ಐರ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಮೋಯಿಲ್ ಆಲಿ ಉಪನಾಯಕ
ಐರ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಇಂಗ್ಲೆಂಡ್ ತಂಡದ ಉಪನಾಯಕನಾಗಿ ಮೋಯಿನ್ ಆಲಿ ಆಯ್ಕೆಯಾಗಿದ್ದಾರೆ. ನಾಯಕನಾಗಿ ಇಯಾನ್ ಮೊರ್ಗಾನ್ ಮುಂದುವರಿಯಲಿದ್ದಾರೆ.
ಜುಲೈ 30ರಿಂದ ಆಗಸ್ಟ್ 4ರವರೆಗೆ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಜೈವಿಕ ಸುರಕ್ಷತೆ ಮತ್ತು ಕೋವಿಡ್-19 ಮಾರ್ಗಸೂಚಿಗಳೊಂದಿಗೆ ಈ ಏಕದಿನ ಸರಣಿ ನಡೆಯಲಿದೆ. ಈ ಪಂದ್ಯಗಳು ಸೌತಾಂಪ್ಟನ್‍ನ ಏಜಸ್ ಬೌಲ್ ನಲ್ಲಿ ನಡೆಯಲಿದೆ. ಇಲ್ಲೂ ಕೂಡ ಪ್ರೇಕ್ಷಕರಿಗೆ ಅವಕಾಶವಿಲ್ಲ.
ಮೋಯಿನ್ ಆಲಿ ಇಂಗ್ಲೆಂಡ್ ತಂಡದ ಉಪನಾಯಕನಾಗಿದ್ದಾರೆ. ಇಯಾನ್ ಮೊರ್ಗಾನ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಐರ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ರಾಯಲ್ ಲಂಡನ್ ಸೀರಿಸ್ ಟೂರ್ನಿ ನಡೆಯಲಿದೆ ಎಂದು ಇಸಿಬಿ ಖಚಿತಪಡಿಸಿದೆ.
ಸೌತಾಂಪ್ಟನ್ ನಲ್ಲಿ ಜುಲೈ 30, ಆಗಸ್ಟ್ 1 ಮತ್ತು ಆಗಸ್ಟ್ 4 ರಂದು ನಡೆಯಲಿದೆ. ಈ ಸರಣಿಯ ಅಭ್ಯಾಸ ಶಿಬಿರಕ್ಕೆ ಇಂಗ್ಲೆಂಡ್ ತಂಡ 24 ಆಟಗಾರರ ಹೆಸರು ಪ್ರಕಟಿಸಿದೆ. ಜೈವಿಕ ಸುರಕ್ಷತೆಯೊಂದಿಗೆ ತರಬೇತಿ ಶಿಬಿರ ನಡೆಯಲಿದೆ. ಅಭ್ಯಾಸ ಶಿಬಿರಕ್ಕೆ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿರುವ ಬಹುತೇಕ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಇಯಾನ್ ಮೊರ್ಗಾನ್ (ನಾಯಕ), ಮೋಯಿನ್ ಆಲಿ (ಉಪನಾಯಕ),
ಜೊನಾಥನ್ ಬೇರ್ ಸ್ಟೋ, ಟಾಮ್ ಬಂಟನ್, ಸಾಮ್ ಬಿಲ್ಲಿಂಗ್ಸ್, ಹೆನ್ರಿ ಬ್ರೂಕ್ಸ್, ಬ್ರಾಡನ್ ಕಾರ್ಸ್, ಟಾಮ್ ಕುರನ್, ಲಿಯಾವ್ ಡಾವ್ಸನ್, ಬೆನ್ ಡಕೆಟ್, ಲೌರಿ ಇವಾನ್ಸ್, ರಿಚರ್ಡ್ ಗ್ಲೆಸನ್, ಲೂಯಿಸ್ ಗ್ರೆಗೋರಿ, ಸ್ಯಾಮ್ ಹೇನ್, ಟಾಮ್ ಹೆಲ್ಮ್, ಲಿಯಾಮ್ ಲಿವಿಂಗ್‍ಸ್ಟೋನ್, ಸಕೀಬ್ ಮಹಮ್ಮೂದ್, ಮ್ಯಾಥ್ಯೂ ಪರ್ಕಿನ್ಸನ್, ಆದೀಲ್ ರಶೀದ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೊಪ್ಲೆಯ್, ಜೇವ್ಸ್ ವಿನ್ಸ್, ಡೇವಿಡ್ ವಿಲ್ಲೆ.








