2019-20ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ 1,65,302 ಕೋಟಿ ರೂ ಜಿಎಸ್ ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ. ಕರ್ನಾಟಕಕ್ಕೆ 18,628 ಕೋಟಿ ರೂ. ರಿಲೀಸ್ ಮಾಡಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಮಾರ್ಚ್ 2020ನೇ ಅವಧಿಯ 13,806 ಕೋಟಿ ರೂ.ಜಿಎಸ್ ಟಿ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಗಣನೆಗೆ ತೆಗೆದುಕೊಂಡು, 2019-20ರವರೆಗಿನ ಸಂಪೂರ್ಣ ಪರಿಹಾರವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಇದೇ ಅವಧಿಯಲ್ಲಿ 95,444 ಕೋಟಿ ರೂ. ಹೆಚ್ಚುವರಿ ಕರ ಸಂಗ್ರಹಿಸಲಾಗಿದೆ. ಇದಲ್ಲದೆ, ಕೇಂದ್ರ ಸರ್ಕಾರ 33,412 ಕೋಟಿ ರೂ ಮೊತ್ತವನ್ನು ಕನ್ಸಾಲಿಟೇಟೆಡ್ ನಿಧಿಯಿಂದ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ. ಆಂಧ್ರಪ್ರದೇಶಕ್ಕೆ 3028 ಕೋಟಿ ರೂ. ಅಸ್ಸಾಂಕ್ಕೆ 1284 ಕೋಟಿ ರೂ., ಬಿಹಾರಕ್ಕೆ 5464 ಕೋಟಿ ರೂ., ಹರಿಯಾಣಕ್ಕೆ 6617 ಕೋಟಿ, ಹಿಮಾಚಲ ಪ್ರದೇಶಕ್ಕೆ 2,477 ಕೋಟಿ ಮತ್ತು ಜಮ್ಮು-ಕಾಶ್ಮೀರಕ್ಕೆ 3281 ಕೋಟಿ ರೂ. ಜಾರ್ಖಂಡ್ ಗೆ 2,219 ಕೋಟಿ ರೂ., ಕರ್ನಾಟಕಕ್ಕೆ 18,628 ಕೋಟಿ ರೂ., ಕೇರಳಕ್ಕೆ 8111 ಕೋಟಿ ರೂ., ಮಧ್ಯಪ್ರದೇಶಕ್ಕೆ 6538 ಕೋಟಿ ರೂ, ಮಹಾರಾಷ್ಟ್ರಕ್ಕೆ 19,233 ರೂ., ಮೇಘಾಲಯಕ್ಕೆ 157 ಕೋಟಿ ರೂ. , ತಮಿಳುನಾಡಿಗೆ 12,305 ಕೋಟಿ ರೂ, ತೆಲಂಗಾಣ 3054 ಕೋಟಿ ರೂ, ತ್ರಿಪುರಾ 293 ಕೋಟಿ ರೂ, ಉತ್ತರ ಪ್ರದೇಶ 9,123 ಕೋಟಿ, ಉತ್ತರಾಖಂಡ 3375 ಕೋಟಿ ಮತ್ತು ಪಶ್ಚಿಮ ಬಂಗಾಳಕ್ಕೆ 6,200 ಕೋಟಿ ರೂ.ನೀಡಲಾಗಿದೆ.
ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...








