ADVERTISEMENT
Friday, September 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

Shwetha by Shwetha
September 4, 2026
in ದೇಶ - ವಿದೇಶ, Cinema, National, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಭಾರತೀಯ ಚಿತ್ರರಂಗದ ಅನಭಿಷಿಕ್ತ ಸುಲ್ತಾನಿ. ಖ್ಯಾತ ರಾಷ್ಟ್ರೀಯ ನಿಯತಕಾಲಿಕೆ ಇಂಡಿಯಾ ಟುಡೇ ದೇಶದ ಟಾಪ್ ನಾಯಕಿಯರ ಪಟ್ಟಿಯನ್ನು ಪ್ರಕಟಿಸಿದ್ದು, ರಶ್ಮಿಕಾ ಮಂದಣ್ಣ ಅವರನ್ನು ಭಾರತದ ನಂ 1 ನಾಯಕಿ ಎಂದು ಘೋಷಿಸಿದೆ. ಈ ಮೂಲಕ ಕನ್ನಡದ ಮಣ್ಣಿನ ಈ ನಟಿ ಬಾಲಿವುಡ್ ನಟಿಯರಿಗೂ ಸಡ್ಡು ಹೊಡೆದು ದೇಶದ ಗಲ್ಲಾಪೆಟ್ಟಿಗೆಯ ರಾಣಿಯಾಗಿ ಹೊರಹೊಮ್ಮಿದ್ದಾರೆ.

ಇಂಡಿಯಾ ಟುಡೇ ರಶ್ಮಿಕಾ ಅವರನ್ನು ದಿ ನ್ಯೂ ನ್ಯಾಷನಲ್ ಸ್ಟಾರ್ ಎಂದು ಬಣ್ಣಿಸಿದೆ. ಪುಷ್ಪ ದಿ ರೈಸ್, ಅನಿಮಲ್ ನಂತಹ ಬ್ಲಾಕ್ ಬಸ್ಟರ್ ಚಿತ್ರಗಳ ಬಳಿಕ ಈಗ ಪುಷ್ಪ 2 ದಿ ರೂಲ್ ಮತ್ತು ಛಾವಾ ಚಿತ್ರಗಳ ಮೂಲಕ ರಶ್ಮಿಕಾ ಕ್ರೇಜ್ ಮುಗಿಲು ಮುಟ್ಟಿದೆ. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಆಲಿಯಾ ಭಟ್ ಹಾಗೂ ಸಾಯಿ ಪಲ್ಲವಿಯಂತಹ ಘಟಾನುಘಟಿ ನಟಿಯರನ್ನು ಹಿಂದಿಕ್ಕಿ ರಶ್ಮಿಕಾ ಮೊದಲ ಸ್ಥಾನ ಪಡೆದಿರುವುದು ಅವರ ಮಾರುಕಟ್ಟೆ ಮೌಲ್ಯಕ್ಕೆ ಸಾಕ್ಷಿಯಾಗಿದೆ.

Related posts

parks-land-use-bill-withdrawn-bjp-victory-r-ashoka-seven-day-assembly

ಉದ್ಯಾನಗಳ ಶೇ.5 ಭೂ ಬಳಕೆ ಮಸೂದೆ ವಾಪಸ್‌, ಬಿಜೆಪಿಯ ಹೋರಾಟಕ್ಕೆ ಮತ್ತೊಂದು ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

September 4, 2026
swiggy-delivery-partners-hero-bike-discount-easy-loan-deal

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್ಸ್‌ಗೆ ಬಂಪರ್ ಆಫರ್: ರಿಯಾಯಿತಿ ದರದಲ್ಲಿ ಬೈಕ್, ಸುಲಭ ಸಾಲಕ್ಕಾಗಿ ಹೀರೋ ಜೊತೆ ಒಪ್ಪಂದ

September 4, 2026

ವಿಜಯ್ ದೇವರಕೊಂಡ ಮೆಚ್ಚುಗೆ

ರಶ್ಮಿಕಾ ಈ ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಿರುವ ನಟ ವಿಜಯ್ ದೇವರಕೊಂಡ, ಇಂಡಿಯಾ ಟುಡೇ ಕವರ್ ಪೇಜ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಪೀಕ್ ಸ್ಟಫ್, ನಿನ್ನ ಬಗ್ಗೆ ಹೆಮ್ಮೆಯಿದೆ ಎಂದು ರಶ್ಮಿಕಾ ಅವರಿಗೆ ಶುಭ ಹಾರೈಸಿದ್ದಾರೆ. ವಿಜಯ್ ಅವರ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಕೊಡಗಿನಿಂದ ಭಾರತದ ಶಿಖರಕ್ಕೆ

ರಶ್ಮಿಕಾ ಮಂದಣ್ಣ ಅವರ ಈ ಯಶಸ್ಸಿನ ಪಯಣ ಸಿನಿಮಾ ಸ್ಕ್ರಿಪ್ಟ್ ಗಿಂತಲೂ ರೋಚಕವಾಗಿದೆ. 1996 ರಲ್ಲಿ ಕೊಡಗಿನ ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಲೇ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟವರು. 2016 ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟಿ, ಮೊದಲ ಚಿತ್ರದಲ್ಲೇ ಸಾನ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದರು.

ಅಲ್ಲಿಂದ ಆರಂಭವಾದ ಇವರ ವಿಜಯಯಾತ್ರೆ ತೆಲುಗಿನ ಗೀತಾ ಗೋವಿಂದಂ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆಯಿತು. ಶ್ರೀವಲ್ಲಿ ಪಾತ್ರವಂತೂ ಇವರನ್ನು ಮನೆಮಾತಾಗಿಸಿತು. ಕನ್ನಡದಿಂದ ಆರಂಭವಾಗಿ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ಅವರನ್ನು ಇಂದು ನ್ಯಾಷನಲ್ ಕ್ರಶ್ ಎಂದು ಆರಾಧಿಸಲಾಗುತ್ತಿದೆ. ಒಂದು ಸಾಮಾನ್ಯ ಕೊಡವ ಕುಟುಂಬದ ಹುಡುಗಿ ಇಂದು ದೇಶದ ನಂ 1 ನಾಯಕಿಯಾಗಿ ಬೆಳೆದು ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ShareTweetSendShare
Join us on:

Related Posts

parks-land-use-bill-withdrawn-bjp-victory-r-ashoka-seven-day-assembly

ಉದ್ಯಾನಗಳ ಶೇ.5 ಭೂ ಬಳಕೆ ಮಸೂದೆ ವಾಪಸ್‌, ಬಿಜೆಪಿಯ ಹೋರಾಟಕ್ಕೆ ಮತ್ತೊಂದು ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
September 4, 2026
0

ಬೆಂಗಳೂರು,  ಕಾಂಗ್ರೆಸ್‌ ಸರ್ಕಾರ ಉದ್ಯಾನಗಳಲ್ಲಿ ಶೇ.5 ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ಹಿಂಪಡೆದಿರುವುದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಮುಂದೆಯೂ ಉದ್ಯಾನಗಳನ್ನು ಬಳಸುವುದಕ್ಕೆ ಬಿಜೆಪಿ ಅವಕಾಶ...

swiggy-delivery-partners-hero-bike-discount-easy-loan-deal

ಸ್ವಿಗ್ಗಿ ಡೆಲಿವರಿ ಪಾರ್ಟ್ನರ್ಸ್‌ಗೆ ಬಂಪರ್ ಆಫರ್: ರಿಯಾಯಿತಿ ದರದಲ್ಲಿ ಬೈಕ್, ಸುಲಭ ಸಾಲಕ್ಕಾಗಿ ಹೀರೋ ಜೊತೆ ಒಪ್ಪಂದ

by admin
September 4, 2026
0

ಬೆಂಗಳೂರು: ಪ್ರಮುಖ ಆನ್‌ಲೈನ್ ಫುಡ್ ಮತ್ತು ದಿನಸಿ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಡೆಲಿವರಿ ಪಾರ್ಟ್ನರ್‌ಗಳ ಅನುಕೂಲಕ್ಕಾಗಿ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ...

ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ, ‘ಕೇರ್ ಬೈ ಬಿಎಲ್‌ಆರ್’ ಪ್ರೀಮಿಯಂ ಸೇವೆ ಆರಂಭ!

ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ, ‘ಕೇರ್ ಬೈ ಬಿಎಲ್‌ಆರ್’ ಪ್ರೀಮಿಯಂ ಸೇವೆ ಆರಂಭ!

by admin
September 4, 2026
0

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ತನ್ನ ಪ್ರಯಾಣಿಕರ ವಿಮಾನಯಾನ ಅನುಭವವನ್ನು ಮತ್ತಷ್ಟು ಸುಗಮ, ಆರಾಮದಾಯಕ ಹಾಗೂ ಐಷಾರಾಮಿಯಾಗಿಸುವ ಉದ್ದೇಶದಿಂದ ʼಕೇರ್ ಬೈ ಬಿಎಲ್‌ಆರ್’ ಎಂಬ...

ತಮಿಳುನಾಡಿಗೆ ನೀರು ಬಿಟ್ಟರೆ ಬೀದಿಗಿಳಿದು ಹೋರಾಟ: ದರ್ಶನ್ ಪುಟ್ಟಣ್ಣಯ್ಯ

ಜಕ್ಕನಹಳ್ಳಿಯಲ್ಲಿ ಜೈವಿಕ ಪಾಂಡವಪುರ – ಬಿ ಆರ್‌ ಸಿ ಉದ್ಘಾಟನೆ

by admin
September 4, 2026
0

ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಲ್ಲಿ, ಪುಟ್ಟಣ್ಣಯ್ಯ ಫೌಂಡೇಶನ್‌, ಸೆಂಟರ್‌ ಫಾರ್‌ ಸಸ್ಟೇನಬಲ್‌ ಅಗ್ರಿಕಲ್ಚರ್‌, ಆಶಾ ಸಹಯೋಗದಲ್ಲಿ ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಪಾಂಡವಪುರ ತಾಲೂಕಿನ...

ಸಿಎಂ ಆಗಿದ್ದಾಗ ಕುಮಾರಸ್ವಾಮಿ 2 ದಿನ ನಾಪತ್ತೆಯಾಗಿದ್ದರು: ಮಗನನ್ನು ಹುಡುಕಿಕೊಡು ಎಂದು ದೇವೇಗೌಡರೇ ನನಗೆ ಟಾಸ್ಕ್ ಕೊಟ್ಟಿದ್ದರು; ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಆಕ್ರೋಶ

ಸಿಎಂ ಆಗಿದ್ದಾಗ ಕುಮಾರಸ್ವಾಮಿ 2 ದಿನ ನಾಪತ್ತೆಯಾಗಿದ್ದರು: ಮಗನನ್ನು ಹುಡುಕಿಕೊಡು ಎಂದು ದೇವೇಗೌಡರೇ ನನಗೆ ಟಾಸ್ಕ್ ಕೊಟ್ಟಿದ್ದರು; ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಆಕ್ರೋಶ

by Shwetha
September 4, 2026
0

ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಸಚಿವ ಚಲುವರಾಯಸ್ವಾಮಿ ನಡುವಿನ ವಾಕ್ಸಮರ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram