ಜೆಎನ್’ಯು ಸಿಎಎ ವಿರೋಧಿ ಪ್ರತಿಭಟನೆ – ಭಾಗಿಯಾಗಲು 5 ಕೋಟಿ ರೂ.ಪಡೆದ ದೀಪಿಕಾ ಪಡುಕೋಣೆ ?
ಗುವಾಹಟಿ, ಜುಲೈ 29: ಮಾಜಿ ರಾ ಅಧಿಕಾರಿ ಎನ್ ಕೆ ಸೂದ್ ಅವರು, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಸಂಬಂಧ ಹೊಂದಿರುವ ವ್ಯಕ್ತಿಯಿಂದ 5 ಕೋಟಿ ರೂ. ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಲಾಗುವ ಉದ್ಯಮಿ ಪ್ರಮುಖ ಉದ್ಯಮಿ ಅನೀಲ್ ಮುಸರತ್ ಅವರಿಂದ 5 ಕೋಟಿ ರೂ. ಪಡೆದಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ಈ ಬಗ್ಗೆ ತನಿಖೆ ಆರಂಭಿಸಿದೆ ಎಂದು ಸೂದ್ ಹೇಳಿದ್ದಾರೆ. ಮಾಜಿ ರಾ ಅಧಿಕಾರಿ ಬಾಲಿವುಡ್, ಪಾಕಿಸ್ತಾನದ ಐಎಸ್ಐ ಮತ್ತು ಕ್ರಿಮಿನಲ್ ಭೂಗತ ಜಗತ್ತಿನ ನಡುವಿನ ಸಂಬಂಧದ ಬಗ್ಗೆ ಅನೇಕ ಬಾರಿ ಧ್ವನಿ ಎತ್ತಿದ್ದಾರೆ.

ಚಲನಚಿತ್ರೋದ್ಯಮ ಮತ್ತು ನೆರೆಯ ಪಾಕಿಸ್ತಾನದ ನಡುವಿನ ಸಂಬಂಧಗಳ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಹಾರಾಷ್ಟ್ರ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ವರದಿಗಳು ತಿಳಿಸಿವೆ.

ಈ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿದ್ದು, ಅನೇಕ ಮಂದಿ ದೀಪಿಕಾ ಪಡುಕೋಣೆಯ ಬಂಧನಕ್ಕೆ ಒತ್ತಾಯಿಸಿದ್ದಾರೆ. ದೀಪಿಕಾ ವಿರುದ್ಧ ಸಿಡಿದೆದ್ದಿರುವ ನೆಟ್ಟಿಗರಲ್ಲಿ ಹಲವರು ಆಕೆಯನ್ನು ಭಯೋತ್ಪಾದಕಿ ಎಂದು ಕರೆದು ಆಕೆಯ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.








