ADVERTISEMENT
Monday, November 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಹೌದು ನಾನು ಬಲಿತ ದಲಿತನೇ: ರಾಜಧಾನಿಯಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್, ಜೆಡಿಎಸ್ ಕಚೇರಿ ಮುಂದೆಯೇ ಹೆಚ್‌ಡಿಕೆ ವಿರುದ್ಧ ಯುವ ಕಾಂಗ್ರೆಸ್ ಬ್ಯಾನರ್ ಅಸ್ತ್ರ!

Shwetha by Shwetha
November 9, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ತೀವ್ರ ವಾಕ್ಸಮರ ಇದೀಗ ಬೀದಿಗಿಳಿದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪೋಸ್ಟರ್ ವಾರ್‌ಗೆ ನಾಂದಿ ಹಾಡಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಪರವಾಗಿ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ನಗರದ ಹಲವೆಡೆ ವ್ಯಂಗ್ಯಾತ್ಮಕ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಅಂಟಿಸುವ ಮೂಲಕ ಭರ್ಜರಿ ತಿರುಗೇಟು ನೀಡಿದ್ದಾರೆ.

ಜೆಡಿಎಸ್ ಕಚೇರಿ ಮುಂಭಾಗವೇ ರಾತ್ರೋರಾತ್ರಿ ಬ್ಯಾನರ್ ಅಳವಡಿಕೆ!

Related posts

ಬ್ಲಿಂಕಿಟ್ ಮೂಲಕ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೇ ಬಂತು ಚಾಕು-ಕೊತ್ವಾಲ್ ರಾಮಚಂದ್ರನ ಗೂಂಡಾಗಿರಿ ಸಂಸ್ಕೃತಿ ಮತ್ತೆ ಜೀವಂತ! ಡಿಕೆ, ಪಿಕೆ, ಬಿಕೆಗಳ ವರ್ತನೆ ನೋಡಿದರೆ ಅಸಹ್ಯವಾಗುತ್ತದೆ ಎಂದು ಗುಡುಗಿದ ಬಿ.ವೈ. ವಿಜಯೇಂದ್ರ

ರಾಜಕೀಯವನ್ನು ಸದಾ ದ್ವೇಷಿಸುತ್ತಿದ್ದ ಸೋನಿಯಾ ಗಾಂಧಿ ಮನಸ್ಸು ಬದಲಿಸಿದ್ದು ಭಗವದ್ಗೀತೆ: ಆತ್ಮಚರಿತ್ರೆಯಲ್ಲಿ ರೋಚಕ ರಹಸ್ಯ ಬಹಿರಂಗ!

ರಾಜಕೀಯವನ್ನು ಸದಾ ದ್ವೇಷಿಸುತ್ತಿದ್ದ ಸೋನಿಯಾ ಗಾಂಧಿ ಮನಸ್ಸು ಬದಲಿಸಿದ್ದು ಭಗವದ್ಗೀತೆ: ಆತ್ಮಚರಿತ್ರೆಯಲ್ಲಿ ರೋಚಕ ರಹಸ್ಯ ಬಹಿರಂಗ!

November 9, 2026

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗುರಿಯಾಗಿಸಿಕೊಂಡು ಯುವ ಕಾಂಗ್ರೆಸ್ ಕಾರ್ಯಕರ್ತರು ಹೌದು ನಾನು ಬಲಿತ ದಲಿತನೇ ಎಂಬ ಬರಹವುಳ್ಳ ಬೃಹತ್ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಾರೆ. ವಿಶೇಷವೆಂದರೆ, ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ರಾಜ್ಯ ಕಚೇರಿಯ ಮುಂಭಾಗದಲ್ಲಿಯೇ ಈ ಬ್ಯಾನರ್ ಹಾಕುವ ಮೂಲಕ ದಳಪತಿಗಳಿಗೆ ನೇರ ಸವಾಲು ಎಸೆಯಲಾಗಿದೆ. ಇದಲ್ಲದೆ ನಗರದ ಪ್ರಮುಖ ಜನನಿಬಿಡ ಪ್ರದೇಶಗಳಾದ ಓಕಳಿಪುರಂ ಹಾಗೂ ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕಾರ್ಯಕರ್ತರು ರಾತ್ರೋರಾತ್ರಿ ಈ ಬ್ಯಾನರ್‌ಗಳನ್ನು ಅಳವಡಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಹಳ್ಳಿ ಗುಗ್ಗು ಅಭಿಯಾನಕ್ಕೆ ಬಲಿತ ದಲಿತ ತಿರುಗೇಟು!

