ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ 9 ಡ್ರಿಮ್ಸ್ ಸಂಸ್ಥೆ ಆಯೋಜಿಸಿರು ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಅವರು, ಆಟದಲ್ಲಿ ಸೋಲು ಗೆಲುವು ಸಹಜ.ದಾದರೆ ಪ್ರತಿಯೊಬ್ಬರು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು ಎಂದರು.
ಎರಡು ದಿನಗಳ ಈ ಕ್ರಿಕೆಟ್ ಹಬ್ಬದಲ್ಲಿ 12 ತಂಡಗಳು ಹಾಗೂ 180ಕ್ಕೂ ಅಧಿಕ ಆಟಗಾರರು ಭಾಗವಹಿಸಿದ್ದರು. ಮಾಧ್ಯಮ ಮಿತ್ರರು, ಪೊಲೀಸ್ ಅಧಿಕಾರಿಗಳು, ಸೆಲೆಬ್ರಿಟಿಗಳು ಹಾಗೂ ಜನಪ್ರತಿನಿಧಿಗಳ ಆಪ್ತ ಸಹಾಯಕರು ಒಂದೇ ಮೈದಾನದಲ್ಲಿ ಮುಖಾಮುಖಿಯಾಗಿದ್ದರು.
ಬಿಡುವಿಲ್ಲದ ಕೆಲಸದ ಒತ್ತಡದ ನಡುವೆ ಮಾಧ್ಯಮ ಮಿತ್ರರನ್ನು ಕ್ರಿಕೆಟ್ ಮೈದಾನದಲ್ಲಿ ಒಗ್ಗೂಡಿಸುವುದೇ ಟೂರ್ನಿಯ ಪ್ರಮುಖ ಉದ್ದೇಶವಾಗಿದೆ. ಕ್ರಿಕೆಟ್ ಜೊತೆಗೆ ಸ್ನೇಹ, ಸೌಹಾರ್ದ ಮತ್ತು ಕ್ರೀಡಾಸ್ಫೂರ್ತಿಯ ಸಂಭ್ರಮಕ್ಕೂ ಈ ಟೂರ್ನಿ ಸಾಕ್ಷಿಯಾಗಿದೆ.
ಟೂರ್ನಿಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮಿ ನಾರಾಯಣ್, ಆರ್ಸಿಪಿಎಲ್ನ ಸಾರ್ವಜನಿಕ ಸಂವಹನ ಪ್ರತಿನಿಧಿ ಅರ್ನಾಬ್ ದುತ್ತಾ, ಝೆನ್ಹೊರಾ ಕಾರ್ಪೋರೇಷನ್ನ ಸಂಸ್ಥಾಪಕ ಎನ್. ಹರಿಪ್ರಸಾದ್, 9 ಡ್ರೀಮ್ಸ್ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು
ಟೂರ್ನಿಯ ಮೊದಲ ದಿನವಾದ ಸೆಪ್ಟೆಂಬರ್ 5ರಂದು ಲೀಗ್ ಪಂದ್ಯಗಳು ನಡೆದವು. ಎರಡನೇ ದಿನವಾದ ಸೆಪ್ಟೆಂಬರ್ 6ರಂದು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.
ಎರಡು ದಿನಗಳ ಈ ಕ್ರಿಕೆಟ್ ಸಮರದಲ್ಲಿ ಗೆಲುವಿಗಾಗಿ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದು ಮೈದಾನದಲ್ಲಿ ರೋಚಕ ಕ್ಷಣಗಳು, ಸಿಕ್ಸರ್ಗಳ ಸದ್ದು, ವಿಕೆಟ್ಗಳ ಸಂಭ್ರಮ ಹಾಗೂ ಕ್ರೀಡಾಸ್ಫೂರ್ತಿಯ ಕಳೆ ಮೂಡಿದೆ.
ಕಣಕ್ಕಿಳಿಯಲಿರುವ 12 ತಂಡಗಳು
ದೇವ್ ಬ್ಯಾಟ್ಲರ್ಸ್
ವಿನಿಶಾ ವಾರಿಯರ್ಸ್
ಅರವಿಂದ್ ಅವೆಂಜರ್ಸ್
ಟೀಮ್ ಪರ್ವಂ
ಬಿಝಡ್ ವಾರಿಯರ್ಸ್
ಬಿಎಸ್ ಬುಲ್ಸ್
ಟೀಮ್ ಅಪ್ಪು
ಅರುಣ್ ವಿನಯ ಸ್ಟ್ರೈಕರ್ಸ್
ನಂದಿ ಬ್ಲಾಸ್ಟರ್ಸ್
ಪ್ರತಿಧ್ವನಿ ಚಾಲೆಂಜರ್ಸ್
ಡಿವೈನ್ ವಂಡರ್ ವಾರಿಯರ್ಸ್
ಪ್ರೋ ವಿನ್ ಪ್ರೈಡ್ಸ್
ಒಟ್ಟಿನಲ್ಲಿ ಸುದ್ದಿ ಹೊತ್ತು ತರುವ ಕೈಗಳು ಈಗ ಚೆಂಡು ಬ್ಯಾಟ್ ಹಿಡಿದು ಮೈದಾನದಲ್ಲಿ ರಣಕಹಳೆ ಮೊಳಗಿಸಲಿದೆ. ಯಾರ ಬ್ಯಾಟ್ ಸದ್ದು ಮಾಡಲಿದೆ..? ಯಾರ ಬೌಲಿಂಗ್ ಮಿಂಚಲಿದೆ..? ಯಾರು ಚಾಂಪಿಯನ್..? ಯಾರು ರನ್ನರ್ ಅಪ್..?
ಈ ಎಲ್ಲ ಕುತೂಹಲಗಳಿಗೆ ಸೆಪ್ಟೆಂಬರ್ 6ರಂದು ನಡೆಯಲಿರುವ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ ಉತ್ತರ ನೀಡಲಿದೆ.








