ಒಂದೆಡೆ ಕೊರೊನಾ ಆತಂಕದಿಂದ ನಲುಗಿ ಹೋಗಿದ್ದ ಜನರಿಗೆ ಇದೀಗ ವರುಣನ ಕಾಟ ಎದುರಾಗಿದೆ. ಇದೀಗ ಸಿಲಿಕಾನ್ ಸಿಟಿ ಮಂದಿಗೆ ಕೊಂಚ ನಿರಾಳವಾಗುವಂತ ಸುದ್ದಿ ಹೊರಬಿದ್ದಿದೆ. ಇಷ್ಟು ದಿನ ನಗರದಲ್ಲಿ ರುದ್ರ ತಾಂಡವ ಮುಂದುವರೆಸಿದ್ದ ಕೊರೊನಾ ಹಾವಳಿ ಇದೀಗ ಕೊಂಚ ಕಡಿಮೆಯಾಗುತ್ತಿದೆಯಂತೆ. ಅಂದ್ರೆ ಸೋಂಕಿತರ ಸಂಖ್ಯೆಯಲ್ಲಿ ಕ್ರಮೇಣ ಕಡಿಮೆಯಾಗುತ್ತಿದ್ದು, ಇದು ಸಮಾಧಾನಕರ ಸಂಗತಿಯೇ ಆಗಿದೆ. ಹಾಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 32,757 ಕ್ಕೆ ಇಳಿಕೆ ಆಗಿದೆ.
ಈ ಪೈಕಿ 0 ಇಂದ 5 ವರ್ಷ ವಯೋಮಾನದ ಮಕ್ಕಳು 722
6-10 ವರ್ಷ ವಯಸ್ಸಿನ ಮಕ್ಕಳು 1,067
11-20 ವರ್ಷದ ವಯಸ್ಸಿನ ಯುವಕ, ಯುವತಿಯರು 3,660
21-30 ವಯೋಮಾನದ ಯುವಕ, ಯುವತಿಯರು 14,111
31-40 ವರ್ಷದ ಪುರುಷ, ಮಹಿಳೆಯರು 14,452
41-50 ವಯಸ್ಸಿನ ಪುರುಷರು ಮತ್ತು ಮಹಿಳೆಯರು 11,918
51-60 ವಯೋಮಾನದವರು 9,887 ಜನ
60 ವರ್ಷ ಮೇಲ್ಪಟ್ಟ ವೃದ್ಧ, ವೃದ್ಧೆಯರು 8,890 ಇದ್ದಾರೆ. ಇನ್ನೂ 21 ರಿಂದ 50 ವರ್ಷದವರೇ ಅತಿ ಹೆಚ್ಚು ಸೋಂಕಿತರಿದ್ದಾರೆ.








