ಹಲ್ಲು ನೋವಿನಿಂದ ಎರಡು ಬಾರಿ ಸಾವಿನ ಕದ ತಟ್ಟಿ ಬಂದ ಮಹಿಳೆ
ಇಂಗ್ಲೆಂಡ್, ಜುಲೈ 29: ಹಲ್ಲುನೋವಿನ ಪ್ರಕರಣ ದುಃಸ್ವಪ್ನವಾಗಿ ಕಾಡಿ ಯುಕೆ ಮೂಲದ ಮಹಿಳೆಯೊಬ್ಬಳು ಎರಡು ಬಾರಿ ಸಾವಿನ ದಡ ತಟ್ಟಿ ಬಂದ ದುರಂತ ಕಥೆ ಇದು. ರೆಬೆಕ್ಕಾ ಎಂಬಾಕೆಗೆ ಹಲ್ಲುನೋವು ಮೆದುಳಿನಲ್ಲಿ ಸೋಂಕಾಗಿ ಬದಲಾಗಿ ಹೃದಯ, ಯಕೃತ್ತು ಮತ್ತು ಮೆದುಳಿನ ಮೇಲೆ ಪರಿಣಾಮ ಬೀರಿತು. ರೆಬೆಕ್ಕಾಗೆ ಚಿಕಿತ್ಸೆ ನೀಡುವ ವೈದ್ಯರು ಡಿಸೆಂಬರ್ 2019 ರಲ್ಲಿ ಆಕೆಗೆ ಕಾಣಿಸಿಕೊಂಡ ಸಣ್ಣ ಹಲ್ಲಿನ ನೋವಿಗೆ ಕಾರಣವಾದ ಬ್ಯಾಕ್ಟೀರಿಯಾ ಮೆದುಳಿನಲ್ಲಿ ಸೋಂಕಿಗೆ ಕಾರಣವಾಗಿದೆ ಎಂದು ಬಹಿರಂಗಪಡಿಸಿದರು.

2019ರ ಡಿಸೆಂಬರ್ನಲ್ಲಿ ರೆಬೆಕ್ಕಾ ಅವರಿಗೆ ಹಲ್ಲುನೋವು ಕಾಣಿಸಿಕೊಂಡಿದ್ದು, ಹಲ್ಲಿನ ಬಾವು ಉಂಟಾಗಿತ್ತು. ಎರಡು ತಿಂಗಳು ನಿರ್ಲಕ್ಷಿಸಿದ ಬಳಿಕ ಅವರು ಚಿಕಿತ್ಸೆಗಾಗಿ ಡೆಂಟಿಸ್ಟ್ ಅನ್ನು ಭೇಟಿಯಾದರು. ಆದರೆ ಅಷ್ಟರಲ್ಲಿ ರೆಬೆಕ್ಕಾಗೆ ಎದ್ದು ನಿಲ್ಲಲು ಸಾಧ್ಯವಾಗದಂತೆ ಮತ್ತು ನೆನಪಿನ ಶಕ್ತಿ ಕಡಿಮೆಯಾದಂತೆ ಅನಿಸಿತು. ಆಗ ರೆಬೆಕ್ಕಾರನ್ನು ಪೂರ್ವ ಯಾರ್ಕ್‌ಷೈರ್‌ನ ಸ್ನೈತ್ ನ ಸ್ಕಂಟ್‌ಹಾರ್ಪ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸ್ಕ್ಯಾನ್ ಗಳು ಆಕೆಯ ಹೃದಯ, ಯಕೃತ್ತು ಮತ್ತು ಮೆದುಳಿನ ಮೇಲೆ ಸೋಂಕು ತಗುಲಿರುವುದನ್ನು ತೋರಿಸಿತು. ಅಷ್ಟರಲ್ಲಿ ಆಕೆ ನಡೆಯುವ ಸಾಮರ್ಥ್ಯವನ್ನು ಕಳೆದುಕೊಂಡಳು ಮತ್ತು ಹಲ್ ರಾಯಲ್ ಆಸ್ಪತ್ರೆಯಲ್ಲಿನ ನರವೈಜ್ಞಾನಿಕ ವಿಭಾಗಕ್ಕೆ ವರ್ಗಾಯಿಸಲ್ಪಟ್ಟರು. ಆ ಸಮಯದಲ್ಲಿ, ವೈದ್ಯರು ರೆಬೆಕ್ಕಾ ಅವರ ತಾಯಿಗೆ ನಿಮ್ಮ ಮಗಳು ಕೊರೋನವೈರಸ್ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದ ಆಸ್ಪತ್ರೆಯಲ್ಲಿದ್ದ ಕಾರಣ ಆಕೆಗೆ ಕೊವಿಡ್-19 ಪರೀಕ್ಷೆ ನಡೆಸಬೇಕು, ಒಂದು ವೇಳೆ ಆಕೆಗೆ ಸೋಂಕು ತಗುಲಿದ್ದರೆ ಆಕೆ ಬದುಕುಳಿಯುವುದಿಲ್ಲ ಎಂದು ಹೇಳಿದರು. ಅದೃಷ್ಟವಶಾತ್, ಅವಳ ಎಲ್ಲಾ 12 ಕೋವಿಡ್-19 ಪರೀಕ್ಷೆಗಳು ನಕಾರಾತ್ಮಕವಾಗಿ ಬಂದವು.

ಕೆಲವು ತಿಂಗಳ ಚಿಕಿತ್ಸೆ ಬಳಿಕ ಸ್ವಲ್ಪ ಮಟ್ಟಿನ ಚೇತರಿಕೆ ಕಂಡ ರೆಬೆಕ್ಕಾ ಸುಮಾರು 30 ಕೆಜಿ ತೂಕ ಕಳೆದು ಕೊಂಡಿದ್ದು, ಕಳೆದ ವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ. ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಬೆಕ್ಕಾ ನಾನು ನಿಜವಾಗಿಯೂ ಆತಂಕಕ್ಕೊಳಗಾಗಿದ್ದೆ ಮತ್ತು ಸಾಕಷ್ಟು ಭಾವುಕಳಾಗಿದ್ದೆ. ನಾನು ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದೇನೆ ಎಂದೇ ಭಾವಿಸಿದೆ. ಇದು ಜೀವನವನ್ನು ಬದಲಾಯಿಸುವ ಅನುಭವವಾಗಿದೆ. 35 ನೇ ವಯಸ್ಸಿನಲ್ಲಿ, ಪ್ರತಿದಿನ ಬೆಳಿಗ್ಗೆ ಟ್ಯಾಬ್ಲೆಟ್‌ಗಳನ್ನು ತೆಗೆದುಕೊಳ್ಳುವುದನ್ನು ನೀವು ನಿರೀಕ್ಷಿಸುವುದಿಲ್ಲ. ಇದು ನಿಜವಾಗಿಯೂ ದೊಡ್ಡ ಆಘಾತವಾಗಿದೆ ಮತ್ತು ನನಗೆ ಜೀವನದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ನೀಡಿದೆ . ನೀವು ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ರೀತಿ ತೆಗೆದು ಕೊಂಡರೆ ನಿಮ್ಮ ಜೀವನವನ್ನು ಕಳೆದುಕೊಳ್ಳಬೇಕಾಗಬಹುದು ಎಂದು ಅವರು ಹೇಳಿದರು








