂತನಿಗೆ ಅರ್ಪಿಸಬೇಕು ಎಂಬ ನೆಪದಲ್ಲಿಯಾದರೂ ಮನೆ ದೇವರಿಗೆ ಹೋಗಿ ಬರಬೇಕಾಗುತ್ತದೆ.

ಪೌರಾಣಿಕ ಹಿನ್ನೆಲೆ: ಶ್ರೀನಿವಾಸ ಪದ್ಮಾವತಿಯರ ಕಲ್ಯಾಣೋತ್ಸವಕ್ಕೆ ಶ್ರೀನಿವಾಸ ಕುಬೇರನಿಂದ ಸಾಲ ಪಡೆದು, ಕಲಿಯುಗದ ಅಂತ್ಯದ ವರೆಗೂ ಬಡ್ಡಿ ಸಹಿತ ಸಾಲ ತೀರಿಸುತ್ತೇನೆ ಎಂದು ಮಾತು ಕೊಟ್ಟಿದ್ದಾ ನಂತೆ. ಅದರಂತೆ ಪಡಿಯಲ್ಲಿ ಬಂದ ದಕ್ಷಿಣೆ ಹಾಗೂ ಮನೆಗಳಲ್ಲಿ ಹರಕೆ ಕಟ್ಟಿದ ಕಾಣಿಕೆ ಹಾಗೂ ಹಬ್ಬ ಹುಣ್ಣಿಮೆಗಳಲ್ಲಿ ಮನೆ ದೇವರ ಹೆಸರು ಹೇಳಿ ಹುಂಡಿಗೆ ಹಾಕಿರುವ ಹಣ ಎಲ್ಲ ಒಟ್ಟಿಗೆ ಸೇರಿಸಿ ಒಮ್ಮೆ ಯಾತ್ರೆಗೆ ಹೋಗಿ ಭಗವಂತನಿಗೆ ಅರ್ಪಿಸಿದರೆ, ಭಗವಂತನಿಗೆ ಸಾಲ ತೀರಿಸಲು
ನಮ್ಮದು ಒಂದು ಕಿಂಚಿತ್ತ್ ಸೇವೆಯಿಂದ ಸಾಲವಾದರೂ ತೀರುತ್ತದೆ ಎಂಬ ನಂಬಿಕೆ. ತಿಮ್ಮಪ್ಪನಿಗೆ ಒಪ್ಪಿಸಿದರೆ ನಮ್ಮ ಸಂಪತ್ತು ಹೆಚ್ಚಿಸುತ್ತಾನೆ ಎಂಬ ನಂಬಿಕೆಯನ್ನು ಇದೆ ಶ್ರಾವಣ ಮಾಸದಲ್ಲಿ ದಾನ ಮಾಡಿದರೆ ಹೆಚ್ಚು ಪುಣ್ಯ ಎಂಬ ನಂಬಿಕೆ ಇದೆ. ಸಾಮಾನ್ಯ ಕುಟುಂಬದವರಿಗೆ ಹಾಗೂ ಏನಾದ ರೂ ದಾನ ಮಾಡಬೇಕು ಮನಸ್ಸು ತುಡಿಯುತ್ತಿರುವವರಿಗೆ ಎನ್ನುವವರಿಗೆ ಇದೊಂದು ಅವಕಾಶವಾಗಿರುತ್ತದೆ.

ಶ್ರಾವಣ ಮಾಸದಲ್ಲಿ ಶಿವಾರಾಧನೆ ಜೊತೆ ವಿಷ್ಣುವಿನ ಆರಾಧನೆಯನ್ನು ಮಾಡುತ್ತಾರೆ. ಶ್ರೀನಿವಾಸ ತನ್ನ ಅದ್ದೂರಿ ಮದುವೆ ಸಾಲ ಕೊಡುತ್ತಲೇ ಇದ್ದಾನೆ ಬಾಕಿ ಕೊಡುವುದು ಬೆಟ್ಟದಷ್ಟು ಇದೆ. ಶಿವನ ಕಥೆಯಂತೂ
“ಶಿವನು ಭಿಕ್ಷಕೆ ಬಂದ ನೀಡು ಬಾರೆ ತಂಗಿ ಇವನಂತ ಚೆಲುವರಿಲ್ಲ ನೋಡು ಬಾರೆ” ಎಂಬಂತೆ ಶಿವನು ಬೇಡಿ ತಿನ್ನುವನು. ಆದ್ದರಿಂದ ಶಿವ – ಕೇಶವರಿಗೆ ಶ್ರಾವಣ ಶನಿವಾರ ವಿಶೇಷವಾಗಿದೆ.

