ADVERTISEMENT
Friday, September 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಿಎಂ ಆಗಿದ್ದಾಗ ಕುಮಾರಸ್ವಾಮಿ 2 ದಿನ ನಾಪತ್ತೆಯಾಗಿದ್ದರು: ಮಗನನ್ನು ಹುಡುಕಿಕೊಡು ಎಂದು ದೇವೇಗೌಡರೇ ನನಗೆ ಟಾಸ್ಕ್ ಕೊಟ್ಟಿದ್ದರು; ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಆಕ್ರೋಶ

Shwetha by Shwetha
September 4, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಸಚಿವ ಚಲುವರಾಯಸ್ವಾಮಿ ನಡುವಿನ ವಾಕ್ಸಮರ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ದಿನಗಳ ಕಾಲ ನಾಪತ್ತೆಯಾಗಿದ್ದರು ಮತ್ತು ಅವರನ್ನು ಹುಡುಕುವ ಜವಾಬ್ದಾರಿಯನ್ನು ಸ್ವತಃ ಎಚ್ ಡಿ ದೇವೇಗೌಡರೇ ನನಗೆ ನೀಡಿದ್ದರು ಎಂಬ ಆಘಾತಕಾರಿ ವಿಷಯವನ್ನು ಸಚಿವ ಚಲುವರಾಯಸ್ವಾಮಿ ಬಹಿರಂಗಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಾರ ಬಾಗಿಲು ತಟ್ಟಲು ಹೋಗಿದ್ದರು ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅಂದು ದೇವೇಗೌಡರು ನನ್ನನ್ನು ಕರೆದು, ನನ್ನ ಮಗ ಕಾಣುತ್ತಿಲ್ಲ, ಎಲ್ಲಿದ್ದಾನೋ ಹುಡುಕಿ ವಿಧಾನಸಭೆಗೆ ಕರೆದುಕೊಂಡು ಬಾ, ಇಲ್ಲದಿದ್ದರೆ ನನ್ನ ಮರ್ಯಾದೆ ಹೋಗುತ್ತದೆ ಎಂದು ಬೇಡಿಕೊಂಡಿದ್ದರು. ಅವರ ಮರ್ಯಾದೆ ಉಳಿಸಲು ನಾನು ಬೆಳಿಗ್ಗೆ 9 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ ಎಂದು ವಿವರಿಸಿದರು.

Related posts

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

September 4, 2026
KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಆರೋಪಿ ಮನೆ ಮೇಲೆ ದಾಳಿ, 15 ಗ್ರೂಪ್‌-ಬಿ ಹಾಲ್ ಟಿಕೆಟ್‌ಗಳು ಪತ್ತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಆರೋಪಿ ಮನೆ ಮೇಲೆ ದಾಳಿ, 15 ಗ್ರೂಪ್‌-ಬಿ ಹಾಲ್ ಟಿಕೆಟ್‌ಗಳು ಪತ್ತೆ

September 4, 2026

ಚರ್ಚೆಗೆ ಬರಲಿ ಎಂದು ಸವಾಲು

ತಾನು 9 ಗಂಟೆಗೆ ಬಾಗಿಲು ತಟ್ಟಿದ್ದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಬಾಗಿಲು ತಟ್ಟಿದ ವಿಚಾರವನ್ನು ನಾನು ಬಿಚ್ಚಿಡಲು ಆರಂಭಿಸಿದರೆ ಅವರು ತಡೆದುಕೊಳ್ಳಲು ಸಾಧ್ಯವಿಲ್ಲ. ಕುಮಾರಸ್ವಾಮಿ ಅವರಿಗೆ ಧೈರ್ಯವಿದ್ದರೆ ಯಾವುದೇ ಮಾಧ್ಯಮದ ಮುಂದೆ ಅಥವಾ ವಿಧಾನಸೌಧಕ್ಕೆ ಬಂದು ಈ ಬಗ್ಗೆ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು. ಅಂದು ಸಿಎಂ ನಾಪತ್ತೆಯಾದಾಗ ದೇವೇಗೌಡರು ನನ್ನ ಸಹಾಯ ಕೋರಿದ್ದು ಸುಳ್ಳಾದರೆ ಅವರು ಸ್ಪಷ್ಟನೆ ನೀಡಲಿ ಎಂದರು.

ನಿದ್ದೆಯಿಲ್ಲದ ರಾತ್ರಿಗಳು

ಕುಮಾರಸ್ವಾಮಿ ಅವರಿಗೆ ಈಗ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕನಸಿನಲ್ಲೂ ಅವರಿಗೆ ಡಿ ಕೆ ಶಿವಕುಮಾರ್, ಚೆಲುವರಾಯಸ್ವಾಮಿ ಹಾಗೂ ಬಾಲಕೃಷ್ಣ ಅವರೇ ಕಾಣುತ್ತಿದ್ದಾರೆ. ನಮಗೆ ಪಕ್ಷ ದೊಡ್ಡ ಜವಾಬ್ದಾರಿಗಳನ್ನು ನೀಡಿದೆ, ಆದರೆ ಅವರಿಗೆ ಕೇಂದ್ರದಲ್ಲಿ ಅಂದುಕೊಂಡ ಖಾತೆ ಸಿಗದಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಹೊಟ್ಟೆ ಉರಿಗೆ ನಮ್ಮಲ್ಲಿ ಮದ್ದಿಲ್ಲ ಎಂದು ಲೇವಡಿ ಮಾಡಿದರು.

ಹಿಟ್ ಅಂಡ್ ರನ್ ರಾಜಕಾರಣ ಬೇಡ

ತಮ್ಮ ವಿರುದ್ಧ ಯಾವುದೇ ದಾಖಲೆಗಳಿಲ್ಲದಿದ್ದರೂ ಸುಮ್ಮನೆ ಆರೋಪ ಮಾಡುವುದನ್ನು ಕುಮಾರಸ್ವಾಮಿ ನಿಲ್ಲಿಸಲಿ. ಅವರ ರೀತಿ ಹಿಟ್ ಅಂಡ್ ರನ್ ಮಾಡುವುದು ನನಗೆ ಬರುವುದಿಲ್ಲ. ಅವರ ಬಳಿ ದಾಖಲೆಗಳಿದ್ದರೆ ತೆಗೆದುಕೊಂಡು ಬರಲಿ, ನಾನು ಕೂಡ ನನ್ನ ಬಳಿ ಇರುವ ದಾಖಲೆಗಳೊಂದಿಗೆ ಸಿದ್ಧನಿದ್ದೇನೆ. ಕೇಂದ್ರ ಸಚಿವರಾಗಿ ಕೆಲಸ ಮಾಡುವುದನ್ನು ಬಿಟ್ಟು ರಾಜ್ಯದಲ್ಲಿ ಕೇವಲ ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಈಗ ಭಾರಿ ಸಂಚಲನ ಮೂಡಿಸಿದೆ.

ShareTweetSendShare
Join us on:

Related Posts

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

by Shwetha
September 4, 2026
0

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಭಾರತೀಯ ಚಿತ್ರರಂಗದ ಅನಭಿಷಿಕ್ತ ಸುಲ್ತಾನಿ. ಖ್ಯಾತ ರಾಷ್ಟ್ರೀಯ ನಿಯತಕಾಲಿಕೆ ಇಂಡಿಯಾ ಟುಡೇ ದೇಶದ ಟಾಪ್ ನಾಯಕಿಯರ ಪಟ್ಟಿಯನ್ನು ಪ್ರಕಟಿಸಿದ್ದು, ರಶ್ಮಿಕಾ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಆರೋಪಿ ಮನೆ ಮೇಲೆ ದಾಳಿ, 15 ಗ್ರೂಪ್‌-ಬಿ ಹಾಲ್ ಟಿಕೆಟ್‌ಗಳು ಪತ್ತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಆರೋಪಿ ಮನೆ ಮೇಲೆ ದಾಳಿ, 15 ಗ್ರೂಪ್‌-ಬಿ ಹಾಲ್ ಟಿಕೆಟ್‌ಗಳು ಪತ್ತೆ

by Shwetha
September 4, 2026
0

KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ CID ಅಧಿಕಾರಿಗಳಿಗೆ ಮತ್ತಷ್ಟು ಮಹತ್ವದ ದಾಖಲೆಗಳು ಸಿಕ್ಕಿವೆ. ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಬಸವರಾಜ್ ಕನ್ನಾಳೆ ಅವರ ಬೆಂಗಳೂರಿನ ಸಂಜಯನಗರದಲ್ಲಿರುವ...

ಮರಿ ಖರ್ಗೆ ಎಂದು ಅಣಕಿಸಿದ ಆರ್ ಅಶೋಕ್ ಗೆ ಪ್ರಿಯಾಂಕ್ ತಿರುಗೇಟು: ಮರಿ ಅಶೋಕ್ ಯಾಕೆ ಇನ್ನೂ ಗಣವೇಶ ಧರಿಸಿಲ್ಲ ಎಂದು ಪ್ರಶ್ನೆ

ಮರಿ ಖರ್ಗೆ ಎಂದು ಅಣಕಿಸಿದ ಆರ್ ಅಶೋಕ್ ಗೆ ಪ್ರಿಯಾಂಕ್ ತಿರುಗೇಟು: ಮರಿ ಅಶೋಕ್ ಯಾಕೆ ಇನ್ನೂ ಗಣವೇಶ ಧರಿಸಿಲ್ಲ ಎಂದು ಪ್ರಶ್ನೆ

by Shwetha
September 4, 2026
0

ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಈಗ ಮರಿ ಹಾಗೂ ಹಿರಿ ಮಟ್ಟಕ್ಕೆ ತಲುಪಿದೆ. ಪ್ರಿಯಾಂಕ್ ಖರ್ಗೆ...

ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ: ಸೆ. 4ರಂದು GBA ವ್ಯಾಪ್ತಿಯಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧ

ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ: ಸೆ. 4ರಂದು GBA ವ್ಯಾಪ್ತಿಯಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧ

by Shwetha
September 4, 2026
0

ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4ರಂದು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು...

ರಾಹುಲ್ ಗಾಂಧಿ ಬಗ್ಗೆ ನಾಲಿಗೆ ಹರಿಬಿಟ್ಟರೆ ಹುಷಾರ್:ನೀನು ಯಾವನೋ ಎಂದು ಕೇಳಬೇಕಾಗುತ್ತದೆ ಶ್ರೀರಾಮುಲುಗೆ  ಪ್ರದೀಪ್ ಈಶ್ವರ್ ಎಚ್ಚರಿಕೆ

ರಾಹುಲ್ ಗಾಂಧಿ ಬಗ್ಗೆ ನಾಲಿಗೆ ಹರಿಬಿಟ್ಟರೆ ಹುಷಾರ್:ನೀನು ಯಾವನೋ ಎಂದು ಕೇಳಬೇಕಾಗುತ್ತದೆ ಶ್ರೀರಾಮುಲುಗೆ ಪ್ರದೀಪ್ ಈಶ್ವರ್ ಎಚ್ಚರಿಕೆ

by Shwetha
September 4, 2026
0

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿರುವ ಬಿಜೆಪಿ ಮುಖಂಡ ಶ್ರೀರಾಮುಲು ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಿಧಾನಸೌಧದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram