ಮುಂಗಾರು ಕೈಕೊಟ್ಟು ನಾಲ್ಕು ತಿಂಗಳು ಕಳೆದಿವೆ. ಇಷ್ಟು ದಿನ ರೈತರ ಬೆಳೆಹಾನಿಯ ಮಾಹಿತಿ ಸಂಗ್ರಹಿಸದೆ, ಪರಿಹಾರದ ಪಟ್ಟಿ ಸಿದ್ಧಪಡಿಸದೆ ನಿಮ್ಮ ಸರ್ಕಾರ ಏನು ಕತ್ತೆ ಕಾಯುತ್ತಿತ್ತಾ?
ಈಗ ಫ್ರೂಟ್ಸ್ ತಂತ್ರಾಂಶ, ಆಧಾರ್ ಲಿಂಕ್, ಬ್ಯಾಂಕ್ ಖಾತೆ, ಆರ್ಟಿಸಿ ಎಂದು ಹತ್ತಾರು ಷರತ್ತುಗಳನ್ನು ಮುಂದಿಟ್ಟು ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಲು ಹೊರಟಿದ್ದೀರಿ. ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಪರಿಹಾರ ಕೊಡುವ ಬದಲು ಮತ್ತಷ್ಟು ಕಿರುಕುಳ ಕೊಟ್ಟು, ವಿಳಂಬ ಮಾಡಿ ಕಡೆಗೆ ಪರಿಹಾರವನ್ನೇ ಕೊಡದಿರುವುದೇ ನಿಮ್ಮ ಅಸಲಿ ಉದ್ದೇಶವೇ?
ಈ ಹಿಂದೆ ಬರ ಪರಿಹಾರ, ಬೆಳೆಹಾನಿ ಪರಿಹಾರ ವಿತರಣೆಯಲ್ಲಿನ ಎಡವಟ್ಟುಗಳಿಂದಲೂ ಪಾಠ ಕಲಿಯದ ನಿಮ್ಮ @INCKarnataka ಸರ್ಕಾರ, ಈ ಬಾರಿಯೂ ಅದೇ ತಪ್ಪುಗಳನ್ನು ಪುನರಾವರ್ತಿಸಲು ಹೊರಟಿದೆ. ತಂತ್ರಾಂಶದ ಸಮಸ್ಯೆ, ದಾಖಲೆಗಳ ಗೊಂದಲ ಇವೆಲ್ಲವನ್ನೂ ಸರಿಪಡಿಸುವುದು ಸರ್ಕಾರದ ಜವಾಬ್ದಾರಿ. ಅದನ್ನು ರೈತರ ತಲೆಗೆ ಕಟ್ಟುವುದು ನಿಮ್ಮ ಹೊಣೆಗೇಡಿತನಕ್ಕೆ ಸಾಕ್ಷಿ!
ರೈತರಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ಇಲ್ಲವೇ? ಖಜಾನೆ ಖಾಲಿಯಾಗಿದೆಯೇ? ಧೈರ್ಯವಿದ್ದರೆ ಅದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳಿ. ಅದನ್ನು ಬಿಟ್ಟು ಷರತ್ತುಗಳ ಜಾಲ ಹೆಣೆದು ರೈತರನ್ನು ಸತಾಯಿಸಬೇಡಿ.
ನಮ್ಮ ಆಗ್ರಹ ಸ್ಪಷ್ಟ:
✔️ತಕ್ಷಣವೇ ಅರ್ಹ ರೈತರ ಪಟ್ಟಿಯನ್ನು ಅಂತಿಮಗೊಳಿಸಿ.
✔️FRUITS ತಂತ್ರಾಂಶ ಅಥವಾ ಆಧಾರ್ ಲಿಂಕ್ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಲಿ.
✔️ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ಪರಿಹಾರದ ಹಣವನ್ನು ವಿಳಂಬವಿಲ್ಲದೆ ಜಮೆ ಮಾಡಲಿ.
ರೈತರ ಬೆವರು, ಶ್ರಮ ಮತ್ತು ಬೆಳೆ ನಷ್ಟಕ್ಕೆ ಪರಿಹಾರ ಕೇಳುವುದು ಭಿಕ್ಷೆಯಲ್ಲ; ಅದು ಅವರ ಹಕ್ಕು.
ಅಧಿಕಾರದ ಅಮಲಿನಲ್ಲಿ ರೈತರ ನೋವನ್ನು ಮರೆಯಬೇಡಿ, @DKShivakumar ಅವರೇ. ರೈತರ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಿ. ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ರೈತರ ಕ್ಷಮೆ ಕೇಳಿ ರಾಜೀನಾಮೆ ಕೊಟ್ಟು ಮನೆಗೆ ನಡೀರಿ!