ಶನಿವಾರವೇ ಪಡಿ ಕೇಳಲು ಇನ್ನೊಂದು ಕಾರಣವಿದೆ. ಹಿಂದಿನ ಗುರು ಕುಲದಲ್ಲಿ ವಾರಕ್ಕೊಮ್ಮೆ ಮನೆಗಳಿಗೆ ಹೋಗಿ ಭಿಕ್ಷೆ ಸಂಗ್ರಹಿಸಿ ಬಂದ ಪದಾರ್ಥಗ ಳಿಂದಲೇ ವಾರಪೂರ್ತಿ ಕಳೆಯುತ್ತಿದ್ದರು. ಶ್ರಾವಣ ಮಾಸ ಉದ್ದಕ್ಕೂ ಹಬ್ಬಗಳ ಸಾಲು ಬಡತನ. ಹೀಗೆ ಪಡಿ ಬೇಡಿ ತಂದ ಆಹಾರ ಪದಾರ್ಥ ಗಳಿಂದ ಹಬ್ಬವನ್ನು ಆಚರಿಸುತ್ತಿದ್ದರು( ಇಂಥ ಶಾಸ್ತ್ರ – ಸಂಪ್ರದಾಯ ಇರುವುದರಿಂದ “ಪಡಿ” ಬೇಡಲು ಅಸಹ್ಯ ನಾಚಿಕೆ ಹಿಂಜರಿಕೆ ಇರುವುದಿಲ್ಲ. ಹಾಗೂ ಶ್ರಾವಣತಿಂಗಳಲ್ಲಿ ದಾನ- ಧರ್ಮ ಮಾಡುವುದರಿಂದ ಪುಣ್ಯ ಸಿಗುತ್ತದೆ ಎಂಬ ಭಾವವೂ ಇದ್ದು, ಸಾಧ್ಯವಾದಷ್ಟು ದಾನ ಧರ್ಮ ಮಾಡುತ್ತಿದ್ದರು. ಇದರಿಂದ ಅದೆಷ್ಟೋ ಬಡ ಕುಟುಂಬಗಳಿಗೆ ಈ ಮೂಲಕ ತಿನ್ನಲು ಊಟ ಸಿಗುತ್ತಿತ್ತು. ಶಾಸ್ತ್ರ ಸಂಪ್ರದಾಯಗಳು ಇರುವುದೆಲ್ಲಾ ಒಳ್ಳೆಯದಕ್ಕೆ- ದಾನ ಧರ್ಮ ಮಾಡುವುದೆಲ್ಲಾ ಒಳ್ಳೆಯದಕ್ಕೆ ಎಂಬ ನೀತಿಯಂತೆ ನಡೆದರೆ “ಅನ್ನದಾತೋ ಸುಖಿಭವ” ಎಂಬಂತಾಗುತ್ತದೆ

ಪಡಿ ಬೇಡುವುದರಲ್ಲಿ ನೀತಿ ಅಡಗಿದೆ:-
ಶ್ರಾವಣ ಮಾಸದಲ್ಲಿ ಪ್ರತಿ ಶನಿವಾರ ಪಡಿ ತರುವ ಪದ್ಧತಿ ಇದೆ. ಹೆಚ್ಚಾಗಿ ಮಕ್ಕಳ ಕೈಯಲ್ಲಿ ಮಾಡಿಸುತ್ತಾರೆ. ಭೌದ್ಧಿಕವಾಗಿ -ವೈಜ್ಞಾನಿಕವಾಗಿ, ಪಡಿ ಬೇಡುವುದರಿಂದ ಮಕ್ಕಳಲ್ಲಿ ನಾಚಿಕೆ -ಸಂಕೋಚ -ಮುಜುಗರ -ಕೀಳರಿಮೆ ದೂರವಾಗುತ್ತ ದೆ. ಹಾಗೆ ಕಠಿಣ ಪರಿಸ್ಥಿತಿ ಎದುರಾದಾಗ ಧೈರ್ಯದಿಂದ ಎದುರಿಸುವ
ದೃಢತೆ ಬರುತ್ತದೆ. “ಅನ್ನದ” ಮಹತ್ವ ತಿಳಿಯುತ್ತದೆ. ಮತ್ತೊಬ್ಬರ ಮನೆಯಲ್ಲಿ ಬೇಡುವಾಗ ಹಿರಿಯರಿಗೆ ಎಷ್ಟು ತಗ್ಗಿ ಬಗ್ಗಿ ನಡೆಯಬೇಕು ಎಂಬುದು ಮನವರಿಕೆ ಆಗುತ್ತದೆ. ಕಾಯುವ ತಾಳ್ಮೆ ಬರುತ್ತದೆ.ಪರಿಸ್ಥಿತಿಗಳ ಅನಿವಾರ್ಯತೆ ಸಂದರ್ಭದಲ್ಲಿ ಕಂಡವರ ಮುಂದೆ ಕೈ ಚಾಚುವುದಕ್ಕೆ ಬದಲಾಗಿ ಬೇಡಿಯಾದರು ತಿನ್ನಬಹುದು ಎಂಬ ಆತ್ಮವಿಶ್ವಾಸ ಇರುತ್ತದೆ. ಅಸಹ್ಯ ಎಂಬ ಕೀಳರಿಮೆ ದೂರವಾಗಿ ಬದುಕುವ ಕಲೆ ತಿಳಿಯುತ್ತದೆ. ಪಡಿ ಕೇಳಲು ಹೋಗಿರುವ, ಮನೆಯವರು ಸಂತೋಷದಿಂದ ಭಕ್ತಿಯಿಂದ ಪಡಿ ಹಾಕುವುದನ್ನು, ನೋಡಿದಾಗ, ತಾನು ಸಹ ಮುಂದೆ ದಾನ- ಧರ್ಮ ಸಂತೋಷದಿಂದ ನಿಸ್ವಾರ್ಥದಿಂದ ಮಾಡಬೇಕು ಎಂಬುದು ಗೊತ್ತಾಗು ತ್ತದೆ. ಊರಿನವರೊಂದಿಗೆ ನೆರೆಹೊರೆಯವರೊಂದಿಗೆ ಹಂಚಿಕೊಂಡು ತಿಂದು ಬಾಳಬೇಕು ಎಂಬ ಮನೋಭಾವ ಸಹ ಬೆಳೆಯುತ್ತದೆ

ಅಡುಗೆ:- ಶ್ರಾವಣ ಮಾಸದ ಪ್ರತಿ ಶನಿವಾರ ಪಾಯಸ ಅದು ಬಟವೇ ಪಾಯಸ, ಕೋಸಂಬರಿ, ವಿಶೇಷವಾಗಿ ಚಗಚೆ ಸೊಪ್ಪಿನ ಪಲ್ಯ ಮಾಡು ತ್ತಾರೆ.ಆಷಾಢದ ಮಳೆ ಕಡಿಮೆಯಾಗಿ ಎಲ್ಲೆಂದರಲ್ಲಿ ಚಿಗುರಾದ ಚಗಚೆ ಸೊಪ್ಪು ಗಿಡ ಬೆಳೆದಿರುತ್ತದೆ. ಇದರ ಚಿಗುರನ್ನು ಬಿಡಿಸಿ ಬುಟ್ಟಿ ತುಂಬ ತಂದು ತೊಳೆದು ಬಿಡಿಸಿ ಒಗ್ಗರಣೆ ಮಾಡಿದ ಬಾಂಡ್ಲಿಗೆ ಬಿಡಿಸಿದ ಸೊಪ್ಪನ್ನು ಹಾಕಿ ಬಾಡಿಸಿ ಉಪ್ಪು- ಕಾಯಿ ತುರಿ- ಚಿಟಿಕೆ ಸಕ್ಕರೆ ಹಾಕಿ ಕೈಯಾಡಿದರೆ ರುಚಿಕಟ್ಟಾದ ಪಲ್ಯ ಆಗುತ್ತದೆ. ಹಾಗೆ ಅಕ್ಕಿ ತರಿ “ಅಂಬಲಿ” ಮಾಡುತ್ತಾರೆ. ಒಗ್ಗರಣೆ ಮಾಡಿದ ಪಾತ್ರೆಗೆ ಅಕ್ಕಿ ತರಿ ಹಾಕಿ (ಮೊದಲೇ ತೊಳೆದು ಆರಿಸಿ ಅಕ್ಕಿ ತರೆ ಮಾಡಿರುತ್ತಾರೆ). ಒಂದು ಕಪ್ಪಿಗೆ ಎರಡು ಕಪ್ಪಿನಷ್ಟು ನೀರು ಹಾಕಿ( ಬೇಕಾದರೆ ನೀರು ಸೇರಿಸಬಹುದು) ಉಪ್ಪು ಹಾಕಿ ಪಾಯಸದ ಹದಕ್ಕೆ ಬೆಂದಾಗ ಕೊತ್ತಂಬರಿ ಕರಿಬೇವು ಹಾಕಿ ಕೈ ಆಡಿಸಿ ಕೆಳಗಿಳಿಸಿ ಆರಿದ ಮೇಲೆ ಒಂದು ಸೌಟು ಮೊಸರು ಹಾಕಿ ಬಡಿಸುತ್ತಾರೆ ತಿನ್ನುವಾಗ ಆಹಾ ಎನ್ನದೆ ಇರಲು ಸಾಧ್ಯವಿಲ್ಲ. ಜೊತೆಗೆ ಏನಾದರೂ ಒಂದು ಕರಿದ ತಿಂಡಿ ಮಾಡುತ್ತಾರೆ. ಗುಬ್ಬಿ ಬಾಳೆ ಎಲೆ ಬೋಂಡಾ. ಕೆಸುವಿನ ಸೊಪ್ಪಿನ ಪತ್ರೊಡೆ, ಹಲಸಿನ ಹಣ್ಣಿನ ಪಾಯಸ,
ಮುಳಕ, ಹಲಸಿನ ತೊಳೆ ಪಲ್ಯ, ಬೇಯಿಸಿದ ಸಿಹಿಕಾರ- ಕಡುಬು ಸೌತೆಕಾಯಿ, ಅರಿಶಿನದ ಎಲೆ ಅಥವಾ ಚೀನಿಕಾಯಿ ಕಡಬು. ಶ್ರಾವಣ ಮಾಸದಲ್ಲಿ ಈ ತರಹದ ಅಡುಗೆಗಳೇ ಹೆಚ್ಚು ಮಾಡುತ್ತಾರೆ. ಹಾಲವಾಣ ಗಿಡದ ಮೊಗ್ಗಿನಿಂದ ಪಲ್ಯ, ಒಮ್ಮೊಮ್ಮೆ ಕಳಲೆ ಸಿಕ್ಕರೆ ಅದರ ಪಲ್ಯ ಮಾಡುತ್ತಿದ್ದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಶ್ರಾವಣ ಬಂತು ಕಾಡಿಗೆ -ಬಂತು ನಾಡಿಗೆ- ಬಂದು ಬೀಡಿಗೆ- ಶ್ರಾವಣ ಬಂತು, ಎಂಬಂತೆ ಅಡಿಗೆ ತಿಂಡಿ ಹಬ್ಬದ ಆಚರಣೆಗಳು, ವ್ರತ ಕಥೆಗಳಿಗೆ
ಹೇಳಿ ಮಾಡಿಸಿದ ಮಾಸ “ಶ್ರಾವಣ ಮಾಸ”

ಕಲ್ಯಾಣಾದ್ಭುತಗಾತ್ರಾಯ
ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ
ಶ್ರೀನಿವಾಸಾಯ ಮಂಗಳಂ||

ವೆಂಕಟಾದ್ರಿಸಮಂ ಸ್ಥಾನಂ
ಬ್ರಹ್ಮಾಂಡೇ ನಾಸ್ತಿ ಮಿಂಚಿನ|
ವೇಂಕಟೇಶೋಸಮೋ ದೇವೋ
ನ ಭೂತೋ ನ ಭವಿಷ್ಯತಿ|
ಎತೇನ ಸತ್ಯ ವಾಕ್ಯೇನ
ಸರ್ವಾರ್ಥಾನ್
ಸಾದಯಾಮ್ಯಹಂ ||

Tags: #ShravanaShanivara #PadiBeduvudu #KannadaTradition #ShravanaMasa #VenkateshwaraSwamy #KannadaCulture #HinduCustoms #TraditionAndCulture #SpiritualKannada #ShravanaSpecial
ShareTweetSendShare
Join us on:

Related Posts

shravana-shukravara-varamahalakshmi-vrata-katha-and-pooja-vidhi-kannada

ಶ್ರಾವಣ  ಶುಕ್ರವಾರ ಮಹಾಲಕ್ಷ್ಮಿ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಪ್ರಭಾವವಿರಲಿ

by admin
August 21, 2026
0

ಶ್ರಾವಣ  ಶುಕ್ರವಾರ ಮಹಾಲಕ್ಷ್ಮಿ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಪ್ರಭಾವವಿರಲಿ ಜಯಮಂಗಲಂ ನಿತ್ಯ ಶುಭಮಂಗಲಂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್...

varamahalakshmi-vrat-tantric-secrets-and-spiritual-meaning-kannada

ಲಕ್ಷ್ಮೀ ಮನೆಗೆ ಬರುವುದಿಲ್ಲ… ಅವಳು ಉಳಿಯುವ ಮನೆ ನಿರ್ಮಾಣವಾಗಬೇಕು

by admin
August 21, 2026
0

ವರಮಹಾಲಕ್ಷ್ಮೀ ವ್ರತದ ತಾಂತ್ರಿಕ ರಹಸ್ಯ ವರಮಹಾಲಕ್ಷ್ಮೀ ವ್ರತದ ಸಂಜೆ ಊರಿನ ಮನೆಗಳಲ್ಲೆಲ್ಲ ದೀಪಗಳು ಉರಿಯುತ್ತಿದ್ದವು. ಬಾಗಿಲಿಗೆ ತೋರಣ, ನೆಲದ ಮೇಲೆ ರಂಗೋಲಿ, ಬೆಳ್ಳಿಯ ಪಾತ್ರೆಗಳು, ಹೂವು-ಆಭರಣಗಳು ಹಾಗೂ...

ನೂರಕ್ಕೆ ನೂರು ಸತ್ಯ ಹೇಳ್ತೇನೆ: ನಟ ದರ್ಶನ್ ಗ್ಯಾಂಗ್‌ಗೆ ಅಪ್ರೂವರ್ ಶಾಕ್ ನೀಡಿದ ಪ್ರದೋಷ್!

ನೂರಕ್ಕೆ ನೂರು ಸತ್ಯ ಹೇಳ್ತೇನೆ: ನಟ ದರ್ಶನ್ ಗ್ಯಾಂಗ್‌ಗೆ ಅಪ್ರೂವರ್ ಶಾಕ್ ನೀಡಿದ ಪ್ರದೋಷ್!

by Shwetha
August 21, 2026
0

ಬೆಂಗಳೂರು: ರಾಜಧಾನಿ ಬೆಂಗಳೂರನ್ನಷ್ಟೇ ಅಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಅತ್ಯಂತ ಮಹತ್ವದ ಮತ್ತು ಸ್ಫೋಟಕ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ...

ವಾಲ್ಮೀಕಿ ನಿಗಮ ಪ್ರಕರಣ: ಸಚಿವ ಬಿ. ನಾಗೇಂದ್ರಗೆ ರಿಲೀಫ್; ಜಾಮೀನು ಷರತ್ತು ರದ್ದು

ವಾಲ್ಮೀಕಿ ನಿಗಮ ಪ್ರಕರಣ: ಸಚಿವ ಬಿ. ನಾಗೇಂದ್ರಗೆ ರಿಲೀಫ್; ಜಾಮೀನು ಷರತ್ತು ರದ್ದು

by Shwetha
August 21, 2026
0

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಜಾಮೀನು ನೀಡುವ ವೇಳೆ ವಿಧಿಸಲಾಗಿದ್ದ...

‘ರಾಜೀವ್ ಗಾಂಧಿ ನನ್ನ ರೋಲ್ ಮಾಡೆಲ್’: ಈಶ್ವರ ಖಂಡ್ರೆ

‘ರಾಜೀವ್ ಗಾಂಧಿ ನನ್ನ ರೋಲ್ ಮಾಡೆಲ್’: ಈಶ್ವರ ಖಂಡ್ರೆ

by Shwetha
August 21, 2026
0

ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಂಪರ್ಕ ಕ್ರಾಂತಿಯ ಮೂಲಕ ಆಧುನಿಕ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು ಎಂದು ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram