ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಮತ್ತೆ ಲಾಕ್‍ಡೌನ್ ಮಾಡಲು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ, ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ.
ಸಚಿವರಾದ ಸುಧಾಕರ್, ಶ್ರೀರಾಮುಲು, ಆರ್ ಅಶೋಕ್ ಹಾಗೂ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು ಸೇರಿದಂತೆ ತಜ್ಞರನ್ನು ಒಳಗೊಂಡ ಸಭೆಯಲ್ಲಿ ಲಾಕ್‍ಡೌನ್ ಮತ್ತೊಂದು ವಾರ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ವಿಸ್ತøತವಾದ ಚರ್ಚೆ ನಡೆಯುತ್ತಿರುವಾಗ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕಾವೇರಿ ನಿವಾಸ ಕಾವೇರಿಯಲ್ಲಿ 8 ಉಸ್ತುವಾರಿ ಸಚಿವರ ಸಭೆಗೆ ತಡವಾದ್ದರಿಂದ ಟಾಸ್ಕ್ ಫೋರ್ಸ್ ಸಭೆಯನ್ನು ನಾಳೆಗೆ ಮುಂದೂಡಲಾಯಿತು.
ರಾಜ್ಯ ಹಾಗೂ ರಾಜಧಾನಿಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯುವುದು, ಚಿಕಿತ್ಸೆ, ಹಾಸಿಗೆ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ, ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಮಯದ ಅಭಾವ ಎದುರಾದ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಇದೀಗ ಕಾವೇರಿ ನಿವಾಸದಲ್ಲಿ 8 ಮಂದಿ ಉಸ್ತುವಾರಿ ಸಚಿವರೊಂದಿಗೆ ಯಡಿಯೂರಪ್ಪ ಸಭೆ ನಡೆಸುತ್ತಿದ್ದು, ಲಾಕ್‍ಡೌನ್ ಭವಿಷ್ಯದ ಬಗ್ಗೆ ಇಂದು ನಿರ್ಧಾರವಾಗುವ ಸಾಧ್ಯತೆ ಇದೆ.
Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.
ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ...