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈ ವೇಳೆ ಅವರು ಕುಮಾರಸ್ವಾಮಿ ಅವರನ್ನು ಕುರಿತು ಹಳ್ಳಿ ಗುಗ್ಗು ಎಂದು ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು, ಹೌದು ನಾನು ಹಳ್ಳಿ ಗುಗ್ಗುನೆ ಏನಿವಾಗ ಎಂಬ ಪೋಸ್ಟರ್ ಅಭಿಯಾನವನ್ನು ನಡೆಸುವ ಮೂಲಕ ತಿರುಗೇಟು ನೀಡಿದ್ದರು. ಇದೀಗ ಜೆಡಿಎಸ್‌ನ ಅದೇ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು, ಹೌದು ನಾನು ಬಲಿತ ದಲಿತನೇ ಎನ್ನುವ ಪೋಸ್ಟರ್‌ಗಳನ್ನು ರಾಜಧಾನಿಯಾದ್ಯಂತ ಅಂಟಿಸುವ ಮೂಲಕ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಾಳಯಕ್ಕೆ ಖಡಕ್ ಕೌಂಟರ್ ನೀಡಿದ್ದಾರೆ.

ShareTweetSendShare
Join us on:

Related Posts

ಬ್ಲಿಂಕಿಟ್ ಮೂಲಕ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೇ ಬಂತು ಚಾಕು-ಕೊತ್ವಾಲ್ ರಾಮಚಂದ್ರನ ಗೂಂಡಾಗಿರಿ ಸಂಸ್ಕೃತಿ ಮತ್ತೆ ಜೀವಂತ! ಡಿಕೆ, ಪಿಕೆ, ಬಿಕೆಗಳ ವರ್ತನೆ ನೋಡಿದರೆ ಅಸಹ್ಯವಾಗುತ್ತದೆ ಎಂದು ಗುಡುಗಿದ ಬಿ.ವೈ. ವಿಜಯೇಂದ್ರ

ಬ್ಲಿಂಕಿಟ್ ಮೂಲಕ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೇ ಬಂತು ಚಾಕು-ಕೊತ್ವಾಲ್ ರಾಮಚಂದ್ರನ ಗೂಂಡಾಗಿರಿ ಸಂಸ್ಕೃತಿ ಮತ್ತೆ ಜೀವಂತ! ಡಿಕೆ, ಪಿಕೆ, ಬಿಕೆಗಳ ವರ್ತನೆ ನೋಡಿದರೆ ಅಸಹ್ಯವಾಗುತ್ತದೆ ಎಂದು ಗುಡುಗಿದ ಬಿ.ವೈ. ವಿಜಯೇಂದ್ರ

by Shwetha
November 9, 2026
0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ದ್ವೇಷವು ಪ್ರಜಾಪ್ರಭುತ್ವದ ಎಲ್ಲೆ ಮೀರಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಆನ್‌ಲೈನ್ ಡೆಲಿವರಿ ಸಂಸ್ಥೆಯಾದ ಬ್ಲಿಂಕಿಟ್...

ರಾಜಕೀಯವನ್ನು ಸದಾ ದ್ವೇಷಿಸುತ್ತಿದ್ದ ಸೋನಿಯಾ ಗಾಂಧಿ ಮನಸ್ಸು ಬದಲಿಸಿದ್ದು ಭಗವದ್ಗೀತೆ: ಆತ್ಮಚರಿತ್ರೆಯಲ್ಲಿ ರೋಚಕ ರಹಸ್ಯ ಬಹಿರಂಗ!

ರಾಜಕೀಯವನ್ನು ಸದಾ ದ್ವೇಷಿಸುತ್ತಿದ್ದ ಸೋನಿಯಾ ಗಾಂಧಿ ಮನಸ್ಸು ಬದಲಿಸಿದ್ದು ಭಗವದ್ಗೀತೆ: ಆತ್ಮಚರಿತ್ರೆಯಲ್ಲಿ ರೋಚಕ ರಹಸ್ಯ ಬಹಿರಂಗ!

by Shwetha
November 9, 2026
0

ನವದೆಹಲಿ: ಭಾರತೀಯ ರಾಜಕಾರಣದಲ್ಲಿ ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು ಮುನ್ನಡೆಸಿದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ರಾಜಕೀಯ ಪ್ರವೇಶದ ಹಿಂದಿನ ಅತ್ಯಂತ...

ಮೋದಿ ಆಡಳಿತದ 12 ವರ್ಷಗಳಲ್ಲಿ ದೇಶದ ವ್ಯವಸ್ಥೆಗೆ ಭಾರೀ ಹಾನಿ: ಸರ್ಕಾರ ಬದಲಾದರೂ ಸರಿಪಡಿಸಲು ದೀರ್ಘ ಸಮಯ ಬೇಕು ಎಂದ ಸೋನಿಯಾ ಗಾಂಧಿ!

ಮೋದಿ ಆಡಳಿತದ 12 ವರ್ಷಗಳಲ್ಲಿ ದೇಶದ ವ್ಯವಸ್ಥೆಗೆ ಭಾರೀ ಹಾನಿ: ಸರ್ಕಾರ ಬದಲಾದರೂ ಸರಿಪಡಿಸಲು ದೀರ್ಘ ಸಮಯ ಬೇಕು ಎಂದ ಸೋನಿಯಾ ಗಾಂಧಿ!

by Shwetha
November 9, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 12 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಜನರ ನಡುವಿನ ಒಗ್ಗಟ್ಟು, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸರ್ಕಾರಿ ಸಂಸ್ಥೆಗಳಿಗೆ...

ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆ ಹಣದಿಂದ, ಹೀಗಾಗಿ ಅರಮನೆ ಸರ್ಕಾರದ್ದು: ಸಿಂಹಾಸನ, ಅಂಬಾರಿ ಸರ್ಕಾರದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ- ಪ್ರಮೋದಾದೇವಿ ಒಡೆಯರ್ ಹೇಳಿಕೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು!

ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆ ಹಣದಿಂದ, ಹೀಗಾಗಿ ಅರಮನೆ ಸರ್ಕಾರದ್ದು: ಸಿಂಹಾಸನ, ಅಂಬಾರಿ ಸರ್ಕಾರದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ- ಪ್ರಮೋದಾದೇವಿ ಒಡೆಯರ್ ಹೇಳಿಕೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು!

by Shwetha
November 9, 2026
0

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಮಾಲೀಕತ್ವದ ಕುರಿತು ರಾಜಮನೆತನ ಹಾಗೂ ಸರ್ಕಾರದ ನಡುವೆ ಆರಂಭವಾಗಿರುವ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಮೈಸೂರು ಅರಮನೆಯನ್ನು ರಾಜರು ಕಟ್ಟಿಸಿದ್ದು, ಅದು ನಮ್ಮ...

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಇವರು ಮಣ್ಣಿನ ಮಕ್ಕಳು ಅಂತಾ ನೇಗಿಲಿಂದ ಉಳುಮೆ ಮಾಡಿದವರಲ್ಲ, ಬರೀ ಜಾಗ ಹೊಡೆದವರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗಾ ವಾಗ್ದಾಳಿ!

by Shwetha
November 9, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವಿನ ಮಾತಿನ ಸಮರ ದಿನದಿಂದ ದಿನಕ್ಕೆ ಮತ್ತಷ್ಟು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram