ಲಾಕ್ ಡೌನ್ ಆದಾಗಿನಿಂದಲೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸೋನು ಸೂದ್ ಅವರು ರೀಲ್ ಲೈಫ್ ನಲ್ಲಿ ವಿಲನ್ ಆದ್ರೂ ರಿಯಲ್ ಲೈಫ್ ನಲ್ಲಿ ಜನರ ಪಾಲಿನ ಹೀರೋ ಆಗಿದ್ದಾರೆ. ಮಗಳ ಆನ್ ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ್ದ ಹಿಮಾಚಲ ಪ್ರದೇಶದ ರೈತನಿಗೆ ಸಹಾಯ ಮಾಡಿ, ಟ್ರ್ಯಾಕ್ಟರ್ , ಎತ್ತು ಇಲ್ಲದೆ ಹೆಣ್ಣುಮಕ್ಕಳಿಂದಲೇ ಹೊಲ ಉಳಿಮೆ ಮಾಡಿಸಿದ್ದ ಆಂಧ್ರದ ರೈತನಿಗೆ ನೆರವಾಗಿ, ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿರುವ ಸೋನು ಸೂದ್ ಇದೀಗ ಮತ್ತೊಂದು ಜನ ಮೆಚ್ಚುವ ಕೆಲಸ ಮಾಡಿ ಜನಮನ್ನಣೆ ಪಡೆದುಕೊಂಡಿದ್ದಾರೆ. 
ಲಾಕ್ ಡೌನ್ ಅವಧಿಯಲ್ಲಿ ದೇಶದ ವಿವಿಧೆಡೆ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಸಿಲುಕಿಕೊಂಡಿದ್ದ ನೂರಾರು ವಲಸಿಗರು ಅವರ ಊರು ತಲುಪಲು ವ್ಯವಸ್ಥೆ ಮಾಡಿಸಿ ಜನರ ಪ್ರೀತಿ ಪಾತ್ರರಾಗಿದ್ದ ಸೋನು ಇದೀಗ ಕಷ್ಟದಲ್ಲಿರುವ ಕುಟುಂಬಗಳನ್ನು ಹುಡುಕಿ ಅವರಿಗೆ ನೆರವು ನೀಡುತ್ತಿದ್ದಾರೆ. ಕೆಲಸ ಕಳೆದುಕೊಂಡು ಪರದಾಡುತ್ತಿರುವವರಿಗೆ ಕೆಲಸ ಒದಗಿಸಲು ಮಹತ್ವದ ಯೋಜನೆ ರೂಪಿಸಿದ್ದಾರೆ. ತಮ್ಮ ಜನ್ಮದಿನದ ಸಂದರ್ಭದಲ್ಲಿ ಈ ತಿಂಗಳ ಆರಂಭದಲ್ಲಿ ಆರಂಭಿಸಿದ್ದ ಪ್ರವಾಸಿ ರೋಜ್‌ಗಾರ್ ಎಂಬ ಉದ್ಯೋಗ ಪೋರ್ಟಲ್‌ನಲ್ಲಿ ಮೂರು ಲಕ್ಷ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವುದಾಗಿ ಸೋನು ಸೂದ್ ಘೋಷಿಸಿ ರಿಯಲ್ ಹೀರೋ ಆಗಿಬಿಟ್ಟಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಸೋನು ‘ನನ್ನ ಹುಟ್ಟುಹಬ್ಬದ ವೇಳೆ ನನ್ನ ಕಡೆಯಿಂದ ಸಣ್ಣದೊಂದು ಪ್ರಯತ್ನ. ಪ್ರವಾಸಿ ರೋಜ್ಗಾರ್ ಡಾಟ್ ಕಾಮ್ನಲ್ಲಿ ಮೂರು ಲಕ್ಷ ಉದ್ಯೋಗ ಸಿಗಲಿದೆ. ಇದೆಲ್ಲವೂ ಉತ್ತಮ ಸಂಬಳ, ಪಿಎಫ್, ಇಎಸ್ಐ ಮತ್ತು ಇತರೆ ಸವಲತ್ತುಗಳನ್ನು ಒಳಗೊಂಡಿರಲಿದೆ’ ಎಂದು ತಿಳಿಸಿದ್ದಾರೆ.
ಕಪಿಲ್ ಶರ್ಮಾ ಶೋ ಹಾಗೂ ಸೋನು ಸೂದ್ ಅವರ ನೆರವಿನಿಂದಾಗಿ ನೂರಾರು ಕಾರ್ಮಿಕರು ಸುರಕ್ಷಿತವಾಗಿ ತಮ್ಮ ತಮ್ಮ ಊರುಗಳಿಗೆ ತಲುಪಿದ್ದು, ಸೋನು ಸೂದ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಖ್ಯಾತ ಕಾಮಿಡಿ ಸೋ ಆಗಿರುವ ‘ದಿ ಕಪಿಲ್ ಶರ್ಮಾ’ ಮತ್ತೆ ಆರಂಭವಾಗಿದ್ದು, ಈ ಸೀಸನ್ ನ ಮೊದಲ ಅತಿಥಿಯಾಗಿ ಸೋನು ಸೂದ್ ಭಾಗವಹಿಸಿದ್ದಾರೆ. ಈ ಎಪಿಸೋಡ್ ಆಗಸ್ಟ್ 1 ರಂದು ಟೆಲಿಕಾಸ್ಟ್ ಆಗಲಿದೆ.
ಫುಟ್ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್ಮ್ಯಾನ್ ಆಟವೇ ಅಸ್ತ್ರ..!
ಭಾರತದಲ್ಲಿ ಕ್ರಿಕೆಟ್ ಹೇಗೆ ಧರ್ಮವಾಗಿದೆಯೋ ಹಾಗೇ ಆ ರಾಷ್ಟ್ರದಲ್ಲೂ ಫುಟ್ಬಾಲ್ ಆಟ ಧರ್ಮವಾಗಿದೆ. ಭಾರತದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವ ರೀತಿಯಲ್ಲೇ ಆ ದೇಶದ ಗಲ್ಲಿ ಗಲ್ಲಿಗಳಲ್ಲೂ...








