ADVERTISEMENT
Sunday, November 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಡಿಎಸ್‌ಎಸ್‌ಗೆ ನೋಂದಣಿ ಇರುವಾಗ ಆರ್‌ಎಸ್‌ಎಸ್‌ಗೂ ನೋಂದಣಿ ಕಡ್ಡಾಯ ಮಾಡಿಸುತ್ತೇನೆ: ಬಿಜೆಪಿಗೆ ನನ್ನ ಸೂಟು-ಬೂಟು ಸಮಸ್ಯೆಯಲ್ಲ, ನನ್ನ ಘರ್ಜನೆಯೇ ದೊಡ್ಡ ಸಮಸ್ಯೆ ಎಂದು ಗುಡುಗಿದ ಪ್ರಿಯಾಂಕ್ ಖರ್ಗೆ!

Shwetha by Shwetha
November 15, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಯಾದಗಿರಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಇನ್ನೂ ಅಧಿಕೃತವಾಗಿ ನೋಂದಾಯಿತ ಸಂಘಟನೆಯಾಗಿಲ್ಲ. ದಲಿತ ಸಂಘಟನೆಗಳಾದ ಡಿಎಸ್‌ಎಸ್‌ಗಳಿಗೆ ಕಾನೂನುಬದ್ಧ ನೋಂದಣಿ ಇರುವಾಗ, ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್ ಸಂಘಟನೆಗೂ ಕಡ್ಡಾಯವಾಗಿ ನೋಂದಣಿ ಮಾಡಿಸಲಿದ್ದೇನೆ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಆ ಮೂಲಕ ತಮ್ಮ ಮುಂದಿನ ಗುರಿ ಸಂಘ ಪರಿವಾರವೇ ಎಂಬ ನೇರ ಸಂದೇಶವನ್ನು ರವಾನಿಸಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಿ, 2023-24ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂದಾಜು 31 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

Related posts

ಮನೆಯಲ್ಲಿ ಕಾಲು ಜಾರಿ ಬಿದ್ದು ಶಾಸಕ ಪ್ರದೀಪ್ ಈಶ್ವರ್ ಬಲಗಾಲಿನ ಮೂಳೆ ಮುರಿತ: ಕಾಲಿಗೆ ರಾಡ್ ಬಿದ್ದರೂ ಕುಗ್ಗದ ಉತ್ಸಾಹ-ಎಷ್ಟೇ ನೋವು, ಅಡೆತಡೆ ಬಂದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕ ನಿಲ್ಲಿಸಲ್ಲ ಎಂದ ಪ್ರದೀಪ್ ಈಶ್ವರ್

ಮನೆಯಲ್ಲಿ ಕಾಲು ಜಾರಿ ಬಿದ್ದು ಶಾಸಕ ಪ್ರದೀಪ್ ಈಶ್ವರ್ ಬಲಗಾಲಿನ ಮೂಳೆ ಮುರಿತ: ಕಾಲಿಗೆ ರಾಡ್ ಬಿದ್ದರೂ ಕುಗ್ಗದ ಉತ್ಸಾಹ-ಎಷ್ಟೇ ನೋವು, ಅಡೆತಡೆ ಬಂದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕ ನಿಲ್ಲಿಸಲ್ಲ ಎಂದ ಪ್ರದೀಪ್ ಈಶ್ವರ್

November 15, 2026
ರಿಚರ್ಡ್ ಆಂಟನಿ ಸ್ಕ್ರಿಪ್ಟ್ ಮುಗಿದಿದೆ, ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗುತ್ತೆ: 2036 ಬಂದರೂ ಪ್ರಮೋದ್ ಶೆಟ್ಟಿ ಇದೇ ಹೇಳ್ತಾರೆ ಎಂದು ಸ್ಯಾಂಡಲ್‌ವುಡ್ ನಟನನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು!

ರಿಚರ್ಡ್ ಆಂಟನಿ ಸ್ಕ್ರಿಪ್ಟ್ ಮುಗಿದಿದೆ, ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗುತ್ತೆ: 2036 ಬಂದರೂ ಪ್ರಮೋದ್ ಶೆಟ್ಟಿ ಇದೇ ಹೇಳ್ತಾರೆ ಎಂದು ಸ್ಯಾಂಡಲ್‌ವುಡ್ ನಟನನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು!

November 15, 2026

150 ಬಾರಿ ಸಂವಿಧಾನ ವಿರೋಧಿಸಿದ್ದ ಮನುವಾದಿಗಳು; ನಿಜವಾದ ದೇಶದ್ರೋಹಿಗಳು ಯಾರು?

ಇತಿಹಾಸದ ಪುಟಗಳನ್ನು ಮೆಲುಕು ಹಾಕುತ್ತಾ ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಕಳೆದ 1949ರಲ್ಲಿ ಮನುವಾದಿ ಸಂಘಟನೆಗಳು ನಮಗೆ ಸಂವಿಧಾನ ಬೇಡವೇ ಬೇಡ, ಮನುಸ್ಮೃತಿಯೇ ಬೇಕು ಎಂದು ಒತ್ತಾಯಿಸಿ ಬರೋಬ್ಬರಿ 150 ಬಾರಿ ಪ್ರತಿಭಟನೆಗಳನ್ನು ನಡೆಸಿದ್ದವು. ಅಷ್ಟೇ ಅಲ್ಲದೆ, ಆರ್‌ಎಸ್‌ಎಸ್‌ನ ಅಧಿಕೃತ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆಯಲ್ಲಿ ದೇಶದ ರಾಷ್ಟ್ರಧ್ವಜ ಹಾಗೂ ಸಂವಿಧಾನವನ್ನು ತಾವು ಒಪ್ಪುವುದಿಲ್ಲ ಎಂಬ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್‌ನವರು ಎಂದಾದರೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೇ? ಕ್ವಿಟ್ ಇಂಡಿಯಾ ಚಳವಳಿಯಲ್ಲಾಗಲಿ ಅಥವಾ ದುಂಡುಮೇಜಿನ ಸಭೆಯಲ್ಲಾಗಲಿ ಪಾಲ್ಗೊಂಡಿದ್ದರೇ? ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ವ್ಯಕ್ತಿಯ ಪುತ್ಥಳಿಗೆ ಪೂಜೆ ಸಲ್ಲಿಸುವ ಇವರು, ಆ ಹಂತಕನನ್ನು ದೇಶಪ್ರೇಮಿ ಎಂದು ಕರೆಯುತ್ತಾರೆ. ಹಾಗಾದರೆ ಇವರ ದೃಷ್ಟಿಯಲ್ಲಿ ಮಹಾತ್ಮ ಗಾಂಧೀಜಿ ದೇಶದ್ರೋಹಿಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ಅತ್ಯುನ್ನತ ಶಕ್ತಿಯಾಗಿದೆ. ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ದ್ವೇಷದ ವಿಷಬೀಜ ಬಿತ್ತಿ ಸಂಘರ್ಷ ಸೃಷ್ಟಿಸುವವರೇ ನಿಜವಾದ ದೇಶದ್ರೋಹಿಗಳು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಭಗವಾನ್ ಗೌತಮ ಬುದ್ಧರ ಕಾಲದಿಂದ 2,500 ವರ್ಷಗಳು, ವಿಶ್ವಗುರು ಬಸವಣ್ಣನವರ ಕಾಲದಿಂದ ಸುಮಾರು 900 ವರ್ಷಗಳು ಹಾಗೂ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಉರುಳಿವೆ. ಆದರೂ ಸಮಾಜದಲ್ಲಿ ಇನ್ನೂ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯ ಕುರಿತು ಮಾತನಾಡುವ ಪರಿಸ್ಥಿತಿ ಇರುವುದು ವಿಪರ್ಯಾಸ. ಸ್ವಾಭಿಮಾನದ ಸಮಾಜ ನಿರ್ಮಾಣವಾಗಲು ಕೇವಲ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಲದು, ಅವರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನನ್ನ ಸೂಟು-ಬೂಟು ಸಮಸ್ಯೆಯಲ್ಲ, ನನ್ನ ಘರ್ಜನೆಯೇ ಬಿಜೆಪಿಗೆ ದೊಡ್ಡ ಸಮಸ್ಯೆ!

ವ್ಯಕ್ತಿಪೂಜೆಯನ್ನು ತಾವು ಎಂದಿಗೂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಿಯಾಂಕ್ ಖರ್ಗೆ, ನಾನು ವೇದಿಕೆಗಳಲ್ಲಿ ಹಾರ, ಶಾಲು ಅಥವಾ ತುರಾಯಿಗಳನ್ನು ಸ್ವೀಕರಿಸುವುದಿಲ್ಲ. ಅದರ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ಮನವಿ ಮಾಡುತ್ತೇನೆ. ಹಾಗೆ ಸಂಗ್ರಹವಾದ ಪುಸ್ತಕಗಳನ್ನು ಗ್ರಾಮೀಣ ಭಾಗದ ಅರಿವು ಕೇಂದ್ರಗಳಿಗೆ ನೀಡಲಾಗುತ್ತದೆ. ಜೆಸಿಬಿ ಯಂತ್ರಗಳ ಮೂಲಕ ಬೃಹತ್ ಹಾರ ಹಾಕುವುದು ಹಾಗೂ ಎಲ್ಲೆಡೆ ದೊಡ್ಡ ಪೋಸ್ಟರ್‌ಗಳನ್ನು ಕಟ್ಟುವುದು ಮುಖ್ಯವಲ್ಲ. ಶಿಕ್ಷಣ ಪಡೆದ ಯುವಜನತೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ಅನ್ಯಾಯದ ವಿರುದ್ಧ ಪ್ರಶ್ನಿಸಬೇಕು ಎಂದರು.

ಇದೇ ವೇಳೆ ತಮ್ಮ ವಿರುದ್ಧದ ವೈಯಕ್ತಿಕ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ಬಿಜೆಪಿಯವರಿಗೆ ನನ್ನ ಸೂಟು ಮತ್ತು ಬೂಟು ಸಮಸ್ಯೆಯಲ್ಲ; ಬದಲಾಗಿ ಅವರಿಗೆ ನನ್ನ ಘರ್ಜನೆಯೇ ದೊಡ್ಡ ಸಮಸ್ಯೆಯಾಗಿದೆ ಎಂದು ಗುಡುಗಿದರು. ವಿಶ್ವದ ನಾಲ್ಕನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕೇಂದ್ರವನ್ನು ದಲಿತ ಸಮುದಾಯದ ವ್ಯಕ್ತಿಯೊಬ್ಬರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರು ನನ್ನನ್ನು ಕಾನ್ವೆಂಟ್ ದಲಿತ ಎಂದು ಟೀಕಿಸುತ್ತಾರೆ. ಮತ್ತೊಬ್ಬರು ನನ್ನ ತಂದೆ ನನಗೆ ಒಂದು ಲೋಟ ಹಾಲು ಹೆಚ್ಚಾಗಿ ಕುಡಿಸಿದ್ದಾರೆ ಎನ್ನುತ್ತಾರೆ. ನಮ್ಮ ತಂದೆ ನಮಗೆ ಹೆಚ್ಚು ಹಾಲು ನೀಡಿದ್ದರೆ ಇವರಿಗೇಕೆ ಇಷ್ಟೊಂದು ಹೊಟ್ಟೆಕಿಚ್ಚು? ದಲಿತರು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬಾರದೇ? ಸಂಸತ್ತಿನ ನೂತನ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ತೊಳೆದು ಸ್ವಚ್ಛಗೊಳಿಸುವುದು ಇವರ ಯಾವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಚಲುವಾದಿಗಳಾಗಿ ಬೆಳೆದು ಮನುವಾದಿಗಳಾಗುತ್ತಿರುವುದು ಆತಂಕಕಾರಿ; ಸಾವರ್ಕರ್ ಪತ್ರದ ದಾಖಲೆ ಪ್ರಸ್ತಾಪ

ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪಾರ ಕೊಡುಗೆಗಳನ್ನು ಸ್ಮರಿಸಿದ ಸಚಿವರು, ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಆಳವಾದ ಜ್ಞಾನ ಹೊಂದಿದ್ದ ಏಕೈಕ ವ್ಯಕ್ತಿ ಅಂಬೇಡ್ಕರ್ ಆಗಿದ್ದರು. ಅವರ ದಿ ಪ್ರಾಬ್ಲಂ ಆಫ್ ದಿ ರೂಪೀ ಕೃತಿ ಹಾಗೂ ಆರ್ಥಿಕ ಚಿಂತನೆಗಳೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸ್ಥಾಪನೆಗೆ ಬುನಾದಿಯಾದವು. ಕಾರ್ಮಿಕ ಕಾನೂನುಗಳು, ಕನಿಷ್ಠ ವೇತನ, ಭವಿಷ್ಯ ನಿಧಿ ಹಾಗೂ ಮಹಿಳೆಯರಿಗೆ ಆಸ್ತಿ ಹಕ್ಕು ನೀಡುವಲ್ಲಿ ಅವರು ಐತಿಹಾಸಿಕ ಪಾತ್ರ ವಹಿಸಿದ್ದಾರೆ. ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ 2 ವರ್ಷ, 11 ತಿಂಗಳು, 18 ದಿನಗಳ ಕಠಿಣ ಪರಿಶ್ರಮದ ಬಳಿಕ ದೇಶಕ್ಕೆ ಸಂವಿಧಾನ ನೀಡಿದರು ಎಂದರು.

ಯುವಕರು ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದ ಸುಳ್ಳು ಮಾಹಿತಿಯನ್ನೇ ನಂಬಿ ಚರ್ಚೆ ಮಾಡಬಾರದು. ಇಂದು ಕೆಲವರು ಚಲುವಾದಿಗಳಾಗಿ ಬೆಳೆದು ಮನುವಾದಿಗಳಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದು ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಸದನದಲ್ಲಿ ಬಿಜೆಪಿಗರು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು ಎಂದು ಆರೋಪಿಸಿದ್ದರು. ಆದರೆ, ತಮ್ಮ ಸೋಲಿಗೆ ಆರ್‌ಎಸ್‌ಎಸ್‌ನ ವೀರ ಸಾವರ್ಕರ್ ಅವರೇ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದ ಪತ್ರದ ದಾಖಲೆಯನ್ನು ನಾನು ಸದನದಲ್ಲಿ ಮಂಡಿಸಿದ್ದೇನೆ. ಆ ಪತ್ರವು ರಾಷ್ಟ್ರೀಯ ದಾಖಲೆ ಸಂಗ್ರಹಾಗಾರದಲ್ಲಿದ್ದು, ಅದನ್ನು ಸ್ವತಃ ಪ್ರಧಾನಿ ಮೋದಿಯವರೇ ಡಿಜಿಟಲೀಕರಣ ಮಾಡಿದ್ದಾರೆ. ಇನ್ನು ಕೇಂದ್ರ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಅಂಬೇಡ್ಕರ್ ಹೆಸರನ್ನು ಉಲ್ಲೇಖಿಸಿದ ರೀತಿಯೂ ಅವಮಾನಕರವಾಗಿತ್ತು. ಇಂತಹ ಮನುವಾದಿಗಳ ವಿರುದ್ಧ ನನ್ನ ಹೋರಾಟ ನಿರಂತರವಾಗಿದ್ದು, ಜನರ ಆಶೀರ್ವಾದ ಇರುವವರೆಗೆ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಘೋಷಿಸಿದರು.

ShareTweetSendShare
Join us on:

Related Posts

ಮನೆಯಲ್ಲಿ ಕಾಲು ಜಾರಿ ಬಿದ್ದು ಶಾಸಕ ಪ್ರದೀಪ್ ಈಶ್ವರ್ ಬಲಗಾಲಿನ ಮೂಳೆ ಮುರಿತ: ಕಾಲಿಗೆ ರಾಡ್ ಬಿದ್ದರೂ ಕುಗ್ಗದ ಉತ್ಸಾಹ-ಎಷ್ಟೇ ನೋವು, ಅಡೆತಡೆ ಬಂದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕ ನಿಲ್ಲಿಸಲ್ಲ ಎಂದ ಪ್ರದೀಪ್ ಈಶ್ವರ್

ಮನೆಯಲ್ಲಿ ಕಾಲು ಜಾರಿ ಬಿದ್ದು ಶಾಸಕ ಪ್ರದೀಪ್ ಈಶ್ವರ್ ಬಲಗಾಲಿನ ಮೂಳೆ ಮುರಿತ: ಕಾಲಿಗೆ ರಾಡ್ ಬಿದ್ದರೂ ಕುಗ್ಗದ ಉತ್ಸಾಹ-ಎಷ್ಟೇ ನೋವು, ಅಡೆತಡೆ ಬಂದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಯಕ ನಿಲ್ಲಿಸಲ್ಲ ಎಂದ ಪ್ರದೀಪ್ ಈಶ್ವರ್

by Shwetha
November 15, 2026
0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ನಿವಾಸದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ಅವರ ಬಲಗಾಲಿಗೆ ಗಂಭೀರ ಸ್ವರೂಪದ...

ರಿಚರ್ಡ್ ಆಂಟನಿ ಸ್ಕ್ರಿಪ್ಟ್ ಮುಗಿದಿದೆ, ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗುತ್ತೆ: 2036 ಬಂದರೂ ಪ್ರಮೋದ್ ಶೆಟ್ಟಿ ಇದೇ ಹೇಳ್ತಾರೆ ಎಂದು ಸ್ಯಾಂಡಲ್‌ವುಡ್ ನಟನನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು!

ರಿಚರ್ಡ್ ಆಂಟನಿ ಸ್ಕ್ರಿಪ್ಟ್ ಮುಗಿದಿದೆ, ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗುತ್ತೆ: 2036 ಬಂದರೂ ಪ್ರಮೋದ್ ಶೆಟ್ಟಿ ಇದೇ ಹೇಳ್ತಾರೆ ಎಂದು ಸ್ಯಾಂಡಲ್‌ವುಡ್ ನಟನನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು!

by Shwetha
November 15, 2026
0

Lಬೆಂಗಳೂರು: ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ರಿಚರ್ಡ್ ಆಂಟನಿ ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ಪ್ರಶ್ನೆ ಕೇಳಿದಾಗಲೆಲ್ಲಾ ನಟ ಪ್ರಮೋದ್ ಶೆಟ್ಟಿ ನೀಡುವ...

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

ದೊಡ್ಡ ಆಲಹಳ್ಳಿಯಲ್ಲಿ ಟೆಂಟ್ ನಡೆಸುತ್ತಿದ್ದ ಕಾಲದ ಪೋಸ್ಟರ್ ಅಂಟಿಸುವ ಚಾಳಿ ಸಿಎಂ ಆದರೂ ಬಿಟ್ಟಿಲ್ಲ: ಮಲ್ಲಿಕಾರ್ಜುನ ಖರ್ಗೆಯವರನ್ನೇ ಸಿಎಂ ಮಾಡಿ ಎಂದಿದ್ದರು ದೇವೇಗೌಡರು ಎಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಹೆಚ್.ಡಿ. ಕುಮಾರಸ್ವಾಮಿ!

by Shwetha
November 15, 2026
0

ತುಮಕೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಿಂದೆಂದೂ ಕಾಣದ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ದೊಡ್ಡ ಆಲಹಳ್ಳಿಯಲ್ಲಿ...

ಗೌತಮ್ ಅದಾನಿ ಅಥವಾ ಮೋಹನ್ ಭಾಗವತ್ ತೀರ್ಪುಗಾರರಾದರೂ ಸರಿ, ನನ್ನೊಂದಿಗೆ ಒಮ್ಮೆ ಮುಖಾಮುಖಿ ಚರ್ಚೆ ನಡೆಸಿದರೆ ಮೋದಿ ಪ್ರಧಾನಿ ಸ್ಥಾನದಲ್ಲಿ ಉಳಿಯುವುದಿಲ್ಲ: ಇನ್‌ಸ್ಟಾಗ್ರಾಮ್ ಆಸ್ಕ್ ಮಿ ಸಂವಾದದಲ್ಲಿ ರಾಹುಲ್ ಗುಡುಗು

ಗೌತಮ್ ಅದಾನಿ ಅಥವಾ ಮೋಹನ್ ಭಾಗವತ್ ತೀರ್ಪುಗಾರರಾದರೂ ಸರಿ, ನನ್ನೊಂದಿಗೆ ಒಮ್ಮೆ ಮುಖಾಮುಖಿ ಚರ್ಚೆ ನಡೆಸಿದರೆ ಮೋದಿ ಪ್ರಧಾನಿ ಸ್ಥಾನದಲ್ಲಿ ಉಳಿಯುವುದಿಲ್ಲ: ಇನ್‌ಸ್ಟಾಗ್ರಾಮ್ ಆಸ್ಕ್ ಮಿ ಸಂವಾದದಲ್ಲಿ ರಾಹುಲ್ ಗುಡುಗು

by Shwetha
November 15, 2026
0

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮುಖಾಮುಖಿಯಾಗಿ ಬಹಿರಂಗ ಚರ್ಚೆ ನಡೆಸುವ ತಮ್ಮ ಪಟ್ಟು ಸಡಿಲಿಸದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 15, 2026
0

ದಿನ ಭವಿಷ್ಯ: 15-11-2026 1. ಮೇಷ ರಾಶಿ ಗ್ರಹಗತಿ: ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಅಂದರೆ ಕರ್ಮ ಸ್ಥಾನದಲ್ಲಿ ಚಂದ್ರನ ಸಂಚಾರವಿದೆ. ನಾಲ್ಕನೇ ಮನೆಯಲ್ಲಿ ಉಚ್ಚ ಗುರುವಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram