ನೈಟ್ ನ್ಯೂಸ್ ಅಪ್ಡೇಟ್
1.

ನಿಲ್ಲದ ಕೊರೋನಾ ಅರ್ಭಟ; 5503 ಮಂದಿಗೆ ಪಾಸಿಟಿವ್ 92 ಬಲಿ
ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಇಂದು 5503 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1.12ಲಕ್ಷಕ್ಕೆ ಏರಿಕೆಯಾಗಿದೆ.
2.

ಟಿಪ್ಪು, ರಾಯಣ್ಣ ಪಠ್ಯಕ್ಕೆ ಕೊಕ್: ಹೋರಾಟದ ಎಚ್ಚರಿಕೆ ಕೊಟ್ಟ ಹುಲಿಯಾ ರಾಜ್ಯ ಸರ್ಕಾರ ಹತ್ತನೇ ತರಗತಿಯ ಪಠ್ಯಕ್ರಮ ಏಸು ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಮೊದಲಾದವರಿಗೆ ಸಂಬಂಧಿಸಿದ ಪಠ್ಯವನ್ನು ಕೈ ಬಿಟ್ಟಿರೋದನ್ನ ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.
3. 
ಸಚಿನ್ ತೆಂಡುಲ್ಕರ್ ಯಾವತ್ತೂ ಕರುಣೆ ಇಲ್ಲದ ಆಟಗಾರನಲ್ಲ – ಕಪಿಲ್ ದೇವ್.ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನಲ್ಲಿ ಮಾಡಿರದಂತಹ ದಾಖಲೆಗಳಿಲ್ಲ. ಸಾಧನೆಗಳಿಲ್ಲ. ಬಹುತೇಕ ದಾಖಲೆಗಳಲ್ಲಿ ಸಚಿನ್ ಹೆಸರು ಕಾಣಿಸಿಕೊಳ್ಳುತ್ತದೆ. ಈಗಲೂ ಶತಕಗಳ ಪಟ್ಟಿಯಲ್ಲಿ ಸಚಿನ್ ಹೆಸರು ಮೊದಲ ಸಾಲಿನಲ್ಲಿದೆ. ಆದ್ರೆ ದ್ವಿಶತಕ ಮತ್ತು ತ್ರಿಶತಕದ ದಾಖಲೆಗಳಲ್ಲಿ ಸಚಿನ್ ಹೆಸರು ಕಾಣಿಸುತ್ತಿಲ್ಲ.
4.

ಜೆಎನ್’ಯು ಸಿಎಎ ವಿರೋಧಿ ಪ್ರತಿಭಟನೆ – ಭಾಗಿಯಾಗಲು 5 ಕೋಟಿ ರೂ.ಪಡೆದ ದೀಪಿಕಾ ಪಡುಕೋಣೆ ?ಮಾಜಿ ರಾ ಅಧಿಕಾರಿ ಎನ್ ಕೆ ಸೂದ್ ಅವರು, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಸಂಬಂಧ ಹೊಂದಿರುವ ವ್ಯಕ್ತಿಯಿಂದ 5 ಕೋಟಿ ರೂ. ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
5.

ಭಾರತಕ್ಕೆ ರಫೇಲ್ ಯುದ್ಧವಿಮಾನ ಆಗಮನಕ್ಕೆ ಕ್ಷಣಗಣನೆ: ಚೀನಿಯರ ಜೆ 20 ಗಿಂತ ಪ್ರಭಾವಿ ರಫೇಲ್!ಐದು ರಫೇಲ್ ಜೆಟ್‌ಗಳ ಮೊದಲ ಬ್ಯಾಚ್ ಫ್ರಾನ್ಸ್‌ನಿಂದ ಸೋಮವಾರ ಭಾರತಕ್ಕೆ ಪ್ರಯಾಣ ಪ್ರಾರಂಭಿಸಿದ್ದು, ಇಂದು ಭಾರತಕ್ಕೆ ಆಗಮಿಸುತ್ತಿದೆ. ಭಾರತ ಮತ್ತು ಚೀನಾ ಸಂಘರ್ಷ ವಾತಾವರಣದ ನಡುವೆ 5 ರಫೇಲ್ ಯುದ್ಧ ವಿಮಾನಗಳು ಇಂದು ಹರ್ಯಾಣದ ಅಂಬಾಲಾದಲ್ಲಿ ಬಂದು ಇಳಿಯಲಿದೆ.








