ಮುಂಬೈ : 100ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಮದರ್ ಇಂಡಿಯಾ ಖ್ಯಾತಿಯ ಬಾಲಿವುಡ್ ನ ಹಿರಿಯ ನಟಿ ಕುಂಕುಮ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕುಂಕುಮ್ ಅವರು ಮುಂಬೈನ ಬಾಂದ್ರಾ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಸಹೋದರಿ ಮಾಹಿತಿ ನೀಡಿದ್ದಾರೆ.
ಭೋಜ್ ಪುರಿಯ ‘ಗಂಗಾ ಮಾಯಾ ತೋಹೆ ಪಿಯಾರಿ ಚಾಧೈಬೊ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕುಂಕುಮ್ ಅವರು, ಪ್ರಮುಖವಾಗಿ ‘ಮದರ್ ಇಂಡಿಯಾ’, ‘ಕೊಹಿನೂರ್’ ಮತ್ತು ‘ಉಜಾಲಾ’ ಸೇರಿದಂತೆ ಕುಂಕುಮ್ 100ಕ್ಕೂ ಅಧಿಕ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ ಪ್ರಕಾಶ್ ಮೆಹ್ರಾ ನಿರ್ದೇಶನದ ಏಕ್ ಕುನ್ವಾರಿ ಏಕ್ ಕುನ್ವಾರಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.








