14 ಸಾವಿರ ಅಡಿ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡ 111 ನಾಗರಿಕರನ್ನು ಪಾರು ಮಾಡಿ ಅರುಣಾಚಲ ಪ್ರದೇಶದಲ್ಲಿ ಯೋಧರು ರಕ್ಷಣೆ ಮಾಡಿದ ಘಟನೆ ಶನಿವಾರ ನಡೆದಿದೆ. ಸೇಲ ಪಾಸ್ ಬಳಿ ಹಿಮಪಾತ ಉಂಟಾಗಿತ್ತು. ಹಿಮದ ನಡುವೆ ಮಕ್ಕಳು ಹಿರಿಯ ನಾಗರಿಕರು ಸೇರಿ 111 ಮಂದಿ ಹಾಗೂ 70 ವಾಹನಗಳು ಸಿಲುಕಿಕೊಂಡಿದ್ದವು. ಈ ವೇಳೆ ಯೋಧರ ತಂಡ ಧಾವಿಸಿ ಹಿಮದಲ್ಲಿ ಸಿಲುಕಿದವರ ರಕ್ಷಣೆ ಮಾಡಿದ್ದಾರೆ. ರಕ್ಷಣಾ ಕಾರ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ಕೂಡ ಭಾಗಿಯಾಗಿತ್ತು ಎನ್ನಲಾಗಿದೆ.
ಸೇಲಪಾಸ್ ಭಾರತ ಮತ್ತು ಚೀನಾ ಗಡಿಯ ಸಮೀಪದಲ್ಲಿರುವ ಪ್ರದೇಶವಾಗಿದೆ. ಜೀರೋ ಡಿಗ್ರಿ ಸೆಲ್ಷಿಯಸ್ ನಲ್ಲಿರುವ ಈ ತಾಣಕ್ಕೆ ನಿತ್ಯ ಪ್ರವಾಸಿಗರ ದಂಡು ಹರಿದು ಬರುತ್ತೆ. ಚಳಿಗಾಲದಲ್ಲಿ ಅತಿ ಹೆಚ್ಚು ಹಿಮಾ ಬೀಳುವುದರಿಂದ ಈ ಜಾಗದಲ್ಲಿ ಹಿಮಪಾತದಂತಃ ಘಟನೆಗಳು ಪ್ರತಿ ವರ್ಷ ನಡೆಯುತ್ತದೆ. ಯೋಧರ ಪರಿಶ್ರಮಕ್ಕೆ ಅಪಾಯದಿಂದ ಪಾರಾದ ಜನರು ಹಾಗೂ ಅರುಣಾಚಲ ಸರ್ಕಾರ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.








