ಮಂಡ್ಯ: ಫುಟ್‍ಪಾತ್‍ನಲ್ಲಿ ಮಲಗಿದ್ದ ಅಪರಿಚಿತ ಭಿಕ್ಷುಕಿಯ ಮೇಲೂ ಕಾಮುಕರ ಅಟ್ಟಹಾಸ ಮೆರೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ನಗರದ ಬಾಟಾ ಶೋರೂಂ ಬಳಿ ಭಿಕ್ಷುಕಿಯ ಮೇಲೆ ಅತ್ಯಾಚಾರ ಎಸಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದುರುಳರು ಪರಾರಿಯಾಗಿದ್ದಾರೆ.
ಶೋರೂಂ ಎದುರಿನ ಫುಟ್‍ಪಾತ್‍ನಲ್ಲಿ ಭಿಕ್ಷುಕಿ ಹಗಲು ಭಿಕ್ಷೆ ಬೇಡಿ ರಾತ್ರಿ ಮಲಗುತ್ತಿದ್ದರು. ಇದನ್ನೇ ಹೊಂಚು ಹಾಕಿದ್ದ ಕಾಮುಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟಕ್ಕೂ ಸುಮ್ಮನಾಗದೆ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ
ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗ ಹೊಸ ಸಂಕಲ್ಪ ಮಾಡಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ಮಾಡುವ ದೃಢ...








