ಕೊರೊನಾ ನಿರ್ಮೂಲನೆಗೆ ಮಾಸ್ಕ್ ಅತ್ಯವಶ್ಯಕ. ಅದ್ರಲ್ಲೂ N-95 ಮಾಸ್ಕ್ ಮಾಸ್ಕ್ ಧರಿಸಿದ್ರೆ ಕೊರೊನಾ ಸೋಂಕು ಬಹುತೇಕ ಹರಡುವುದಿಲ್ಲ. ಸೋಂಕು ಹರಡದಂತೆ ತಡೆಯಲು N-95 ಮಾಸ್ಕ್ ಅತ್ಯಂತ ಪರಿಣಾಮಕಾರಿ ಎಂದು ಹಿಂದೆ ಹಲವು ತಜ್ಞರು ಹೇಳಿದ್ದರು. ಆದ್ರೆ N-95 ಮಾಸ್ಕ್ ಮಾಸ್ಕ್ ನಿಂದ ಸೋಂಕು ಹರಡುವುದನ್ನ ತಡೆಯಲು ಸಾಧ್ಯವಿಲ್ಲ ಎಂಬ ಆಘಾತಕಾರಿ ಮಾಹಿತಿಯೊಂದನ್ನು ಆರೋಗ್ಯ ಸಚಿವಾಲಯ ಬಹಿರಂಗಪಡೆಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಹಾನಿದೇರ್ಶಕರಾದ ರಾಜೀವ್ ಗರ್ಗ್ ಅವರು ಎಲ್ಲಾ ರಾಜ್ಯ ಮತ್ತು ಕೇಂದ್ರಡಳಿತ ಪ್ರದೇಶಗಳ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗೆ ಪತ್ರ ಬರೆಯುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ಮಾರಕ ಕೊರೊನಾ ಹರಡುವಿಕೆಯನ್ನ ತಡೆಯುವ ಶಕ್ತಿ N-95 ಮಾಸ್ಕ್ ಮಾಸ್ಕ್‍ಗೆ ಇಲ್ಲ. ಮಾಸ್ಕ್ ಬಳಕೆಯಿಂದ ಸೋಂಕು ದೇಹದ ಒಳಗೆ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ.. ಯಾಕೆಂದರೆ ಜನರು ಮಾಸ್ಕ್ ಸರಿಯಾದ ಕ್ರಮದಲ್ಲಿ ಬಳಕೆ ಮಾಡುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಗರ್ಗ್ ಜನರಿಗೆ ಮನೆಯಲ್ಲಿಯೇ ಮಾಸ್ಕ್‍ಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನಿಡುವಂತೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯಾಕೆಂದರೆ ತೊಳೆದು ಉಪಯೋಗಿಸಬಲ್ಲ ಮಾಸ್ಕ್ ಗಳು ಸೋಂಕು ತಡೆಗಟ್ಟಲು ಉತ್ತಮ ಹಾಗೂ ಸಹಕಾರಿ ಎಂದು ತಿಳಿಸಿದ್ದಾರೆ.
fifa worldcup2026-ವಿಶ್ವ ಫುಟ್ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು
ಸಿಆರ್ & ಎಲ್ಎಂ..! ವಿಶ್ವ ಫುಟ್ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...








