ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ನಿರೂಪ್‌ ಭಂಡಾರಿ ನಟನೆಯ ʻಸತ್ಯ ಸನ್‌ ಆಫ್‌ ಹರಿಶ್ಚಂದ್ರʼ ಸಿನಿಮಾದ ಟೀಸರ್‌ ರಿಲೀಸ್;‌ ಅತಿಥಿ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ನಟನೆ

admin by admin
October 27, 2026
in Cinema, Newsbeat, ಮನರಂಜನೆ
sathya-son-of-harishchandra-teaser-release-nirup-bhandari-shivarajkumar

sathya-son-of-harishchandra-teaser-release-nirup-bhandari-shivarajkumar

Share on FacebookShare on TwitterShare on WhatsappShare on Telegram

ಬೆಂಗಳೂರು: ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್‌ ಭಂಡಾರಿ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾದ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ. ತೀರ್ಥಹಳ್ಳಿ ಸೇರಿದಂತೆ ಸುಂದರ ತಾಣಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣಗೊಂಡಿರುವ ಈ ಚಿತ್ರದ ಟೀಸರ್‌ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ವಿಶೇಷವೆಂದರೆ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಅತ್ಯಂತ ಮಹತ್ವದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರಕ್ಕೆ ದೊಡ್ಡ ಶಕ್ತಿ ತುಂಬಿದ್ದಾರೆ. ಅಲ್ಲದೆ, ಟೀಸರ್‌ಗೆ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಅವರು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. “ರಾಜಾ ಹರಿಶ್ಚಂದ್ರ ಕಾಲದಿಂದಲೂ ಈ ಹೆಸರಿಗೆ ಒಂದು ದೊಡ್ಡ ಗೌರವ ಮತ್ತು ತೂಕವಿದೆ. ಕಥೆ ಕೇಳಿದ ತಕ್ಷಣ ನನಗೆ ತುಂಬಾ ಇಷ್ಟವಾಯಿತು. ‘ರಂಗಿತರಂಗ’ ನಂತರ ಮತ್ತೆ ನಿರೂಪ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಹರಿಶ್ಚಂದ್ರ, ನಾನು ಸತ್ಯವನ್ನೇ ಹೇಳುತ್ತೇನೆ, ಇದು ನಿಜಕ್ಕೂ ಅತ್ಯುತ್ತಮವಾದ, ಭಾವನಾತ್ಮಕವಾದ ಸಿನಿಮಾ” ಎಂದರು. ಇದೇ ವೇಳೆ ಶಿವಣ್ಣ ಅವರ ಎಂಟ್ರಿ ಕುರಿತು ಮೆಲುಕು ಹಾಕಿದ ಸಾಯಿಕುಮಾರ್, “ಶಿವಣ್ಣನನ್ನು ಭೇಟಿಯಾದಾಗ ಈ ಕಥೆ ಹಾಗೂ ಪಾತ್ರದ ಬಗ್ಗೆ ಪ್ರಸ್ತಾಪಿಸಿದೆ. ಅವರು ತಕ್ಷಣವೇ ನಿರೂಪ್‌ಗೆ ಕರೆ ಮಾಡಲು ಹೇಳಿ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಪಾತ್ರ ಮಾಡಲು ಒಪ್ಪಿಕೊಂಡರು. ಅವರ ಉಪಸ್ಥಿತಿ ಸಿನಿಮಾಗೆ ಬಹುದೊಡ್ಡ ಬಲ ತಂದಿದೆ” ಎಂದು ಶಿವಣ್ಣನ ಸರಳತೆಯನ್ನು ಕೊಂಡಾಡಿದರು.

Related posts

sathya-son-of-harishchandra-shivarajkumar-cameo-nirup-bhandari

ನಿರೂಪ್‌ ಭಂಡಾರಿ ನಟನೆಯ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅತಿಥಿ ಪಾತ್ರ

October 27, 2026
its-a-medical-miracle-ott-success-15-million-viewing-minutes-manoramamax

ಒಟಿಟಿಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಧಮಾಕ; ಮೊದಲ ವಾರದಲ್ಲೇ 1.5 ಕೋಟಿ ನಿಮಿಷಗಳ ವೀಕ್ಷಣಾ ಸಮಯ ದಾಖಲು, 4 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭ

October 27, 2026

ನಾಯಕ ನಟ ನಿರೂಪ್ ಭಂಡಾರಿ ಮಾತನಾಡಿ, “ಈ ಸಿನಿಮಾಗಾಗಿ ನನ್ನ ಜೀವನದ ಎರಡು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ನಿರ್ದೇಶಕ ಸಚಿನ್ ಕಥೆ ಹೇಳಿದಾಗ ಇಷ್ಟವಾಯಿತು, ನಾವಿಬ್ಬರೂ ಜೊತೆಯಾಗಿ ಕುಳಿತು ಎರಡು-ಮೂರು ತಿಂಗಳು ಲ್ಯಾಪ್‌ಟಾಪ್‌ನಲ್ಲೇ ಸಂಪೂರ್ಣ ಚಿತ್ರಕಥೆಯನ್ನು ಹೊಸದಾಗಿ ತಿದ್ದಿ ತೀಡಿದೆವು. ಹರಿಶ್ಚಂದ್ರನ ಪಾತ್ರಕ್ಕೆ ಸಾಯಿಕುಮಾರ್ ಸರ್ ಸೂಕ್ತ ಎಂದು ನಮ್ಮ ತಂದೆ ಸೂಚಿಸಿದರು. ಇನ್ನು ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸಮಯದಲ್ಲೂ ಅವರು ತೋರಿದ ಬದ್ಧತೆ, ಉತ್ಸಾಹ ಅದ್ಭುತ. ಶಾಟ್‌ಗೆ ಕರೆದ ತಕ್ಷಣ ಓಡೋಡಿ ಬಂದು ನಟಿಸುತ್ತಿದ್ದರು, ಡೈಲಾಗ್‌ಗಳನ್ನು ಮೊದಲೇ ಕಂಠಪಾಠ ಮಾಡಿಕೊಂಡು ತಯಾರಾಗಿದ್ದರು. ಅದಕ್ಕಾಗಿಯೇ ಅವರು ನಿಜವಾದ ಸೂಪರ್‌ಸ್ಟಾರ್. ಪುಣೆಯಿಂದ ಬಂದು ಕನ್ನಡದಲ್ಲೇ ಮೊದಲ ಸಿನಿಮಾ ನಿರ್ಮಿಸುತ್ತಿರುವ ನಿರ್ಮಾಪಕ ಅಂಕಿತ್ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ತಿಳಿಸಿದರು.

ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಬೃಂದಾ ಆಚಾರ್ಯ ಮಾತನಾಡಿ, “ಸಾಯಿಕುಮಾರ್ ಸರ್ ಅವರಂತಹ ದಿಗ್ಗಜರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದೇ ಒಂದು ಸೌಭಾಗ್ಯ. ಪರಭಾಷೆಯಿಂದ ಬಂದರೂ ಕನ್ನಡ ಸಿನಿಮಾಗೆ ಜೀವ ತುಂಬುತ್ತಿರುವ ನಿರ್ಮಾಪಕರಿಗೆ ಧನ್ಯವಾದಗಳು. ಹೆದರಿಕೆ ಮತ್ತು ಜವಾಬ್ದಾರಿಯ ನಡುವೆ ಒಂದು ಸಂಪೂರ್ಣ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುತ್ತಿದ್ದೇವೆ. ಭಾವನಾತ್ಮಕ ಅಂಶಗಳ ಜೊತೆಗೆ ಸಾಯಿಕುಮಾರ್ ಮತ್ತು ಶಿವಣ್ಣ ಸರ್ ಅವರ ನಟನೆಯಿಂದಾಗಿ ಸಿನಿಮಾ ಭರ್ಜರಿ ಮಾಸ್ ಆಗಿಯೂ ಮೂಡಿಬಂದಿದೆ” ಎಂದರು.

ಮತ್ತೊಬ್ಬ ನಾಯಕಿ ಅಂಕಿತಾ ಅಮರ್ ಮಾತನಾಡುತ್ತಾ, “ಚಿತ್ರದಲ್ಲಿ ನಾನು ಪತ್ರಕರ್ತೆಯಾಗಿ ‘ಗಾನ’ ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಆ ಪಾತ್ರದಲ್ಲಿ ಒಂದು ಶಿಸ್ತು ಮತ್ತು ಪ್ರಾಮಾಣಿಕತೆ ಇತ್ತು. ಸಿನಿಮಾ ಕೇವಲ ಮನರಂಜನೆಯಷ್ಟೇ ಅಲ್ಲದೆ ತಂದೆ-ತಾಯಂದಿರ ಮೇಲಿನ ಪ್ರೀತಿ ಮತ್ತು ಸಂಸ್ಕಾರದ ಮಹತ್ವವನ್ನು ಸಾರುತ್ತದೆ. ಚಿತ್ರೀಕರಣದ ವೇಳೆ ಸಾಯಿಕುಮಾರ್ ಅವರ 50 ವರ್ಷಗಳ ಸಿನಿಮಾ ಜರ್ನಿಯ ಸಂಭ್ರಮವನ್ನು ಕೇಕ್ ಕತ್ತರಿಸಿ ಆಚರಿಸಿದೆವು. ಅಷ್ಟು ದೊಡ್ಡ ನಟರಾಗಿದ್ದರೂ ‘ನನಗೆ ಸ್ವರ ಕೊಟ್ಟಿದ್ದು ತಂದೆ, ಸಂಸ್ಕಾರ ನೀಡಿದ್ದು ತಾಯಿ’ ಎಂದು ಹೇಳುವ ಅವರ ವಿನಮ್ರತೆ ನಮ್ಮೆಲ್ಲರಿಗೂ ಆದರ್ಶ” ಎಂದು ತಮ್ಮ ಅನುಭವ ಹಂಚಿಕೊಂಡರು.

ವಿಶೇಷವೆಂದರೆ ನಟ ನಿರೂಪ್ ಭಂಡಾರಿ ಅವರೇ ಚಿತ್ರಕಥೆ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದು, ಪ್ರಶಾಂತ್ ಮುಲಗೆ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸಚಿನ್ ವಾಲಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ, ಶೌರ್ಯ, ಅಭಿಷೇಕ್ ಶ್ರೀಕಾಂತ್, ಅಶ್ವಿನ್ ಹಾಸನ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ನಟಿಸಿದೆ. ಈ ಸಂಪೂರ್ಣ ಕೌಟುಂಬಿಕ ಮನರಂಜನೆಯ ಸಿನಿಮಾ 2027ರ ಜನವರಿ 22ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.

ShareTweetSendShare
Join us on:

Related Posts

sathya-son-of-harishchandra-shivarajkumar-cameo-nirup-bhandari

ನಿರೂಪ್‌ ಭಂಡಾರಿ ನಟನೆಯ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅತಿಥಿ ಪಾತ್ರ

by admin
October 27, 2026
0

ಬೆಂಗಳೂರು: ನಟ ನಿರೂಪ್‌ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ...

its-a-medical-miracle-ott-success-15-million-viewing-minutes-manoramamax

ಒಟಿಟಿಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಧಮಾಕ; ಮೊದಲ ವಾರದಲ್ಲೇ 1.5 ಕೋಟಿ ನಿಮಿಷಗಳ ವೀಕ್ಷಣಾ ಸಮಯ ದಾಖಲು, 4 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭ

by admin
October 27, 2026
0

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರಿಯ ಕಾಮಿಕ್ ಥ್ರಿಲ್ಲರ್ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಇದೀಗ ಡಿಜಿಟಲ್ ಜಗತ್ತಿನಲ್ಲೂ ಭರ್ಜರಿ ಯಶಸ್ಸು ಕಾಣುತ್ತಿದೆ. ಪ್ರಸಿದ್ಧ ಒಟಿಟಿ...

bhavantara-kannada-movie-trailer-karthik-sharma-transgender-love-story

ಗಮನ ಸೆಳೆಯುತ್ತಿದೆ ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಟ್ರೇಲರ್! ಟ್ರೈಆಂಗಲ್ ಲವ್ ಸ್ಟೋರಿ ಜೊತೆ ಮಂಗಳಮುಖಿಯರ ಬದುಕಿನ ಅನಾವರಣ

by admin
October 27, 2026
0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ನೈಜ ಕಥಾಹಂದರ ಹೊಂದಿರುವ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆಯಾಗಿ ‘ಭಾವಾಂತರ’ ಸಿನಿಮಾ ಸದ್ದು ಮಾಡುತ್ತಿದೆ. ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ...

naman-arora-kannada-debut-hubballi-hunters-sandalwood

ಇಂಡಿಯಾಸ್ ಗಾಟ್ ಲೇಟೆಂಟ್’ ಖ್ಯಾತಿಯ ನಟ ನಮನ್ ಅರೋರಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ

by admin
October 27, 2026
0

ಬೆಂಗಳೂರು: ದೇಶಾದ್ಯಂತ ಡಿಜಿಟಲ್ ಮನರಂಜನಾ ಲೋಕದಲ್ಲಿ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸಹಜ ಹಾಸ್ಯ ಮತ್ತು ನಟನೆಯ ಮೂಲಕ ಗಮನ ಸೆಳೆದಿರುವ ಖ್ಯಾತ ನಟ ಹಾಗೂ ಸ್ಟ್ಯಾಂಡಪ್...

navu-tumba-olleyavaru-kannada-movie-trailer-release-december-2026

ಪಪ್ಪಿ’ ತಂಡದಿಂದ ಮತ್ತೊಂದು ಜವಾರಿ ಸೊಗಡಿನ ಚಿತ್ರ; ‘ನಾವು ತುಂಬಾ ಒಳ್ಳೆಯವರು’ ಟ್ರೇಲರ್‌ ಬಿಡುಗಡೆ, ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್

by admin
October 27, 2026
0

ಕಳೆದ ವರ್ಷ ಪ್ರೇಕ್ಷಕರ ಮನಗೆದ್ದು ಗಮನಾರ್ಹ ಯಶಸ್ಸು ಕಂಡಿದ್ದ ‘ಪಪ್ಪಿ’ ಸಿನಿಮಾದ ಯಶಸ್ವಿ ತಂಡದಿಂದ ಇದೀಗ ಮತ್ತೊಂದು ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ಆಯುಷ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram