ಬೆಂಗಳೂರು: ಕಳೆದ ಮಂಗಳವಾರ ಸಂಜೆಯಿಂದ ಆರಂಭಗೊಂಡಿದ್ದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಲಾಕ್‍ಡೌನ್ ನಾಳೆಗೆ ಅಂತ್ಯಗೊಳ್ಳುವುದು ಬಹುತೇಕ ಖಚಿತವಾಗಿದೆ.
ರಾಜ್ಯ ಸರ್ಕಾರ ಮತ್ತೆ ಬೆಂಗಳೂರಿನಲ್ಲಿ ಲಾಕ್‍ಡೌನ್ ಮುಂದುವರೆಸುವುದಿಲ್ಲ, ನಾಳೆಯಿಂದ ಅನ್‍ಲಾಕ್ ಮಾಡಲು ತೀರ್ಮಾನಿಸಿದೆ. ಲಾಕ್‍ಡೌನ್ ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಲಾಕ್‍ಡೌನ್ ಮುಂದುವರಿಕೆಗೆ ಸಮ್ಮತಿ ಸೂಚಿಸದ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 5 ಗಂಟೆಗೆ ಲಾಕ್‍ಡೌನ್ ಕೊನೆಯಾಗುವುದು ಖಚಿತ ಎನ್ನಲಾಗಿದೆ.
ಎರಡು ಜಿಲ್ಲೆಗಳನ್ನು ಅನ್‍ಲಾಕ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಜೆಯೊಳಗೆ ಹೊಸ ಗೈಡ್‍ಲೈನ್ಸ್ ಪ್ರಕಟವಾಗುವ ಸಾಧ್ಯತೆ ಇದೆ. ಈ ಗೈಡ್ಸ್‍ಲೈನ್ಸ್‍ನಲ್ಲಿ ಕಠಿಣ ನಿಯಮಗಳನ್ನು ಅಳವಡಿಸುವ ಸಾಧ್ಯತೆ ಇದೆ.
ಇಂದು ಮುಂದುವರೆದ ಟಾಸ್ಕ್‍ಪೋರ್ಸ್ ಸಮಿತಿ ಸಭೆಯ ಶಿಫಾರಸುಗಳನ್ನು ಆಧರಿಸಿದ ಹೊಸ ಗೈಡ್‍ಲೈನ್ಸ್ ಬರಲಿದೆ.
ಲಾಕ್‍ಡೌನ್‍ಗೂ ಮೊದಲೇ ಇದ್ದ ಸಂಡೇ ಲಾಕ್‍ಡೌನ್ ಹಾಗೂ ನೈಟ್ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆಯೂ ಹೊಸ ಗೈಡ್‍ಲೈನ್ಸ್‍ನಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.
ಪಾರ್ಕ್‍ಗಳು ಸೇರಿದಂತೆ ಜನನಿಬಿಡ ಪ್ರದೇಶಗಳು, ಮಾರ್ಕೆಟ್‍ಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಜನದಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇರೆ ಕಡೆ ಸ್ಥಳಾಂತರ ಮಾಡುವ ಬಗ್ಗೆ ನಿಯಮಾವಳಿ ಜಾರಿಗೆ ತರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.








