ಕ್ಯಾಲಿಫೋರ್ನಿಯಾ : ಈಗಾಗಲೇ ಹೆಮ್ಮಾರಿ ಕೊರೊನಾ ವೈರಸ್ ಹೊಡೆತಕ್ಕೆ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಈಗ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಚೆರ್ರಿ ಕಣಿವೆಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ರಿವರ್ಸೈಡ್ ಕೌಂಟಿ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಶುಕ್ರವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಾಣಿಸಿಕೊಂಡ ಕಾಳ್ಗಿಚ್ಚು 4,125 ಎಕರೆ ಪ್ರದೇಶವನ್ನು ಆವರಿಸಿದೆ. ಸದ್ಯ ಚೆರ್ರಿ ಕಣಿವೆ ಪ್ರದೇಶದಲ್ಲಿದ್ದ ಸುಮಾರು 200 ಮನೆಗಳಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದು, ವಿಮಾನದ ಮೂಲಕವೂ ಬೆಂಕಿ ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
#AppleFIRE [UPDATE] 8:00 p.m. 08/01/2020 – The Apple Fire is now 12,000 acres and remains 0% contained.
Several EVACUATION ORDERS and warnings remain in place. Please visit https://t.co/NNPcufL1ea to search if your address is in an evacuation area. pic.twitter.com/qyV6NMUUqT
— CAL FIRE/Riverside County Fire Department (@CALFIRERRU) August 2, 2020