ADVERTISEMENT
Sunday, November 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇತಿಹಾಸದ ವೈಭವಕ್ಕೆ ನೃತ್ಯದ ಮೆರುಗು; ಯಶಸ್ವಿಯಾಗಿ ಮೂಡಿಬಂದ ‘ಪುನರ್ನವ’

admin by admin
November 1, 2026
in Newsbeat, State, ರಾಜ್ಯ
punarnava-bengaluru-rana-kumbha-rajaraja-chola-dance-music-cultural-performance-october-31

punarnava-bengaluru-rana-kumbha-rajaraja-chola-dance-music-cultural-performance-october-31

Share on FacebookShare on TwitterShare on WhatsappShare on Telegram

ಬೆಂಗಳೂರು: ಭಾರತದ ಐತಿಹಾಸಿಕ ಚಕ್ರವರ್ತಿಗಳಾದ ರಾಜಾ ರಾಣಾ ಕುಂಭ ಮತ್ತು ರಾಜರಾಜ ಚೋಳರ ಜೀವನಗಾಥೆಯನ್ನು ನೃತ್ಯ ಮತ್ತು ಸಂಗೀತದ ಮೂಲಕ ಪರಿಚಯಿಸುವ ‘ಪುನರ್ನವ’ ವಿಶೇಷ ಕಲಾ ಪ್ರದರ್ಶನವು ಅಕ್ಟೋಬರ್ 31ರಂದು ನಗರದ ಕಲಾ ಸಂಭ್ರಮದಲ್ಲಿ ಯಶಸ್ವಿಯಾಗಿ ನಡೆಯಿತು.

ನವೀನ್ ಆರ್. ಹೆಗಡೆ ಅವರು ಕಥಕ್ ಮತ್ತು ರಂಗಭೂಮಿಯ ಮೂಲಕ ರಾಜಾ ರಾಣಾ ಕುಂಭ ಅವರ ಜೀವನಗಾಥೆಯನ್ನು ಪ್ರಸ್ತುತಪಡಿಸಿದರೆ, ಸಮುಧ್ಯತಾ ಭಟ್ ಅವರು ಭರತನಾಟ್ಯದ ಮೂಲಕ ರಾಜರಾಜ ಚೋಳರ ಆಡಳಿತ ಮತ್ತು ಸಾಧನೆಗಳನ್ನು ವೇದಿಕೆಯಲ್ಲಿ ಅನಾವರಣಗೊಳಿಸಿದರು. ಪಂಡಿತ್ ಸಮೀರ್ ರಾವ್ ಅವರ ಮೂಲ ಸಂಗೀತ ಸಂಯೋಜನೆ ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿತು. ಇತಿಹಾಸಕಾರರಾದ ಡಾ. ಅನುರಾಧಾ ವಿ. ಅವರು ಸಂವಾದ ನಿರ್ವಹಿಸಿದರು.

Related posts

aashirvaad-smart-india-iodine-awareness-campaign-13-lakh-women-south-india

ಉಪ್ಪಿನಲ್ಲಿದೆ ಆರೋಗ್ಯದ ಗುಟ್ಟು: ಕರ್ನಾಟಕ ಸೇರಿ ದಕ್ಷಿಣ ಭಾರತದ 3 ರಾಜ್ಯಗಳ 13 ಲಕ್ಷ ಮಹಿಳೆಯರಿಗೆ ಅಯೋಡಿನ್ ಪಾಠ

November 1, 2026
itc-mangaldeep-har-bhakt-shri-ram-tak-braille-path-ayodhya-digital-campaign

ಅಯೋಧ್ಯೆಯಲ್ಲಿ ಅಂಧ ಭಕ್ತರಿಗಾಗಿ ‘ಬ್ರೈಲ್ ಮಾರ್ಗ’ ನಿರ್ಮಾಣ: ಐಟಿಸಿ ಮಂಗಳದೀಪ್‌ನಿಂದ ‘ಹರ್ ಭಕ್ತ್ ಶ್ರೀ ರಾಮ್ ತಕ್’ ಡಿಜಿಟಲ್ ಅಭಿಯಾನ

November 1, 2026

ಪರಮ್ ಫೌಂಡೇಶನ್‌ನ ಪರಮ್ ಕಲ್ಚರ್ ವತಿಯಿಂದ ಆಯೋಜಿಸಲಾದ ಈ ಉಪಕ್ರಮದಡಿ ಆಯ್ಕೆಯಾದ ಕಲಾವಿದರಿಗೆ ₹2 ಲಕ್ಷ ಪ್ರೋತ್ಸಾಹಧನದ ಜೊತೆಗೆ ವೇದಿಕೆ, ತಾಲೀಮು ಸ್ಥಳ, ಬೆಳಕು ಮತ್ತು ಧ್ವನಿ ಸೇರಿದಂತೆ ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಇತಿಹಾಸ, ನೃತ್ಯ ಮತ್ತು ಸಂಗೀತದ ಸಮ್ಮಿಲನದೊಂದಿಗೆ ಮೂಡಿಬಂದ ‘ಪುನರ್ನವ’ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜನರಿಗೆ ತಲುಪಿಸುವ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಪರಮ್ ಕಲ್ಚರ್‌ನ ಪ್ರಯತ್ನಕ್ಕೆ ಈ ಕಾರ್ಯಕ್ರಮ ಮತ್ತಷ್ಟು ಬಲ ತುಂಬಿತು.

ShareTweetSendShare
Join us on:

Related Posts

aashirvaad-smart-india-iodine-awareness-campaign-13-lakh-women-south-india

ಉಪ್ಪಿನಲ್ಲಿದೆ ಆರೋಗ್ಯದ ಗುಟ್ಟು: ಕರ್ನಾಟಕ ಸೇರಿ ದಕ್ಷಿಣ ಭಾರತದ 3 ರಾಜ್ಯಗಳ 13 ಲಕ್ಷ ಮಹಿಳೆಯರಿಗೆ ಅಯೋಡಿನ್ ಪಾಠ

by admin
November 1, 2026
0

ಬೆಂಗಳೂರು: ಅಯೋಡಿನ್ ನಮ್ಮ ದೇಹಕ್ಕೆ ಅಗತ್ಯ ಎಂದು ತಿಳಿದಿರುವುದು ಒಂದು ವಿಚಾರವಾದರೆ, ಸೂಕ್ತ ಪ್ರಮಾಣದ ಅಯೋಡಿನ್ ಇರುವ ಉಪ್ಪನ್ನು ಗುರುತಿಸುವುದು, ಅದನ್ನು ಸರಿಯಾಗಿ ಶೇಖರಿಸಿಡುವುದು ಹಾಗೂ ಅಡುಗೆಯಲ್ಲಿ...

itc-mangaldeep-har-bhakt-shri-ram-tak-braille-path-ayodhya-digital-campaign

ಅಯೋಧ್ಯೆಯಲ್ಲಿ ಅಂಧ ಭಕ್ತರಿಗಾಗಿ ‘ಬ್ರೈಲ್ ಮಾರ್ಗ’ ನಿರ್ಮಾಣ: ಐಟಿಸಿ ಮಂಗಳದೀಪ್‌ನಿಂದ ‘ಹರ್ ಭಕ್ತ್ ಶ್ರೀ ರಾಮ್ ತಕ್’ ಡಿಜಿಟಲ್ ಅಭಿಯಾನ

by admin
November 1, 2026
0

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ದೃಷ್ಟಿಚೇತನ (ಅಂಧ) ಭಕ್ತರು ಯಾವುದೇ ಅಡೆತಡೆಯಿಲ್ಲದೆ, ಸುಲಭವಾಗಿ ಹಾಗೂ ಸ್ವತಂತ್ರವಾಗಿ ದೇವರ ದರ್ಶನ ಪಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಐಟಿಸಿ ಮಂಗಳದೀಪ್ ಮುಟ್ಟಿ...

param-vihara-17th-edition-classical-music-bharatanatyam-bengaluru-october-25

ಪರಮ್ ವಿಹಾರದಲ್ಲಿ ಅ. 25ರಂದು ಶಾಸ್ತ್ರೀಯ ಸಂಗೀತ, ಭರತನಾಟ್ಯದ ಸೊಬಗು ಅನಾವರಣ

by admin
November 1, 2026
0

ಬೆಂಗಳೂರು: ಪರಮ್ ಕಲ್ಚರ್ ವತಿಯಿಂದ ಆಯೋಜಿಸಲಾಗುವ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ ‘ಪರಮ್ ವಿಹಾರ’ದ 17ನೇ ಆವೃತ್ತಿಯು ಅಕ್ಟೋಬರ್ 25ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಬೆಂಗಳೂರಿನ ಬನಶಂಕರಿಯಲ್ಲಿರುವ...

shakti-utsava-digital-dasara-jayanagar-param-history-centre-yuvaka-sangha

ಜಯನಗರದ ‘ಶಕ್ತಿ ಉತ್ಸವ’ ಡಿಜಿಟಲ್ ದಸರಾ ವೈಭವಕ್ಕೆ ಅಭೂತಪೂರ್ವ ಯಶಸ್ಸು: ಸಾರ್ವಜನಿಕರ ಮನಗೆದ್ದ ಇತಿಹಾಸ ಮತ್ತು ತಂತ್ರಜ್ಞಾನದ ಸಮ್ಮಿಲನ

by admin
November 1, 2026
0

ಬೆಂಗಳೂರು: ನಗರದ ಜಯನಗರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ವಿನೂತನ ‘ಶಕ್ತಿ ಉತ್ಸವ’ ಡಿಜಿಟಲ್ ದಸರಾ ಪ್ರದರ್ಶನವು ಸಾರ್ವಜನಿಕರ ಹಾಗೂ ಪ್ರಮುಖವಾಗಿ ಯುವ ಪೀಳಿಗೆಯ ಅಪಾರ ಪ್ರಶಂಸೆಗೆ ಪಾತ್ರವಾಗುವ...

bali-in-bengaluru-2026-indonesia-cultural-festival-param-foundation-kecak-yakshagana

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮೇಳೈಸಿದ ಇಂಡೋನೇಷ್ಯಾದ ಬಾಲಿಯ ಕಲಾ ವೈಭವ;ಸಂಸ್ಕೃತಿಯೇ ಜಾಗತಿಕ ಬೆಸುಗೆ: ಕೇಂದ್ರ ಸಚಿವರ ಶ್ಲಾಘನೆ

by admin
November 1, 2026
0

• ಬಾಲಿ–ಬೆಂಗಳೂರು ನಡುವೆ ಸಾಂಸ್ಕೃತಿಕ ಸೇತು • 16 ದಿನಗಳ ಕಾಲ ನಗರದಲ್ಲಿ ಗರಿಗೆದರಿದ ಕಲಾ ಕಲರವ • ಸಂಸ್ಕೃತಿಯೇ ಜಾಗತಿಕ ಬೆಸುಗೆ: ಕೇಂದ್ರ ಸಚಿವರ ಶ್ಲಾಘನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram