ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರಕ್ಕಾಗಿ ಇಡೀ ಭಾರತೀಯ ಚತ್ರರಂಗವೇ ಕಾದು ನೋಡುತ್ತಿದೆ. ಲಾಕ್ ಡೌನ್ ನಿಂದ ಶೂಟಿಂಗ್ ಗೆ ಬ್ರೇಕ್ ನೀಡಿದ್ದ ಚಿತ್ರತಂಡ ಸದ್ಯ ಸಿನಿಮಾದ ಕೆಲಸಗಳಲ್ಲಿ ಬ್ಯೂಸಿ ಆಗಿದೆ. ಇದರ ಮಧ್ಯೆ ಯಶ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ನಿನ್ನೆಗೆ 12 ವರ್ಷ ಪೂರೈಸಿದ ಹಿನ್ನೆಲೆ ಕೆಜಿಎಫ್-2 ಚಿತ್ರತಂಡ ಯಶ್ ರ ಎಕ್ಸ್ ಕ್ಲ್ಯೂಸಿವ್ ಫೋಟೋವೊಂದು ರಿಲೀಸ್ ಮಾಡಿದೆ.
ಕೆಜಿಎಫ್ -2 ಚಿತ್ರದ ಅಪ್ಡೇಟ್ ಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಭಿಮಾನಿಗಳು ರಾಖಿಭಾಯ್ ಲುಕ್ ನೋಡಿ ಫುಲ್ ಫಿದಾ ಆಗಿದ್ದಾರೆ. ಫೋಟೋದಲ್ಲಿ ಬ್ಲೇಝರ್ ಹಾಕಿ ಕುಳಿತಿರುವ ಯಶ್ ರ ರಗಡ್ ಲುಕ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸದ್ಯ ರಾಖಿಭಾಯ್ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.








