ಇಂಗ್ಲೆಂಡ್ ತಂಡಕ್ಕೆ ಆಧಾರವಾದ ಒಲಿವ್ ಪೊಪ್ – ಜೋಸ್ ಬಟ್ಲರ್ ಅಜೇಯ ಶತಕದ ಜೊತೆಯಾಟ
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಒಲಿವ್ ಪೊಪ್ ಮತ್ತು ಜೋಸ್ ಬಟ್ಲರ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ದಿನದ ಗೌರವ ಪಡೆದುಕೊಂಡಿದೆ. 123 ರನ್‍ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಒಲಿವ್ ಪೊಪ್ ಮತ್ತು ಜೋಸ್ ಬಟ್ಲರ್ ಆಧಾರವಾದ್ರು. ಪರಿಣಾಮ ಇಂಗ್ಲೆಂಡ್ ತಂಡ ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 258 ರನ್ ದಾಖಲಿಸಿದೆ.
ಟಾಸ್ ಸೋತ್ರೂ ಇಂಗ್ಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ವೆಸ್ಟ್ ಇಂಡೀಸ್ ತಂತ್ರದಂತೆ ಇಂಗ್ಲೆಂಡ್ ತಂಡದ ಆರಂಭಿಕ ಡಾಮಿನಿಕ್ ಸಿಬ್ಲೇಯ್ ಅವರು ಡಕೌಟಾದ್ರು. ರನ್ ಗಳಿಸುವ ಅವಸರದಲ್ಲಿ ಇಂಗ್ಲೆಂಡ್ ನಾಯಕ ಜಾಯ್ ರೂಟ್ ಅವರು 17 ರನ್ ಗಳಿಸಿ ರನೌಟಾದ್ರು. ಹಾಗೇ ಬೆನ್ ಸ್ಟೋಕ್ಸ್ 20 ರನ್ ಗಳಿಗೆ ತನ್ನ ಆರ್ಭಟವನ್ನು ಮುಗಿಸಿದ್ರು. ಇನ್ನೊಂದೆಡೆ ಆರಂಭಿಕ ರೋರಿ ಬನ್ರ್ಸ್ ಅವರು ತಾಳ್ಮೆಯ ಆಟ 57 ರನ್‍ಗೆ ಕೊನೆಗೊಂಡಿತ್ತು.
ಬಳಿಕ ವೆಸ್ಟ್ ಇಂಡೀಸ್ ಬೌಲರ್‍ಗಳನ್ನು ಕಾಡಿದ್ದು ಒಲಿವ್ ಪೊಪ್ ಮತ್ತು ಜೋಸ್ ಬಟ್ಲರ್. ಐದನೇ ವಿಕೆಟ್‍ಗೆ ಅಜೇಯ 135 ರನ್ ಗಳ ಜೊತೆಯಾಟವಾಡಿದ್ರು. ಈ ಜೊತೆಯಾಟ ವೆಸ್ಟ್ ಇಂಡೀಸ್ ತಂಡದ ಲೆಕ್ಕಚಾರಗಳನ್ನು ಬುಡಮೇಲು ಮಾಡಿದೆ. ಒಲಿವ್ ಪೊಪ್ ಅವರು
ಅಜೇಯ 91 ರನ್ ದಾಖಲಿಸಿದ್ರೆ. ಜೋಸ್ ಬಟ್ಲರ್ ಅಜೇಯ 56 ರನ್‍ಗಳೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪರ ಕೇಮರ್ ರಾಚ್ ಅವರು ಎರಡು ವಿಕೆಟ್ ಪಡೆದ್ರೆ, ರೊಸ್ಟನ್ ಚೇಸ್ ಒಂದು ವಿಕೆಟ್ ಉರುಳಿಸಿದ್ರು.








