ವಿಶ್ವಾದ್ಯಂತ ಕೊರೊನಾ ಹಾವಳಿ ಹೆಚ್ಚಾಗ್ತಿದ್ದಂತೆ ಎಲ್ಲೆಡೆ ಧಿಢೀರ್ ಲಾಕ್ ಡೌನ್ ಮಾಡಲಾಗಿತ್ತು. ಹೀಗೆ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಹಲವಾರು ದೇಶಗಳಲ್ಲಿ ನೆಲೆಸಿದ್ದ ಭಾರತೀಯ ಮೂಲದ ವಿದ್ಯಾರ್ಥಿಗಳು, ಪ್ರವಾಸಿಗರು, ನೌಕರರು ದೇಶಕ್ಕೆ ಮರಳಿ ಬಾರದ ಪರಿಸ್ಥಿತಿ ಬಂದೊದಗಿತ್ತು. ಬಳಿಕ ಕ್ರಮೇಣ ಲಾಕ್ ಡೌನ್ ಸಡಿಲಿಕೆ ಮಾಡುತ್ತ ಹೋದಂತೆ ಭಾರತೀಯರು ದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ಅದರಂತೆ ಕೆನಡಾದಲ್ಲಿ ಸಿಲುಕಿದ್ದ ತಮಿಳಿನ ಖ್ಯಾತ ನಟ ವಿಜಯ್ ಅವರ ಪುತ್ರ ಸಂಜಯ್ ಸಹ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. 
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನಡಾದಲ್ಲಿ ನೆಲೆಸಿದ್ದ ಸಂಜಯ್ ಕೊರೊನಾ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಬಾರದೇ ಅಲ್ಲೇ ಉಳಿಯುವಂತಾಗಿತ್ತು. ಆದ್ರೆ ಲಾಕ್ ಡೌನ್ ಸಡಲಿಕೆಗೊಂಡ ಬಳಿಕ ಅವರು ಕಳೆದ 15 ದಿನಗಳ ಹಿಂದೇಯೇ ಭಾರತಕ್ಕೆ ವಾಪಸ್ಸಾಗಿದ್ರು. ಆದ್ರೆ ಅವರು ಸೆಲ್ಫ್ ಕ್ವಾರೆಂಟೈನ್ ಗೆ ಒಳಗಾಗಿದ್ದರು. ಇದೀಗ ಮರಳಿ ತಮ್ಮ ಮನೆ ಸೇರಿದ್ದು, ವಿಜಯ್ ಮನೆಯರು ನಿರಾಳರಾಗಿದ್ದಾರೆ.
ನಿಮ್ಮ ದಾನ ಬೇಡ, ವಿನಾಶಕ್ಕೆ ಪರಿಹಾರ ನೀಡಿ: ನಮಗೆ ನ್ಯಾಯ ಬೇಕು ಭಾರತದ ವಿರುದ್ಧ ಸಿಡಿದೆದ್ದ ನೇಪಾಳ
ಕಾಠ್ಮಂಡು: ಇತ್ತೀಚಿನ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನಲುಗಿ ಹೋಗಿರುವ ನೇಪಾಳ, ಇದೀಗ ಜಗತ್ತಿನ ಬಲಿಷ್ಠ ರಾಷ್ಟ್ರಗಳ ವಿರುದ್ಧ ತಿರುಗಿಬಿದ್ದಿದೆ. ಸಾವಿರಾರು ಜೀವಗಳನ್ನು ಬಲಿಪಡೆದ ಈ ನೈಸರ್ಗಿಕ...








