ಬಳ್ಳಾರಿ: ಕಳೆದೆರೆಡು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಬಹುತೇಕ ನದಿಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಮಹಾಮಳೆಗೆ ತುಂಗಭದ್ರಾ ಜಲಾಶಯದ ಒಳಹರಿವು ಏಕಾಎಕಿ ಹೆಚ್ಚಾಗಿದ್ದು, 17,858 ಕ್ಯುಸೆಕ್ ಒಳಹರಿವು ದಾಖಲಾಗಿದೆ. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ1,612.50 ಅಡಿ ನೀರಿನ ಸಂಗ್ರಹವಾಗಿದೆ. ಒಳಹರಿವು ಹೆಚ್ಚಾದ ಹಿನ್ನಲೆ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, 7,808 ಕ್ಯುಸೆಕ್ ನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ. ತುಂಗಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, 60,425 ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಇನ್ನೂ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಲ್ಲಾಡಳಿತ ಎಚ್ಚರಿಸಿದ್ದು, ಜಲಾಶಯದತ್ತ ಜನರು ಓಡಾಡದಂತೆ ತಿಳಿಸಿದೆ.
ನಾಲ್ಕು ವರ್ಷಗಳ ವನವಾಸ ಮುಗಿಸಿ ಮರಳಿದ ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ :ಭುವನೇಶ್ವರ್ ಕುಮಾರ್ ಪುನರಾಗಮನಕ್ಕೆ ಅಜಿತ್ ಅಗರ್ಕರ್ ಅಡ್ಡಗಾಲು ಹಾಕಿದ್ದರಾ? ಆಯ್ಕೆ ಸಮಿತಿಯ ಒಳಗಿನ ಗುಟ್ಟು ರಟ್ಟು?
ಮುಂಬೈ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಕಡೆ ಸಂತಸದ ಸುದ್ದಿ ಸಿಕ್ಕಿದ್ದರೆ, ಮತ್ತೊಂದು ಕಡೆ ಆಯ್ಕೆ ಸಮಿತಿಯ ಒಳಗಿನ ಅಸಲಿ ಆಟ ಈಗ ಬಯಲಾಗಿದೆ. ಮುಂಬರುವ ನ್ಯೂಜಿಲೆಂಡ್...








