ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

Shwetha by Shwetha
August 29, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಟಿ. ರವಿ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಾಲ್ಮೀಕಿ ನಿಗಮದ ನೂರಾರು ಕೋಟಿ ರೂಪಾಯಿ ಹಣ ಕೇವಲ ಅಕ್ರಮವಾಗಿ ವರ್ಗಾವಣೆಯಾಗಿಲ್ಲ, ಬದಲಾಗಿ ಅದು ಸಚಿವರ ಆಪ್ತ ಸಂಬಂಧಗಳ ಖಾತೆಗಳಿಗೂ ಹರಿದಿದೆ ಎಂದು ರವಿ ಬಾಂಬ್ ಸಿಡಿಸಿದ್ದಾರೆ.

ಕಟ್ಕೊಂಡೋರು ಮತ್ತು ಇಟ್ಕೊಂಡೋರ ಖಾತೆಗೆ ಹಣ ವರ್ಗಾವಣೆ

Related posts

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

August 29, 2026
ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

August 29, 2026

ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಲ್ಲಿ ಹೊರಬರುತ್ತಿರುವ ಮಾಹಿತಿಗಳನ್ನು ಉಲ್ಲೇಖಿಸಿ ಗಂಭೀರ ಆರೋಪ ಮಾಡಿದರು. ವಾಲ್ಮೀಕಿ ನಿಗಮದ ಲೂಟಿಯಾದ ಹಣ ಕಟ್ಕೊಂಡವರ ಖಾತೆಗೂ ಹೋಗಿದೆ, ಹಾಗೆಯೇ ಇಟ್ಕೊಂಡವರ ಖಾತೆಗೂ ಹೋಗಿದೆ. ಆದರೆ ಯಾರು ಯಾರನ್ನು ಇಟ್ಕೊಂಡಿದ್ದಾರೆ ಎಂದು ನನ್ನನ್ನು ಕೇಳಬೇಡಿ. ಈ ವಿಚಾರ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಲಿದೆ ಎಂದು ವ್ಯಂಗ್ಯವಾಡಿದರು. 187 ಕೋಟಿ ರೂಪಾಯಿ ಹಗರಣದಲ್ಲಿ ಹಣದ ಹರಿವು ಎಲ್ಲೆಲ್ಲಿಗೆ ಹೋಗಿದೆ ಎಂಬುದು ಇಡಿ ತನಿಖೆಯಿಂದ ಸಂಪೂರ್ಣವಾಗಿ ಬಯಲಾಗಲಿದೆ ಎಂದರು.

ಎಸ್‌ಐಟಿ ತನಿಖೆ ಕೇವಲ ತಿಪ್ಪೆ ಸಾರಿಸುವ ಕೆಲಸ

ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಮೇಲೆ ನಂಬಿಕೆ ಇಲ್ಲದ ಸಿ.ಟಿ. ರವಿ, ಎಸ್‌ಐಟಿ ಕೇವಲ ಪ್ರಕರಣವನ್ನು ಮುಚ್ಚಿ ಹಾಕುವ ಅಥವಾ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಸಿಐಡಿ ಹಾದಿಯಲ್ಲೇ ಎಸ್‌ಐಟಿ ಸಾಗುತ್ತಿದೆ. ಆದರೆ ಸಿಬಿಐ ಮತ್ತು ಇಡಿ ಸಂಸ್ಥೆಗಳು ಹಾಗಲ್ಲ. ಅವು ಹಗರಣದ ಬೇರುಗಳನ್ನು ಹುಡುಕಿ ತೆಗೆಯುತ್ತವೆ. ಕೊನೆಯವರೆಗೂ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿವೆ. ಇಲ್ಲವಾದರೆ ರಾಜ್ಯದಲ್ಲಿ ಲೂಟಿ ಹೊಡೆಯುವವರಿಗೆ ಸರ್ಕಾರವೇ ಪರವಾನಗಿ ನೀಡಿದಂತಾಗುತ್ತದೆ ಎಂದು ಕಿಡಿಕಾರಿದರು.

ಭ್ರಷ್ಟರ ಪರ ಕಾಂಗ್ರೆಸ್ ವಕಾಲತ್ತು

ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ದೂರಿದ ಅವರು, ಅಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರ್ಕಾರ ಭ್ರಷ್ಟ ಸಚಿವರನ್ನು ರಕ್ಷಿಸಲು ಮುಂದಾಗಿತ್ತು. ಅಪರಾಧ ಸಾಬೀತಾಗಿಲ್ಲ ಎಂಬ ಕುಂಟು ನೆಪ ಹೇಳಿ ಸಮರ್ಥಿಸಿಕೊಳ್ಳುವುದು ಸರ್ಕಾರದ ಭ್ರಷ್ಟ ನೀತಿಯನ್ನು ತೋರಿಸುತ್ತದೆ. ಬಿ. ನಾಗೇಂದ್ರ ಅವರ ರಾಜೀನಾಮೆ ದೊಡ್ಡ ತ್ಯಾಗವೇನಲ್ಲ. ಲೂಟಿ ಮಾಡಿದ ಮೇಲೆ ರಾಜೀನಾಮೆ ನೀಡಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬುದು ಪ್ರಕೃತಿಯ ನಿಯಮ ಎಂದು ಅವರು ಎಚ್ಚರಿಸಿದರು.

ಬಡ ದಲಿತರ ಪರ ಬಿಜೆಪಿ, ಭ್ರಷ್ಟರ ಪರ ಕಾಂಗ್ರೆಸ್

ಬಿಜೆಪಿ ಯಾವಾಗಲೂ ಬಡ ಮತ್ತು ಪ್ರಾಮಾಣಿಕ ದಲಿತರ ಪರವಾಗಿ ಇರುತ್ತದೆ. ಆದರೆ ಕಾಂಗ್ರೆಸ್ ಭ್ರಷ್ಟ ದಲಿತ ನಾಯಕರ ಪರವಾಗಿ ನಿಂತು ವಕಾಲತ್ತು ವಹಿಸುತ್ತಿದೆ. ಅಮಾಯಕ ಅಧಿಕಾರಿಯ ಸಾವಿಗೆ ಕಾರಣವಾದವರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಆಗ್ರಹ. ಇದಕ್ಕಾಗಿಯೇ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಹಿಂದೆ ಜೈಲು ಶಿಕ್ಷೆ ಅನುಭವಿಸಿ ಬಂದವರನ್ನೇ ಮತ್ತೆ ಮಂತ್ರಿ ಮಾಡಿ ಜನರಿಗೆ ತಪ್ಪು ಸಂದೇಶ ನೀಡಲಾಗಿತ್ತು. ಈಗ ಎಲ್ಲವೂ ಸಾಕ್ಷ್ಯ ಸಮೇತ ಹೊರಬರುತ್ತಿದೆ. ಸಚಿವರ ಮೌಖಿಕ ಸೂಚನೆ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಹಣ ವರ್ಗಾವಣೆ ಸಾಧ್ಯವಿಲ್ಲ ಎಂಬುದು ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರ ಡೆತ್ ನೋಟ್‌ನಿಂದಲೇ ಸ್ಪಷ್ಟವಾಗಿದೆ ಎಂದು ಸಿ.ಟಿ. ರವಿ ಗುಡುಗಿದರು.

ShareTweetSendShare
Join us on:

Related Posts

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

by Shwetha
August 29, 2026
0

ದೆಹಲಿ ಮತ್ತು ಬೆಂಗಳೂರು ನಡುವೆ ಈಗ ಹೊಸ ರಾಜಕೀಯ ಸಂಚಲನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ...

ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

by Shwetha
August 29, 2026
0

ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಕುರಿತು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಿನಿಮಾಗಳಲ್ಲಿ ಮಹಿಳೆಯರನ್ನು ಚಿತ್ರಿಸುವ ರೀತಿಯ...

ಬೇರೆಯವರ ಜೊತೆ ಮಾತಾಡಿದಂಗೆ ನನ್ ಹತ್ರ ಮಾತಾಡ್ಬೇಡಿ: ಅಕ್ರಮ ಮುಚ್ಚಿಹಾಕಲು ಗೃಹ ಇಲಾಖೆ ತಗೊಂಡ್ರಾ- ಪ್ರಿಯಾಂಕ್ ಖರ್ಗೆಗೆ HD ಕುಮಾರಸ್ವಾಮಿ ಖಡಕ್ ವಾರ್ನಿಂಗ್

ಬೇರೆಯವರ ಜೊತೆ ಮಾತಾಡಿದಂಗೆ ನನ್ ಹತ್ರ ಮಾತಾಡ್ಬೇಡಿ: ಅಕ್ರಮ ಮುಚ್ಚಿಹಾಕಲು ಗೃಹ ಇಲಾಖೆ ತಗೊಂಡ್ರಾ- ಪ್ರಿಯಾಂಕ್ ಖರ್ಗೆಗೆ HD ಕುಮಾರಸ್ವಾಮಿ ಖಡಕ್ ವಾರ್ನಿಂಗ್

by Shwetha
August 29, 2026
0

ಮೈಸೂರು: ರಾಜ್ಯ ರಾಜಕಾರಣದಲ್ಲಿ ಈಗ ಕೆಪಿಎಸ್ಸಿ ಅಕ್ರಮದ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಭೀಕರ ವಾಕ್ಸಮರ ಶುರುವಾಗಿದೆ....

‘ಈ ನೆಗೆಟಿವಿಟಿ ನನ್ನ ಮಗನಿಗೆ ಕೌಂಟ್ ಆಗಲ್ಲ’: ಟಾಕ್ಸಿಕ್ ಟ್ರೋಲ್‌ಗಳಿಗೆ ಯಶ್ ತಾಯಿ ಖಡಕ್ ತಿರುಗೇಟು

‘ಈ ನೆಗೆಟಿವಿಟಿ ನನ್ನ ಮಗನಿಗೆ ಕೌಂಟ್ ಆಗಲ್ಲ’: ಟಾಕ್ಸಿಕ್ ಟ್ರೋಲ್‌ಗಳಿಗೆ ಯಶ್ ತಾಯಿ ಖಡಕ್ ತಿರುಗೇಟು

by Shwetha
August 29, 2026
0

ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಕುರಿತು ಕೇಳಿಬರುತ್ತಿರುವ ನೆಗೆಟಿವ್ ಕಾಮೆಂಟ್‌ಗಳು ಹಾಗೂ ಟ್ರೋಲ್‌ಗಳಿಗೆ ನಟ ಯಶ್ ಅವರ ತಾಯಿ ಪುಷ್ಪಾ...

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

ವಾಲ್ಮೀಕಿ ಹಗರಣ ಬಿಜೆಪಿಯ ಷಡ್ಯಂತ್ರ:ಕಣ್ಣೀರಿಟ್ಟ ಬಿ ನಾಗೇಂದ್ರಗೆ ಬಿಕೆ ಹರಿಪ್ರಸಾದ್ ಸಾಂತ್ವನ ನಡುನೀರಲ್ಲಿ ಕೈಬಿಡಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷ

by Shwetha
August 29, 2026
0

ಬೆಂಗಳೂರು: ವಾಲ್ಮೀಕಿ ನಿಗಮದ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಣ್ಣೀರಿಟ್ಟ ಬಿ ನಾಗೇಂದ್ರ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಭರವಸೆಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram