ADVERTISEMENT
Tuesday, September 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

Shwetha by Shwetha
September 13, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯ ಪ್ರಕರಣ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ, ಈ ವಿಚಾರವಾಗಿ ಜಾರಿ ನಿರ್ದೇಶನಾಲಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತರ ಮನೆಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಮಲ್ಯ, ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಜರೆದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಯಾವುದೇ ಚಾರ್ಜ್ ಶೀಟ್ ಇಲ್ಲದೆ, ನ್ಯಾಯಯುತ ವಿಚಾರಣೆ ನಡೆಸದೆ ಕೇವಲ ಜನರ ಚಾರಿತ್ರ್ಯ ವಧೆ ಮಾಡುವುದೇ ಇಡಿಯ ಕೆಲಸವಾಗಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ದಮನಕಾರಿ ನೀತಿಯನ್ನು ಕಾಣಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

Related posts

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

September 13, 2026
ಸ್ವರ್ಗದಲ್ಲಿ 72 ಕನ್ಯೆಯರು ಸಿಗಬಹುದು, ವಿಧಿ-ವಿಧಾನದಂತೆ ಮುಸ್ಲಿಮರಾಗಿ ಬಸವರಾಜ ರಾಯರೆಡ್ಡಿ ಇಸ್ಲಾಂ ಶ್ರೇಷ್ಠ ಹೇಳಿಕೆಗೆ ಪ್ರತಾಪ್‌ ಸಿಂಹ ತಿರುಗೇಟು!

ಇನ್ಸ್‌ಪೆಕ್ಟರ್‌ ನಡೆ ರೋಡ್‌ಸೈಡ್‌ ತರ್ಲೆ ಇದ್ದಂತಿದೆ, ಪೊಲೀಸರಿಗೆ ವೀರಾವೇಷ ಶೋಭಿಸುವುದಿಲ್ಲ: ಗಣೇಶ ಸಮಿತಿಗಳಿಗೆ ಅವಾಜ್ ಹಾಕಿದ ಇನ್ಸ್‌ಪೆಕ್ಟರ್ ವಿರುದ್ಧ ಪ್ರತಾಪ ಸಿಂಹ ಆಕ್ರೋಶ

September 13, 2026

ತಮ್ಮ ವೈಯಕ್ತಿಕ ಭಾವನೆಗಳನ್ನು ಹಂಚಿಕೊಂಡಿರುವ ಮಲ್ಯ, ನನ್ನನ್ನು ಯಾರು ಬೇಕಾದರೂ ಟೀಕಿಸಬಹುದು ಅಥವಾ ದ್ವೇಷಿಸಬಹುದು, ಆದರೆ ನಾನು ಬದಲಾಗುವುದಿಲ್ಲ. ಸತ್ಯವೇ ಅಂತಿಮವಾಗಿ ಜಯಗಳಿಸಲಿದೆ ಎಂಬ ನಂಬಿಕೆ ನನಗಿದೆ. ಆದರೆ ಭಾರತದಲ್ಲಿರುವ ಪವಿತ್ರ ದೇವಸ್ಥಾನಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನನ್ನು ಕಾಡುತ್ತಿರುವ ಅತಿದೊಡ್ಡ ಬೇಸರ. ನಾನು ಆ ಪವಿತ್ರ ಕ್ಷೇತ್ರಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸಾಲ ತೀರಿದರೂ ಮುಗಿಯದ ಮಲ್ಯ ಸಂಕಷ್ಟ

ಒಂದೆಡೆ ಮಲ್ಯ ಇಡಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ, ಮತ್ತೊಂದೆಡೆ ಜಾರಿ ನಿರ್ದೇಶನಾಲಯ ಅವರಿಗೆ ಕಾನೂನಿನ ಶಾಕ್ ನೀಡಿದೆ. ಬ್ಯಾಂಕ್‌ಗಳಿಗೆ ನೀಡಬೇಕಾದ 14,131 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ, ಆದ್ದರಿಂದ ನನ್ನ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಮಲ್ಯ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ಇಡಿ, ಮಲ್ಯ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ ತಕ್ಷಣ ಅವರು ಮಾಡಿರುವ ಅಪರಾಧಗಳು ಇಲ್ಲವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮಲ್ಯ ಅವರು ಸತತವಾಗಿ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕೇವಲ ಹಣಕಾಸಿನ ನಷ್ಟ ತುಂಬಿಕೊಟ್ಟರೆ ಅಕ್ರಮ ಹಣ ವರ್ಗಾವಣೆಯಂತಹ ಗಂಭೀರ ಅಪರಾಧಗಳಿಂದ ಮುಕ್ತಿ ಸಿಗುವುದಿಲ್ಲ. ಹೀಗಾಗಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಇಡಿ ಹೈಕೋರ್ಟ್ ಮುಂದೆ ವಾದಿಸಿದೆ.

ಸಚಿವ ಜಾರಕಿಹೊಳಿ ಮೇಲಿನ ದಾಳಿಯ ಬೆನ್ನಲ್ಲೇ ಮಲ್ಯ ಅವರ ಈ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಇತ್ತ ಇಡಿ ಮಾತ್ರ ಮಲ್ಯ ಅವರನ್ನು ಕಾನೂನಿನ ಸುಳಿಗೆ ಸಿಲುಕಿಸಲು ಹಠಕ್ಕೆ ಬಿದ್ದಂತೆ ಕಾಣುತ್ತಿದೆ.

ShareTweetSendShare
Join us on:

Related Posts

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

by Shwetha
September 13, 2026
0

ತುಮಕೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ಸರಣಿ ದಾಳಿಯ ವಿರುದ್ಧ ಸಹಕಾರ...

ಸ್ವರ್ಗದಲ್ಲಿ 72 ಕನ್ಯೆಯರು ಸಿಗಬಹುದು, ವಿಧಿ-ವಿಧಾನದಂತೆ ಮುಸ್ಲಿಮರಾಗಿ ಬಸವರಾಜ ರಾಯರೆಡ್ಡಿ ಇಸ್ಲಾಂ ಶ್ರೇಷ್ಠ ಹೇಳಿಕೆಗೆ ಪ್ರತಾಪ್‌ ಸಿಂಹ ತಿರುಗೇಟು!

ಇನ್ಸ್‌ಪೆಕ್ಟರ್‌ ನಡೆ ರೋಡ್‌ಸೈಡ್‌ ತರ್ಲೆ ಇದ್ದಂತಿದೆ, ಪೊಲೀಸರಿಗೆ ವೀರಾವೇಷ ಶೋಭಿಸುವುದಿಲ್ಲ: ಗಣೇಶ ಸಮಿತಿಗಳಿಗೆ ಅವಾಜ್ ಹಾಕಿದ ಇನ್ಸ್‌ಪೆಕ್ಟರ್ ವಿರುದ್ಧ ಪ್ರತಾಪ ಸಿಂಹ ಆಕ್ರೋಶ

by Shwetha
September 13, 2026
0

ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯ ವಿಚಾರವಾಗಿ ಮಸೀದಿ ಮುಂದೆ ಹೋಗದಂತೆ ಎಚ್ಚರಿಕೆ ನೀಡಿದ್ದ ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ ಸಿಂಹ ತೀವ್ರ...

ಬ್ರಿಟಿಷರ ಸೇವೆ ಮಾಡಿದವರಿಂದ ನಾವು ದೇಶಭಕ್ತಿ ಕಲಿಯಬೇಕಿಲ್ಲ,ನೇತಾಜಿ ಸೈನ್ಯ ಕಟ್ಟುತ್ತಿದ್ದರೆ ಇವರು ಬ್ರಿಟಿಷರಿಗೆ ಸಾಥ್ ನೀಡುತ್ತಿದ್ದರು:ಇತಿಹಾಸ ಕೆದಕಿ ಬಿಜೆಪಿಯನ್ನು ಬೆತ್ತಲೆ ಮಾಡಿದ ಖರ್ಗೆ!

ಬ್ರಿಟಿಷರ ಸೇವೆ ಮಾಡಿದವರಿಂದ ನಾವು ದೇಶಭಕ್ತಿ ಕಲಿಯಬೇಕಿಲ್ಲ,ನೇತಾಜಿ ಸೈನ್ಯ ಕಟ್ಟುತ್ತಿದ್ದರೆ ಇವರು ಬ್ರಿಟಿಷರಿಗೆ ಸಾಥ್ ನೀಡುತ್ತಿದ್ದರು:ಇತಿಹಾಸ ಕೆದಕಿ ಬಿಜೆಪಿಯನ್ನು ಬೆತ್ತಲೆ ಮಾಡಿದ ಖರ್ಗೆ!

by Shwetha
September 13, 2026
0

ಬೆಂಗಳೂರು: ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದ ಈಗ ತಾರಕಕ್ಕೇರಿದೆ. ವಂದೇ ಮಾತರಂ ಗೀತೆಯ ಗಾಯನ ಮತ್ತು ದೇಶಭಕ್ತಿಯ ನೈಜ ಇತಿಹಾಸದ...

ಹಸಿರು ಪರದೆ ಹಿಂದೆ ಬಡತನ ಬಚ್ಚಿಟ್ಟ ಕೇಂದ್ರ, ದಿಲ್ಲಿ ಶೃಂಗಸಭೆ ವೈಭವದ ಹಿಂದೆ ಕೊಳೆಗೇರಿಗಳ ಸಂಕಷ್ಟ: ವಾಸ್ತವ ಮರೆಮಾಚಿದ್ರೆ ಸತ್ಯ ಬದಲಾಗಲ್ಲ, ದಿಲ್ಲಿ ಕೊಳೆಗೇರಿಗಳಿಗೆ ಪರದೆ ಹಾಕಿದ್ದಕ್ಕೆ ಮೋದಿ ಸರ್ಕಾರದ ವಿರುದ್ಧ ಎಎಪಿ ಆಕ್ರೋಶ

ಹಸಿರು ಪರದೆ ಹಿಂದೆ ಬಡತನ ಬಚ್ಚಿಟ್ಟ ಕೇಂದ್ರ, ದಿಲ್ಲಿ ಶೃಂಗಸಭೆ ವೈಭವದ ಹಿಂದೆ ಕೊಳೆಗೇರಿಗಳ ಸಂಕಷ್ಟ: ವಾಸ್ತವ ಮರೆಮಾಚಿದ್ರೆ ಸತ್ಯ ಬದಲಾಗಲ್ಲ, ದಿಲ್ಲಿ ಕೊಳೆಗೇರಿಗಳಿಗೆ ಪರದೆ ಹಾಕಿದ್ದಕ್ಕೆ ಮೋದಿ ಸರ್ಕಾರದ ವಿರುದ್ಧ ಎಎಪಿ ಆಕ್ರೋಶ

by Shwetha
September 13, 2026
0

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯ ಸಿದ್ಧತೆಗಳ ನಡುವೆಯೇ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ಗಂಭೀರ ಆರೋಪ ಮಾಡಿದೆ....

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಾದಿ ಮಿಸ್: ಕಾಣದ ಕೈಗಳ ಆಟಕ್ಕೆ ಬಲಿಯಾದ್ರಾ ಕೆ ಎನ್ ರಾಜಣ್ಣ? ರಾಜಣ್ಣನನ್ನ ಕಡೆಗಣಿಸಿದ್ರೆ ಕಾಂಗ್ರೆಸ್ ಗೆ ಸೋಲು ಖಚಿತ-ಕಾಂಗ್ರೆಸ್ ವಿರುದ್ಧ ಪುತ್ರ ರಾಜೇಂದ್ರ ರಾಜಣ್ಣ ಆಕ್ರೋಶ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಾದಿ ಮಿಸ್: ಕಾಣದ ಕೈಗಳ ಆಟಕ್ಕೆ ಬಲಿಯಾದ್ರಾ ಕೆ ಎನ್ ರಾಜಣ್ಣ? ರಾಜಣ್ಣನನ್ನ ಕಡೆಗಣಿಸಿದ್ರೆ ಕಾಂಗ್ರೆಸ್ ಗೆ ಸೋಲು ಖಚಿತ-ಕಾಂಗ್ರೆಸ್ ವಿರುದ್ಧ ಪುತ್ರ ರಾಜೇಂದ್ರ ರಾಜಣ್ಣ ಆಕ್ರೋಶ

by Shwetha
September 13, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಈಗ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಚಿವ ಕೆ.ಎನ್....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram