ADVERTISEMENT
Saturday, September 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜಿಕೆವಿಕೆ ಮೈದಾನದಲ್ಲಿ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಹಬ್ಬ: ಜಮೀರ್ ಅಹ್ಮದ್ ಖಾನ್‌ರಿಂದ ಚಾಲನೆ

admin by admin
September 5, 2026
in Newsbeat, Sports, ಕ್ರೀಡೆ
bizd-cup-media-cricket-tournament-bengaluru-gkvk-ground-zameer-ahmed-khan

bizd-cup-media-cricket-tournament-bengaluru-gkvk-ground-zameer-ahmed-khan

Share on FacebookShare on TwitterShare on WhatsappShare on Telegram

ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ 9 ಡ್ರಿಮ್ಸ್‌ ಸಂಸ್ಥೆ ಆಯೋಜಿಸಿರು ಬಿಝಡ್‌ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿಗೆ ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಮೀರ್‌ ಅಹ್ಮದ್‌ ಖಾನ್‌ ಅವರು, ಆಟದಲ್ಲಿ ಸೋಲು ಗೆಲುವು ಸಹಜ.ದಾದರೆ ಪ್ರತಿಯೊಬ್ಬರು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು ಎಂದರು.

Related posts

java-yezdi-enter-gaming-world-isgl-2026-esports-tournament

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

September 5, 2026
vantara-governing-board-subhash-k-malkhede-appointed

ವಂತಾರಾ ಆಡಳಿತ ಮಂಡಳಿಗೆ ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್ ಕೆ. ಮಲ್ಕೇಡೆ ನೇಮಕ

September 5, 2026

ಎರಡು ದಿನಗಳ ಈ ಕ್ರಿಕೆಟ್ ಹಬ್ಬದಲ್ಲಿ 12 ತಂಡಗಳು ಹಾಗೂ 180ಕ್ಕೂ ಅಧಿಕ ಆಟಗಾರರು ಭಾಗವಹಿಸಿದ್ದರು. ಮಾಧ್ಯಮ ಮಿತ್ರರು, ಪೊಲೀಸ್ ಅಧಿಕಾರಿಗಳು, ಸೆಲೆಬ್ರಿಟಿಗಳು ಹಾಗೂ ಜನಪ್ರತಿನಿಧಿಗಳ ಆಪ್ತ ಸಹಾಯಕರು ಒಂದೇ ಮೈದಾನದಲ್ಲಿ ಮುಖಾಮುಖಿಯಾಗಿದ್ದರು.

ಬಿಡುವಿಲ್ಲದ ಕೆಲಸದ ಒತ್ತಡದ ನಡುವೆ ಮಾಧ್ಯಮ ಮಿತ್ರರನ್ನು ಕ್ರಿಕೆಟ್ ಮೈದಾನದಲ್ಲಿ ಒಗ್ಗೂಡಿಸುವುದೇ ಟೂರ್ನಿಯ ಪ್ರಮುಖ ಉದ್ದೇಶವಾಗಿದೆ. ಕ್ರಿಕೆಟ್ ಜೊತೆಗೆ ಸ್ನೇಹ, ಸೌಹಾರ್ದ ಮತ್ತು ಕ್ರೀಡಾಸ್ಫೂರ್ತಿಯ ಸಂಭ್ರಮಕ್ಕೂ ಈ ಟೂರ್ನಿ ಸಾಕ್ಷಿಯಾಗಿದೆ.

 

ಟೂರ್ನಿಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮಿ ನಾರಾಯಣ್, ಆರ್‌ಸಿಪಿಎಲ್‍ನ ಸಾರ್ವಜನಿಕ ಸಂವಹನ ಪ್ರತಿನಿಧಿ ಅರ್ನಾಬ್ ದುತ್ತಾ, ಝೆನ್‍ಹೊರಾ ಕಾರ್ಪೋರೇಷನ್‍ನ ಸಂಸ್ಥಾಪಕ ಎನ್. ಹರಿಪ್ರಸಾದ್, 9 ಡ್ರೀಮ್ಸ್ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು

ಟೂರ್ನಿಯ ಮೊದಲ ದಿನವಾದ ಸೆಪ್ಟೆಂಬರ್ 5ರಂದು ಲೀಗ್ ಪಂದ್ಯಗಳು ನಡೆದವು. ಎರಡನೇ ದಿನವಾದ ಸೆಪ್ಟೆಂಬರ್ 6ರಂದು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.

ಎರಡು ದಿನಗಳ ಈ ಕ್ರಿಕೆಟ್ ಸಮರದಲ್ಲಿ ಗೆಲುವಿಗಾಗಿ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದು ಮೈದಾನದಲ್ಲಿ ರೋಚಕ ಕ್ಷಣಗಳು, ಸಿಕ್ಸರ್‌ಗಳ ಸದ್ದು, ವಿಕೆಟ್‍ಗಳ ಸಂಭ್ರಮ ಹಾಗೂ ಕ್ರೀಡಾಸ್ಫೂರ್ತಿಯ ಕಳೆ ಮೂಡಿದೆ.

ಕಣಕ್ಕಿಳಿಯಲಿರುವ 12 ತಂಡಗಳು
ದೇವ್ ಬ್ಯಾಟ್ಲರ್ಸ್
ವಿನಿಶಾ ವಾರಿಯರ್ಸ್
ಅರವಿಂದ್ ಅವೆಂಜರ್ಸ್
ಟೀಮ್ ಪರ್ವಂ
ಬಿಝಡ್ ವಾರಿಯರ್ಸ್
ಬಿಎಸ್ ಬುಲ್ಸ್
ಟೀಮ್ ಅಪ್ಪು
ಅರುಣ್ ವಿನಯ ಸ್ಟ್ರೈಕರ್ಸ್
ನಂದಿ ಬ್ಲಾಸ್ಟರ್ಸ್
ಪ್ರತಿಧ್ವನಿ ಚಾಲೆಂಜರ್ಸ್
ಡಿವೈನ್ ವಂಡರ್ ವಾರಿಯರ್ಸ್
ಪ್ರೋ ವಿನ್ ಪ್ರೈಡ್ಸ್

ಒಟ್ಟಿನಲ್ಲಿ ಸುದ್ದಿ ಹೊತ್ತು ತರುವ ಕೈಗಳು ಈಗ ಚೆಂಡು ಬ್ಯಾಟ್ ಹಿಡಿದು ಮೈದಾನದಲ್ಲಿ ರಣಕಹಳೆ ಮೊಳಗಿಸಲಿದೆ. ಯಾರ ಬ್ಯಾಟ್ ಸದ್ದು ಮಾಡಲಿದೆ..? ಯಾರ ಬೌಲಿಂಗ್ ಮಿಂಚಲಿದೆ..? ಯಾರು ಚಾಂಪಿಯನ್..? ಯಾರು ರನ್ನರ್‌ ಅಪ್..?

ಈ ಎಲ್ಲ ಕುತೂಹಲಗಳಿಗೆ ಸೆಪ್ಟೆಂಬರ್ 6ರಂದು ನಡೆಯಲಿರುವ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ ಉತ್ತರ ನೀಡಲಿದೆ.

ShareTweetSendShare
Join us on:

Related Posts

java-yezdi-enter-gaming-world-isgl-2026-esports-tournament

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

by admin
September 5, 2026
0

ಬೆಂಗಳೂರು: ಬೈಕ್ ರೈಡಿಂಗ್ ಮತ್ತು ವಿಡಿಯೋ ಗೇಮಿಂಗ್... ಇವೆರಡೂ ಇಂದಿನ ಯುವಜನತೆಯ ಅಚ್ಚುಮೆಚ್ಚಿನ ಹವ್ಯಾಸಗಳು. ಇದೀಗ ಈ ಎರಡು ವಿಭಿನ್ನ ಲೋಕಗಳನ್ನು ಒಂದೇ ವೇದಿಕೆಯಲ್ಲಿ ತರಲು 'ಕ್ಲಾಸಿಕ್...

vantara-governing-board-subhash-k-malkhede-appointed

ವಂತಾರಾ ಆಡಳಿತ ಮಂಡಳಿಗೆ ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್ ಕೆ. ಮಲ್ಕೇಡೆ ನೇಮಕ

by admin
September 5, 2026
0

  ಜಾಮ್‌ನಗರ (ಭಾರತ), ಸೆಪ್ಟೆಂಬರ್ 04, 2026: ರಿಲಯನ್ಸ್‌ ಇಂಡಸ್ಟ್ರೀಸ್‌ ಆರಂಭಿಸಿರುವ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾಗಿರುವ ವಂತಾರಾ ಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ಘೋಷಿಸಲಾಗಿದ್ದು,...

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

by Shwetha
September 5, 2026
0

ಮೂಡಿಗೆರೆ: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದ ವಿಚಾರವಾಗಿ ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರು ಮುಖ್ಯಮಂತ್ರಿ ಡಿ.ಕೆ....

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

by Shwetha
September 5, 2026
0

ಉದ್ಯೋಗಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಿರುವ ಬಾಕಿ ಅಥವಾ ಬಡ್ಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ...

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

by Shwetha
September 5, 2026
0

ಬೆಂಗಳೂರು: ಶಸ್ತ್ರಸಜ್ಜಿತ ನಕ್ಸಲಿಸಂ ಗಿಂತಲೂ ಇಂದು ದೇಶವನ್ನು ಒಳಗಿನಿಂದಲೇ ನಶಿಸುವಂತೆ ಮಾಡುತ್ತಿರುವ ಬೌದ್ಧಿಕ ಅಥವಾ ದಿಮಾಗಿ ನಕ್ಸಲಿಸಂ ಅತ್ಯಂತ ಅಪಾಯಕಾರಿಯಾಗಿದೆ. ಈ ಅದೃಶ್ಯ ಶತ್ರುಗಳ ವಿರುದ್ಧ ಸಮಾಜದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram