ADVERTISEMENT
Wednesday, October 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆರೋಗ್ಯ ಸೇವೆ ದಕ್ಷತೆಗೆ ತಜ್ಞ ವೈದ್ಯರ ಕಮಿಟಿ: ಯು. ಟಿ. ಖಾದರ್

admin by admin
October 27, 2026
in Newsbeat, State, ರಾಜ್ಯ
ut-khader-neurosurgical-robot-mahabodhi-brains-hospital-bengaluru

ut-khader-neurosurgical-robot-mahabodhi-brains-hospital-bengaluru

Share on FacebookShare on TwitterShare on WhatsappShare on Telegram

ಮಹಾಬೋಧಿ ಬ್ರೈನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನ್ಯೂರೋಸರ್ಜಿಕಲ್ ರೋಬೋಟ್

ಆರೋಗ್ಯವಲಯದ ದಕ್ಷತೆ ಹೆಚ್ಚಿಸಲು ತಜ್ಞ ವೈದ್ಯರನ್ನು ಒಳಗೊಂಡ ಮುನ್ನೋಟ ಸಲಹಾ ಸಮಿತಿ ರಚಿಸುವುದಾಗಿ ಆರೋಗ್ಯ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಬೆಂಗಳೂರಿನ ಮಹಾಬೋಧಿ ಬ್ರೈನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ “ವಿಶ್ವ ತೀವ್ರಾಘಾತ ಜಾಗೃತಿ ದಿನ” ಹಾಗೂ “ವಿಶ್ವ ಪಾರ್ಶ್ವವಾಯು ಜಾಗೃತಿ ದಿನ”ದ ಅಂಗವಾಗಿ ಮಂಗಳವಾರ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭ ಖ್ಯಾತ ನರ ಶಸ್ತ್ರಚಿಕಿತ್ಸಾ ತಜ್ಞ ಡಾ. ಎನ್ ಕೆ ವೆಂಕಟರಮಣ ಅವರ ಗೋಲ್ಡನ್ ಅವರ್ ಹಾಗೂ ಮೆದುಳಿನ ಆಘಾತ ಪುಸ್ತಗಳ ಲೋಕಾರ್ಪಣೆ ಹಾಗೂ ನರಶಸ್ತ್ರಚಿಕಿತ್ಸಾ ಸಹಾಯಕ ರೋಬೋಟ್ ಯಂತ್ರವನ್ನು (ನ್ಯೂರೋಸರ್ಜಿಕಲ್ ರೋಬೋಟ್) ಅನಾವರಣಗೊಳಿಸಿದ ಸಚಿವರು, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಬಣ್ಣಿಸಿದರು.
ನಮ್ಮ ಇಲಾಖೆಯಲ್ಲಿ ಬೇರೆ ಬೇರೆ ವಿಷಯಗಳ ಕುರಿತು ತಜ್ಞ ವೈದ್ಯರು ಸಿಕ್ಕಿದ್ದಾರೆ. ಬ್ರೈನ್ ಗೆ ಸಂಬಂಧಿಸಿದ ಸ್ಪೆಶಲಿಸ್ಟ್ ಡಾ.ವೆಂಕಟರಮಣ ಇಂದು ನಮಗೆ ದೊರೆತಿರುವುದು ಸಂತಸ ತಂದಿದೆ. ನಮ್ಮ ಕಮಿಟಿಗೆ ಅವರ ಸಲಹೆ ಸೂಚನೆ, ಮಾರ್ಗದರ್ಶನ ಅಗತ್ಯವಾಗಿ ಬೇಕು ಎಂದು ಹೇಳಿದರು.
ಬ್ರೇನ್ಗೆ ಸಂಬಂಧಿಸಿದ ನ್ಯೂರೋಸರ್ಜಿಕಲ್ ರೋಬೋಟ್ ಅನ್ನು ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸುತ್ತಿರುವುದು ಬಹಳ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ಯಂತ್ರಗಳ ಬೇರೆ ಬೇರೆ ಕಡೆ ತರಿಸಿಕೊಳ್ಳಲು ಇದು ಪ್ರೇರಣೆಯಾಗಲಿದೆ ಎಂದರು.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಪ್ರತಿಯೊಬ್ಬರೂ ರೋಗಗಳು ಬಾರದಂತೆ ಮುನ್ನೆಚ್ಚರಿಗೆ ವಹಿಸಬೇಕು. ಜನರಲ್ಲಿ ಈ ಕುರಿತು ಜಾಗೃತಿ ಬಹಳ ಅಗತ್ಯ. ಯಾವುದೇ ಸ್ಟ್ರೋಕ್ ಆಗಬಾರದು. ಅಕಸ್ಮಾತ್ ಸಂಭವಿಸಿದರೆ, ಅದನ್ನು ಮೆಟ್ಟಿ ಹೊರಬರಲು ಗೋಲ್ಡನ್ ಅವರ್ಸ್ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಮುಖ್ಯ. ಈ ಕುರಿತು ದೊಡ್ಡ ಮಟ್ಟದ ಜನಜಾಗೃತಿ ಅಗತ್ಯ ಎಂದು ಹೇಳಿದರು.
ಧೂಮಪಾನ, ಬಿಪಿ, ಕೊಲೆಸ್ಟಾಲ್, ಶುಗರ್ ಇವುಗಳನ್ನು ಕಡಿತಗೊಳಿಸಿದರೆ, ಮುಂದಿನ ಹತ್ತು ವರ್ಷದಲ್ಲಿ ಸ್ವಲ್ಪ ಮಟ್ಟದಲ್ಲಾದರೂ ರೋಗಗಳನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ನಾವು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಂದಲೇ ಅಂತಹ ಪದ್ಧತಿಗಳನ್ನು ಮೈಗೂಡಿಸಿಕೊಳ್ಳಲು ಪೋಷಕರು ಅಗತ್ಯ ಪ್ರೇರಣೆ ನೀಡಬೇಕು ಎಂದರು.
ಉಪ್ಪು, ಸಕ್ಕರೆ ಹಾಗೂ ಎಣ್ಣೆ ಬಳಕೆಯ ಬಗ್ಗೆ ಒಂದಷ್ಟು ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆರೋಗ್ಯಕರ ಆಹಾರ ಸೇವನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವುದಕ್ಕಿಂತ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಕ್ರಮ. ಈ ನಿಟ್ಟಿನಲ್ಲಿ ವೈದ್ಯರು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ತಾಯಂದಿರು ವಿಶೇಷ ಕಾಳಜಿ ವಹಿಸಬೇಕು. ಆಗ ಆರೋಗ್ಯಕರ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ. ಶುದ್ಧ ನೀರು, ಗಾಳಿ, ಆಹಾರ ಜನರಿಗೆ ದೊರಕಬೇಕು ಈ ನಿಟ್ಟಿನಲ್ಲಿ ಮತ್ತಷ್ಟು ನಿಯಂತ್ರಣ ಕಾಯ್ದೆಗಳನ್ನು ಜಾರಿಗೊಳಿಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ರಾಜ್ಯ ಸ್ಕೌಟ್ಸ್ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ ಮಾತನಾಡಿ, ಬೆಂಗಳೂರು ನಗರವನ್ನು ಉತ್ತಮ ಆರೋಗ್ಯ ನಗರವನ್ನಾಗಿ ಮಾಡಲು ಸರ್ಕಾರ ಮತ್ತು ವೈದ್ಯಕೀಯ ಸಮುದಾಯ ಜೊತೆಗೂಡಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಖ್ಯಾತ ನ್ಯೂರೋ ಸರ್ಜನ್ ಡಾ. ವೆಂಕಟರಮಣ ಮಾತನಾಡಿ, ಅಪಘಾತ ಸಂಭವಿಸಿದಾಗ ಅಥವಾ ಸ್ಟ್ರೋಕ್ ಆದಾಗ ಗೋಲ್ಡ್ನ್ ಅವರ್ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.
ನ್ಯೂರೋಸರ್ಜಿಕಲ್ ರೋಬೋಟ್ ಅತ್ಯಾಧುನಿಕ ಯಂತ್ರವನ್ನು ದೇಶದಲ್ಲೇ ಮೊದಲ ಬಾರಿಗೆ ತೈವಾನ್ನಿಂದ ತರಿಸಲಾಗಿದೆ. ಇದರಿಂದ ಮೆದುಳಿನಲ್ಲಿ ಅಳವಾಗಿ ಆಗಿರುವ ತೊಂದರೆ, ಗಾಯಗಳನ್ನು ಪತ್ತೆಹಚ್ಚಿ ಉತ್ತಮ ಚಿಕಿತ್ಸೆ ದೊರಕಲಿದೆ. ಇದರಿಂದ ಸಾವಿನ ಪ್ರಮಾಣ, ಅಂಗವಿಕಲತೆಯ ಪ್ರಮಾಣವು ಕಡಿಮೆಯಾಗಲಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಡಾಕ್ಟರ್ ಕೆ ಆರ್ ಕಮಲೇಶ್ ಮಾತನಾಡಿ, ಮೆದುಳಿನ ಆಘಾತ ಕನ್ನಡದ ಅತ್ಯುತ್ತಮ ವೈದ್ಯಕೀಯ ಕೃತಿಯಾಗಿದ್ದು ಇದು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ತಲಪುವಂತೆ ಮಾಡಲು ಸರ್ಕಾರ ಆಸಕ್ತಿ ವಹಿಸಬೇಕು ಎಂದು ಕೋರಿದರು.
ಈ ಸಂದರ್ಭ ಭಂತೆ ಧಮ್ಮರತ್ನ, ಭಂತೆ ಸುಗತಾನಂದ ಸಾನಿಧ್ಯ ವಹಿಸಿದ್ದರು. ಸ್ಟಾರ್ ಡಮ್ ಪ್ರಕಾಶಕ ರಾಮ್ ಆನಂದ್, ರೈಟ್ ಅವೆನ್ಯೂ ಮೆಡ್ ಟೆಕ್ ಗ್ಲೋಬಲ್ನ ಸಿಇಒ ಆಯನ್ ಚಕ್ರವರ್ತಿ ಉಪಸ್ಥಿತರಿದ್ದರು.

Related posts

jio-platforms-blockbuster-listing-reliance-becomes-indias-most-valuable-business-group-2026

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಪದಾರ್ಪಣೆ: ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾದ ರಿಲಯನ್ಸ್!

October 28, 2026
jio-platforms-ipo-listing-share-price-investors-wealth-rises-2-76-lakh-crore

ಜಿಯೋ ಪ್ಲಾಟ್‌ಫಾರ್ಮ್ಸ್ ಬಂಪರ್ ಲಿಸ್ಟಿಂಗ್: ಮೊದಲ ದಿನವೇ ಹೂಡಿಕೆದಾರರ ಸಂಪತ್ತು ₹2.76 ಲಕ್ಷ ಕೋಟಿ ಹೆಚ್ಚಳ

October 28, 2026
ShareTweetSendShare
Join us on:

Related Posts

jio-platforms-blockbuster-listing-reliance-becomes-indias-most-valuable-business-group-2026

ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಪದಾರ್ಪಣೆ: ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾದ ರಿಲಯನ್ಸ್!

by admin
October 28, 2026
0

  * ದ್ವಿತೀಯ ಸ್ಥಾನಕ್ಕೆ ಸರಿದ ಟಾಟಾ ಗ್ರೂಪ್; ಮೂರನೇ ಸ್ಥಾನದಲ್ಲಿ ಅದಾನಿ ಗ್ರೂಪ್ * ರಿಲಯನ್ಸ್ ಸಮೂಹದ ಒಟ್ಟು ಮಾರುಕಟ್ಟೆ ಮೌಲ್ಯ ₹28.9 ಲಕ್ಷ ಕೋಟಿಗೆ...

jio-platforms-ipo-listing-share-price-investors-wealth-rises-2-76-lakh-crore

ಜಿಯೋ ಪ್ಲಾಟ್‌ಫಾರ್ಮ್ಸ್ ಬಂಪರ್ ಲಿಸ್ಟಿಂಗ್: ಮೊದಲ ದಿನವೇ ಹೂಡಿಕೆದಾರರ ಸಂಪತ್ತು ₹2.76 ಲಕ್ಷ ಕೋಟಿ ಹೆಚ್ಚಳ

by admin
October 28, 2026
0

ಮುಂಬೈ, -  ಷೇರು ಮಾರುಕಟ್ಟೆಯಲ್ಲಿ ಈ ಬಾರಿ ದೀಪಾವಳಿ ಅಕ್ಟೋಬರ್ ನಲ್ಲಿಯೇ ಬಂದಂಥ ಸಂಭ್ರಮ ಕಂಡುಬಂದಿದೆ. ಲಿಸ್ಟಿಂಗ್ ಆದ ಮೊದಲ ದಿನವೇ ಜಿಯೋ ಪ್ಲಾಟ್‌ಫಾರ್ಮ್ಸ್ ಹೂಡಿಕೆದಾರರಿಗೆ ಭರ್ಜರಿ...

ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!

ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!

by Shwetha
October 28, 2026
0

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ನಡುವೆಯೇ ಹೊತ್ತಿಕೊಂಡಿದ್ದ ಸರ್ಕಾರ ಮತ್ತು ರಾಜಮನೆತನದ ನಡುವಿನ ಶೀತಲ ಸಮರ ಈಗ ಜನಸಾಮಾನ್ಯರ ಆಕ್ರೋಶಕ್ಕೆ ನಾಂದಿ ಹಾಡಿದೆ. ಅರಮನೆ ಬೋರ್ಡ್ ಸರ್ಕಾರದ್ದು,...

ಆಸ್ತಿ ಮಾರ್ಗಸೂಚಿ ದರ ಶೇ. 10ರಿಂದ 40ರವರೆಗೆ ಹೆಚ್ಚಳಕ್ಕೆ ಚಿಂತನೆ: 2027ರ ಜನವರಿಯಿಂದ ಹೊಸ ದರ ಜಾರಿ ಸಾಧ್ಯತೆ

ಆಸ್ತಿ ಮಾರ್ಗಸೂಚಿ ದರ ಶೇ. 10ರಿಂದ 40ರವರೆಗೆ ಹೆಚ್ಚಳಕ್ಕೆ ಚಿಂತನೆ: 2027ರ ಜನವರಿಯಿಂದ ಹೊಸ ದರ ಜಾರಿ ಸಾಧ್ಯತೆ

by Shwetha
October 28, 2026
0

ಕರ್ನಾಟಕದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ. 10ರಿಂದ ಶೇ. 40ರವರೆಗೆ ಹೆಚ್ಚಿಸುವ ಸಾಧ್ಯತೆ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಮಾರುಕಟ್ಟೆಯಲ್ಲಿನ ಆಸ್ತಿ ಮೌಲ್ಯಕ್ಕೆ...

ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ: 1.22 ಕೋಟಿ ಮಹಿಳೆಯರಿಗೆ ₹79,404 ಕೋಟಿ ವಿತರಣೆ ಎಂದ ಎಚ್‌.ಎಂ. ರೇವಣ್ಣ

ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ: 1.22 ಕೋಟಿ ಮಹಿಳೆಯರಿಗೆ ₹79,404 ಕೋಟಿ ವಿತರಣೆ ಎಂದ ಎಚ್‌.ಎಂ. ರೇವಣ್ಣ

by Shwetha
October 28, 2026
0

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸುತ್ತಿದೆ. ಈಗಾಗಲೇ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram