ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿಗರಿಗೆ ಪ್ರಮುಖ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಹಬ್ಬದಲ್ಲಿ ಸಿಹಿ ತಿನ್ನಲು ಆಸೆ ಇದ್ದರೂ, ಸಕ್ಕರೆ ಮತ್ತು ಆರೋಗ್ಯದ ಕಾಳಜಿಯಿಂದ ಹಿಂದೇಟು ಹಾಕುವವರಿಗಾಗಿ ಸ್ವಿಗ್ಗಿಯ ಈಟ್ ರೈಟ್ ವಿಭಾಗವು, ನಗರದ ಪ್ರಸಿದ್ಧ ಆನಂದ್ ಸ್ವೀಟ್ಸ್ ಜೊತೆ ಕೈಜೋಡಿಸಿದೆ. ಈ ಒಪ್ಪಂದದ ಮೂಲಕ ಸಕ್ಕರೆ ಬೆರೆಸದ ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಿದೆ.
ಏನೇನು ಸಿಗಲಿದೆ? ಬೆಲೆ ಎಷ್ಟು?
ಈ ವಿಶೇಷ ಹಬ್ಬದ ಕೊಡುಗೆಯಡಿ ದೀಪಾವಳಿಯ ಅಚ್ಚುಮೆಚ್ಚಿನ ಸಿಹಿತಿಂಡಿಗಳಾದ ಶುಗರ್-ಫ್ರೀ ಕಾಜು ಕತ್ಲಿ ಮತ್ತು ಶುಗರ್-ಫ್ರೀ ಸೋನ್ ಪಾಪಡಿ ಲಭ್ಯವಿದೆ. 2026ರ ನವೆಂಬರ್ 3 ರಿಂದ 10ರವರೆಗೆ ಬೆಂಗಳೂರಿನಾದ್ಯಂತ ಸ್ವಿಗ್ಗಿ ಮೂಲಕ ಇವುಗಳನ್ನು ಆರ್ಡರ್ ಮಾಡಬಹುದಾಗಿದ್ದು, ಇದರ ಆರಂಭಿಕ ಬೆಲೆ 295 ರೂ. ಆಗಿದೆ.
ಆರ್ಡರ್ ಮಾಡುವುದು ಹೇಗೆ?
ಗ್ರಾಹಕರು ಸ್ವಿಗ್ಗಿ ಆ್ಯಪ್ನಲ್ಲಿ ಈಟ್ ರೈಟ್ ವಿಭಾಗಕ್ಕೆ ಹೋಗಿ ‘ನೋ ಆಡೆಡ್ ಶುಗರ್’ ಆಯ್ಕೆ ಮಾಡಬಹುದು. ಅಥವಾ ಆ್ಯಪ್ನ ಸರ್ಚ್ ಬಾರ್ನಲ್ಲಿ ನೇರವಾಗಿ “ನೋ ಆಡೆಡ್ ಶುಗರ್ʼ ಎಂದು ಇಂಗ್ಲಿಷ್ನಲ್ಲಿ ಟೈಪ್ ಮಾಡುವ ಮೂಲಕವೂ ಈ ಸಿಹಿತಿಂಡಿಗಳನ್ನು ಹುಡುಕಬಹುದು.
ಹೆಚ್ಚುತ್ತಿದೆ ‘ಶುಗರ್ ಫ್ರೀ’ ಕ್ರೇಜ್
ಹಬ್ಬವೆಂದರೆ ಬಂಧು-ಮಿತ್ರರೊಂದಿಗೆ ಸಿಹಿ ಹಂಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹಬ್ಬದ ಆಚರಣೆಯ ಜೊತೆಗೆ ತಮ್ಮ ಆರೋಗ್ಯ ಹಾಗೂ ಫಿಟ್ನೆಸ್ ಕಡೆಗೂ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸ್ವಿಗ್ಗಿಯ ಅಂಕಿ-ಅಂಶಗಳೂ ಇದನ್ನೇ ಖಚಿತಪಡಿಸುತ್ತವೆ.
2024ರ ದೀಪಾವಳಿಗೆ ಹೋಲಿಸಿದರೆ 2025ರ ದೀಪಾವಳಿಯಲ್ಲಿ ನೋ ಆಡೆಡ್ ಶುಗರ್ ವಿಭಾಗದ ಆರ್ಡರ್ಗಳಲ್ಲಿ ಬರೋಬ್ಬರಿ ಶೇ. 40ರಷ್ಟು ಏರಿಕೆಯಾಗಿತ್ತು. ಕೇವಲ ದೀಪಾವಳಿ ಮಾತ್ರವಲ್ಲ, 2026ರ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಹಬ್ಬಗಳ ಸಂದರ್ಭದಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶುಗರ್ ಫ್ರೀ ಸಿಹಿಗಾಗಿ ಗ್ರಾಹಕರ ಹುಡುಕಾಟ 2.7 ಪಟ್ಟು ಹೆಚ್ಚಾಗಿತ್ತು. ಹಾಗೆಯೇ ಆರ್ಡರ್ಗಳ ಸಂಖ್ಯೆಯೂ 1.6 ಪಟ್ಟು ವೃದ್ಧಿಸಿತ್ತು. ಈ ಬೇಡಿಕೆಯನ್ನು ಅರಿತೇ ಸ್ವಿಗ್ಗಿ ಇದೀಗ ಆನಂದ್ ಸ್ವೀಟ್ಸ್ ಜೊತೆಗೂಡಿ ಈ ವಿಶೇಷ ಅಭಿಯಾನ ಆರಂಭಿಸಿದೆ.
ಏನಿದು ಸ್ವಿಗ್ಗಿ ಈಟ್ರೈಟ್?
ಇದು ಸ್ವಿಗ್ಗಿ ಆ್ಯಪ್ನಲ್ಲಿರುವ ಆರೋಗ್ಯ-ಕೇಂದ್ರಿತ ವಿಭಾಗವಾಗಿದೆ. ಗ್ರಾಹಕರಿಗೆ ಹೆಚ್ಚಿನ ಪ್ರೋಟೀನ್ ಇರುವ, ಕಡಿಮೆ ಕ್ಯಾಲೋರಿ ಹೊಂದಿರುವ ಹಾಗೂ ಸಕ್ಕರೆ ಮುಕ್ತ ಆಹಾರಗಳ ಆಯ್ಕೆಗಳನ್ನು ಇದು ನೀಡುತ್ತದೆ. ರುಚಿಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವವರಿಗೆ ಇದು ಉತ್ತಮ ವೇದಿಕೆಯಾಗಿದೆ.








