ADVERTISEMENT
Thursday, October 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕುಮಾರಸ್ವಾಮಿ ಹಫ್ತಾ ವಸೂಲಿ ಗಿರಾಕಿ ನಮ್ಮ ಬಳಿಯೂ ಇದೆ ಅವರ ಅಕ್ರಮಗಳ ಕೆಜಿಎಫ್-2 ಮತ್ತು ಕೆಜಿಎಫ್-3 ಫೈಲ್: ಸಚಿವ ಹೆಚ್ ಸಿ ಬಾಲಕೃಷ್ಣ

Shwetha by Shwetha
October 1, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಮನಗರ: ನೈಸ್ ಯೋಜನೆ ವಿಚಾರವಾಗಿ ಡಿ ಕೆ ಶಿವಕುಮಾರ್ ವಿರುದ್ಧ ಸಮರ ಸಾರಿರುವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸಚಿವ ಹೆಚ್ ಸಿ ಬಾಲಕೃಷ್ಣ ಅತ್ಯಂತ ಕಟುವಾದ ಪದಗಳಲ್ಲಿ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರನ್ನು ಹಫ್ತಾ ವಸೂಲಿ ಗಿರಾಕಿ ಎಂದು ಕರೆದಿರುವ ಬಾಲಕೃಷ್ಣ, ಹೆಚ್ ಡಿಕೆ ಅವರ ಅಕ್ರಮಗಳ ಕೆಜಿಎಫ್-2 ಮತ್ತು ಕೆಜಿಎಫ್-3 ಮಟ್ಟದ ದಾಖಲೆಗಳು ನಮ್ಮ ಬಳಿಯಿವೆ, ಸಮಯ ಬಂದಾಗ ಅವುಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಕುಮಾರಸ್ವಾಮಿ ಅವರು 3B ಗಳಿಗೆ ಫೇಮಸ್ ಬ್ಲ್ಯಾಕ್ ಮೇಲ್ ಮಂತ್ರಗಾರ

Related posts

ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ

ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ

October 1, 2026
ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಇಡೀ ದೇಶಕ್ಕೆ ಮಾಡೆಲ್: ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದು, ನಾನು ಪಿ ಹೆಚ್ ಡಿ ಮಾಡಿದ್ದೇನೆ-ಬಿ ಕೆ ಹರಿಪ್ರಸಾದ್

ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಇಡೀ ದೇಶಕ್ಕೆ ಮಾಡೆಲ್: ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದು, ನಾನು ಪಿ ಹೆಚ್ ಡಿ ಮಾಡಿದ್ದೇನೆ-ಬಿ ಕೆ ಹರಿಪ್ರಸಾದ್

October 1, 2026

ಕುಮಾರಸ್ವಾಮಿ ಅವರ ರಾಜಕೀಯ ಚರಿತ್ರೆಯನ್ನು ಕೆದಕಿದ ಬಾಲಕೃಷ್ಣ, ಹೆಚ್ ಡಿಕೆ ಎಂದರೆ 3B ಗೆ ಅಂದರೆ ಬ್ಲ್ಯಾಕ್ ಮೇಲಿಂಗ್, ಬ್ಯಾಕ್ ಸ್ಟ್ಯಾಬಿಂಗ್ ಚೂರಿ ಮತ್ತು ಬ್ಲ್ಯಾಕ್ ಮ್ಯಾಜಿಕ್ ಮಾಡುವುದಕ್ಕೆ ಸಿದ್ಧಹಸ್ತರು ಎಂದು ಲೇವಡಿ ಮಾಡಿದರು. ಹಿಂದೆ ಧರ್ಮಸಿಂಗ್ ಮತ್ತು ಯಡಿಯೂರಪ್ಪ ಅವರಿಗೆ ಬೆನ್ನಿಗೆ ಚೂರಿ ಹಾಕಿದ್ದೇ ಕುಮಾರಸ್ವಾಮಿ ಅವರ ಸಾಧನೆ. ಪ್ರತಿದಿನ ಯಾರನ್ನಾದರೂ ಬ್ಲ್ಯಾಕ್ ಮೇಲ್ ಮಾಡುವುದೇ ಅವರ ಕಾಯಕವಾಗಿದೆ. ಕೆಲಸವಿಲ್ಲದ ಕುಂಬಾರ ಏನು ಮಾಡಿದ ಎನ್ನುವ ಗಾದೆಯಂತೆ ಕುಮಾರಸ್ವಾಮಿ ಈಗ ಕೆಲಸವಿಲ್ಲದೆ ಏನೇನೋ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಡಿಕೆಶಿ ಪ್ರಬಲರಾಗುತ್ತಿರುವುದಕ್ಕೆ ಕುಮಾರಸ್ವಾಮಿಗೆ ನಿದ್ದೆಯಿಲ್ಲ

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯನ್ನು ಕುಮಾರಸ್ವಾಮಿ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಅವರಿಗೆ ರಾತ್ರಿ ನಿದ್ರೆಯೂ ಬರುತ್ತಿಲ್ಲ ಎಂದು ಬಾಲಕೃಷ್ಣ ಕಿಡಿಕಾರಿದರು. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಸರ್ಕಾರದ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗೊಂದಲ ಮೂಡಿಸುತ್ತಿದ್ದಾರೆ. ಮೊದಲು ಕುಮಾರಸ್ವಾಮಿ ಅವರು ತಮ್ಮ ಆರೋಗ್ಯದ ಕಡೆ ಗಮನ ಕೊಡಲಿ, ಸರಿಯಾಗಿ ನಿದ್ರೆ ಮಾಡಲಿ. ಒಂದು ವೇಳೆ ಅವರ ಆರೋಗ್ಯ ಕೈಕೊಟ್ಟರೆ ಅದಕ್ಕೂ ಡಿ ಕೆ ಶಿವಕುಮಾರ್ ಅವರೇ ಕಾರಣ ಎಂದು ಹೇಳಿದರೂ ಅಚ್ಚರಿಯಿಲ್ಲ ಎಂದು ಅವರು ಕುಟುಕಿದರು.

ಸೂಟ್ ಕೇಸ್ ತಲುಪಿದ ತಕ್ಷಣ ಮಾತು ಬದಲಿಸುವುದು ಇವರ ಚಾಳಿ

ಕುಮಾರಸ್ವಾಮಿ ಅವರ ಹಳೆಯ ಆಡಳಿತವನ್ನೂ ಪ್ರಶ್ನಿಸಿದ ಬಾಲಕೃಷ್ಣ, ರಾತ್ರಿ ಸೂಟ್ ಕೇಸ್ ತಲುಪಿದ ತಕ್ಷಣ ಹೇಳಿಕೆ ಬದಲಿಸುವುದು ಕುಮಾರಸ್ವಾಮಿ ಅವರ ಹಳೆಯ ಚಾಳಿ. ಎರಡು ಬಾರಿ ಸಿಎಂ ಆಗಿದ್ದಾಗ ಅವರು ಏನು ಮಾಡಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಸಹೋದರ ಬಾಲಕೃಷ್ಣ ಗೌಡ ಅವರ ಆಸ್ತಿ ಒಂದೇ ವರ್ಷದಲ್ಲಿ 1,000 ಕೋಟಿಗೆ ಜಿಗಿದಿದ್ದು ಹೇಗೆ? ಈ ಬಗ್ಗೆ ಮೊದಲು ತನಿಖೆಯಾಗಲಿ ಎಂದು ಸವಾಲು ಹಾಕಿದರು. ಚನ್ನಮ್ಮ ಅವರಿಗೆ ಐಟಿ ನೋಟಿಸ್ ಬಂದ ತಕ್ಷಣ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕಾಲಿಗೆ ಬಿದ್ದು ಮೈತ್ರಿ ಮಾಡಿಕೊಂಡ ಬ್ಲ್ಯಾಕ್ ಮೇಲರ್ ಕುಮಾರಸ್ವಾಮಿ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ರೈತರಿಗೆ ಪರಿಹಾರ ಕೊಡಿಸಿ ನಿಮ್ಮ ಮೈತ್ರಿ ಶಕ್ತಿ ತೋರಿಸಿ

ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಮೊದಲು ರಾಜ್ಯದ ರೈತರಿಗೆ ಎಕರೆಗೆ 50 ಸಾವಿರ ರೂಪಾಯಿ ಬರ ಪರಿಹಾರ ಕೊಡಿಸಲಿ. ಕೇಂದ್ರದಲ್ಲಿ ಮಂತ್ರಿಯಾಗಿ ರಾಜ್ಯಕ್ಕೆ ಏನು ತಂದಿದ್ದೀರಿ ಎಂಬುದನ್ನು ತೋರಿಸಿ. ಬರಿ ಸುಳ್ಳು ದಾಖಲೆಗಳ ಮೂಲಕ ಬ್ಲ್ಯಾಕ್ ಮೇಲ್ ಮಾಡುವುದನ್ನು ಬಿಟ್ಟು ಜನೋಪಕಾರಿ ಕೆಲಸ ಮಾಡಿ ಎಂದು ಬಾಲಕೃಷ್ಣ ಚಾಟಿ ಬೀಸಿದ್ದಾರೆ. ಈ ಹಿಂದೆ ತಮ್ಮ ಫ್ರೆಂಡ್ ಆಗಿದ್ದ ಕುಮಾರಸ್ವಾಮಿ ಬಗ್ಗೆ ಈಗ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ನಡುವಿನ ಸ್ನೇಹಕ್ಕೆ ಎಳ್ಳುನೀರು ಬಿಟ್ಟರು.

ShareTweetSendShare
Join us on:

Related Posts

ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ

ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೇ ಕಮಿಷನ್ ದಂಧೆ ಮಿತಿಮೀರಿದೆ ಎಂದ ಗುತ್ತಿಗೆದಾರರ ಸಂಘ:ಗ್ಯಾರಂಟಿಗಳಿಗೆ ಹಣವಿದೆ ಗುತ್ತಿಗೆದಾರರಿಗೆ ಇಲ್ಲವೇ? 40 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ಆಕ್ರೋಶ

by Shwetha
October 1, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಿಕೆ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಗುತ್ತಿಗೆದಾರರ ಸಂಘದಿಂದ ಅತಿ ದೊಡ್ಡ ಸಂಕಷ್ಟ ಎದುರಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬಾಕಿ ಇರುವ...

ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಇಡೀ ದೇಶಕ್ಕೆ ಮಾಡೆಲ್: ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದು, ನಾನು ಪಿ ಹೆಚ್ ಡಿ ಮಾಡಿದ್ದೇನೆ-ಬಿ ಕೆ ಹರಿಪ್ರಸಾದ್

ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಇಡೀ ದೇಶಕ್ಕೆ ಮಾಡೆಲ್: ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದು, ನಾನು ಪಿ ಹೆಚ್ ಡಿ ಮಾಡಿದ್ದೇನೆ-ಬಿ ಕೆ ಹರಿಪ್ರಸಾದ್

by Shwetha
October 1, 2026
0

ಶಿಕಾರಿಪುರ: ಕರ್ನಾಟಕ ರಾಜಕಾರಣದಲ್ಲಿ ಹಿರಿಯ ಮತ್ತು ಕಿರಿಯ ನಾಯಕರ ನಡುವಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಶಿಕಾರಿಪುರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ...

ಕುಮಾರಸ್ವಾಮಿ ಆರೋಪಕ್ಕೆ ಡಿಕೆಶಿ ತಿರುಗೇಟು: ‘ನನ್ನ ₹1,400 ಕೋಟಿ ಆಸ್ತಿ ಕಾನೂನುಬದ್ಧವಾಗಿ ಸಂಪಾದಿಸಿದ್ದು’

ಕುಮಾರಸ್ವಾಮಿ ಆರೋಪಕ್ಕೆ ಡಿಕೆಶಿ ತಿರುಗೇಟು: ‘ನನ್ನ ₹1,400 ಕೋಟಿ ಆಸ್ತಿ ಕಾನೂನುಬದ್ಧವಾಗಿ ಸಂಪಾದಿಸಿದ್ದು’

by Shwetha
October 1, 2026
0

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆಸ್ತಿ ಹಾಗೂ ನೈಸ್‌ ಯೋಜನೆಗೆ ಸಂಬಂಧಿಸಿದಂತೆ ಮಾಡಿರುವ ಆರೋಪಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ...

ಮಂಗಳೂರಿನ MRPLನಲ್ಲಿ ಭೀಕರ ಸ್ಫೋಟ: ಓರ್ವ ಸಾವು, 9 ಮಂದಿಗೆ ಗಾಯ; ಮನೀಶ್ ಮೃತದೇಹ ಪತ್ತೆ

ಮಂಗಳೂರಿನ MRPLನಲ್ಲಿ ಭೀಕರ ಸ್ಫೋಟ: ಓರ್ವ ಸಾವು, 9 ಮಂದಿಗೆ ಗಾಯ; ಮನೀಶ್ ಮೃತದೇಹ ಪತ್ತೆ

by Shwetha
October 1, 2026
0

ಮಂಗಳೂರು ಹೊರವಲಯದ ಜೋಕಟ್ಟೆ ಬಳಿಯಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಕೋಕರ್ ಹೈಡ್ರೋ ಟ್ರೀಟರ್ (CHT) ಘಟಕದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರೀ ಸ್ಫೋಟ...

ದಿನ ಭವಿಷ್ಯ (26-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (01-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
October 1, 2026
0

ದಿನ ಭವಿಷ್ಯ: 01-10-2026 1. ಮೇಷ ರಾಶಿ (ಅಶ್ವಿನಿ, ಭರಣಿ, ಕೃತಿಕಾ 1ನೇ ಪಾದ): ವೃತ್ತಿ ಮತ್ತು ಉದ್ಯೋಗ: ಕಚೇರಿಯಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿವೆ. ಹೊಸ ಯೋಜನೆಗಳನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram