ಬೆಂಗಳೂರು : ಸರ್ಕಾರ ಬೀಳುವುದಕ್ಕೆ ಸಿದ್ದೌಷಧ ಕಾರಣ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ನಂಗೆ ಅವರು ಬರೆದಿರೋ ಕನ್ನಡವೆಲ್ಲ ಅರ್ಥವಾಗಲ್ಲ ಎಂದಿದ್ದಾರೆ.
ಬೆಂಳೂರಿನಲ್ಲಿ ಮಾತನಾಡಿದ ಅವರು, ಅದೆಲ್ಲ ಮುಗಿದು ಹೋದ ಕಥೆ. ಏಕೆ ಈಗ ಅವರು ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಹೊಯ್ತು, ಬಿಜೆಪಿ ಸರ್ಕಾರ ಇದೆ. ಇವರ ಬಗ್ಗೆ ಮಾತನಾಡುವುದು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನ್ಯಾಕೆ ಮಾತನಾಡಲಿ..? ಅವರ ತಾತ್ಪರ್ಯವೆಲ್ಲ ನಂಗೆ ಅರ್ಥವಾಗಲ್ಲ, ಇವರು ಬರೆದಿರೋ ಕನ್ನಡವೆಲ್ಲ ಅರ್ಥವಾಗಲ್ಲ ಎಂದರು.
ಇದೇ ವೇಳೆ ಲೆಕ್ಕ ಕೇಳುವ ಕಾಂಗ್ರೆಸ್ ಅವರಿಗೆ ಕೆಲಸ ಇಲ್ಲ ಎಂದು ಸಚಿವ ಸುಧಾಕರ್ ನೀಡಿದ್ದ ಹೇಳಿಕೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸಚಿವ ಸುಧಾಕರ್ ಹೇಗಾದರೂ ಮಾತಾಡಲಿ. ಆದರೆ, ಸರ್ಕಾರಕ್ಕೆ ಉತ್ತರದಾಯಿತ್ವ ಇರಬೇಕು. ನಾನು ಪ್ರತಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಲೆಕ್ಕ ಕೊಡಿ ಎಂದು ಕೇಳಿದ್ದೇನೆ. ಈ ಸಂಬಂಧ ಮೂರು ಬಾರಿ ಪತ್ರ ಬರೆದಿದ್ದೇನೆ, ಉತ್ತರ ಕೊಟ್ಟಿದ್ದಾರಾ.. ಎಂದು ಪ್ರಶ್ನಿಸಿ, ನಿನ್ನೆ ಸಿಎಂ ಅವರು ಸುಳ್ಳು ಹೇಳಿದ್ದಾರೆ ಎಂದು ದೂರಿದರು.








