ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ನಟಿಸುತ್ತಿರುವ ಬುನಿರೀಕ್ಷಿತ ಪ್ಯಾಂಟಮ್ ಚಿತ್ರ ಪೋಸ್ಟರ್ ಗಳಿಂದಲೇ ಸಾಕಷ್ಟು ಸದ್ದು ಮಾಡಿದೆ. ಡಿಫರೆಂಟ್ ಲುಕ್ ನಲ್ಲಿ ಕಾಣಿಸುಕೊಳ್ಳುತ್ತಿರುವ ಕಿಚ್ಚ ಅವರ ಹೊಸ ಚಿತ್ರಕ್ಕೆ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಚಿತ್ರ ಶೂಟಿಂಗ್ ಇದೀಗ ಮತ್ತೆ ಹಲವಾರು ಮುಂಜಾಗ್ರತಾ ಕ್ರಮಗಳೊಂದಿಗೆ ಭರದಿಂದ ಸಾಗುತ್ತಿದೆ. ಹೈದ್ರಾಬಾದ್ ನಲ್ಲಿ ಭರ್ಜರಿ ಸೆಟ್ ನಿರ್ಮಿಸಿದ್ದು, ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ.
ಶೂಟಿಂಗ್ ಶುರುವಾದಾಗಿನಿಂದಲೂ ಚಿತ್ರತಂಡ ಬ್ಯಾಕ್ ಟು ಬ್ಯಾಕ್ ಟೀಸರ್, ಪೋಸ್ಟರ್ಗಳನ್ನು ರಿಲೀಸ್ ಮಾಡುತ್ತಲೇ ಬಂದಿದ್ದು, ಈಗಾಗಲೇ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಪೋಸ್ಟರ್ ನೋಡಿದ್ರೆ ಇದೊಂದು ಪಕ್ಕಾ ಥ್ರಿಲ್ಲರ್ , ಸಸ್ಪೆನ್ಸ್ ಚಿತ್ರ ಅಂತ ಅನ್ನಿಸೋದ್ರಲ್ಲಿ ನೋಡ ಡೌಟ್. ಇದೀಗ ಆಕ್ಷನ್ ಕಟ್ ಹೇಳಿರುವ ಅನೂಪ್ ಭಂಡಾರಿ ಅವರು ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಹೇಗಿರಲಿದೆ ಎಂಬುದರ ಸುಳಿವು ನೀಡಿದ್ದಾರೆ.
ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಹೇಗಿರಲಿದೆ ಎನ್ನುವುದಕ್ಕೆ ಒಂದು ವಿಡಿಯೋ ಮಾಡಿ, ಪೋಸ್ಟರ್ ಬಿಡುಗಡೆ ಮಾಡಿರುವ ಅನೂಪ್ ಭಂಡಾರಿ ಅವರು ”ಫ್ಯಾಂಟಮ್ ಚಿತ್ರದ ಮುಖ್ಯ ಪಾತ್ರಧಾರಿ ವಿಕ್ರಾಂತ್ ರೋಣ. ಈ ಹೆಸರಿನಲ್ಲಿ ಎಷ್ಟು ಪವರ್ ಇದೆಯೋ ಆ ಪಾತ್ರವೂ ಅಷ್ಟೇ ಪವರ್ ಫುಲ್ ಆಗಿದೆ. ವಿಕ್ರಾಂತ್ ರೋಣ ಏನು ಮಾಡ್ತಾನೆ, ಹೇಗೆ ಮಾಡ್ತಾನೆ, ಯಾಕೆ ಮಾಡ್ತಾನೆ ಇದು ಯಾರಿಗೂ ಅರ್ಥವಾಗಲ್ಲ. ಆದರೆ, ಅವನು ಏನೇ ಮಾಡಿದ್ರೂ ಅದಕ್ಕೆ ಕಾರಣ ಇರುತ್ತೆ” ಎಂದು ವಿವರಣೆ ನೀಡಿದ್ದಾರೆ.
https://twitter.com/i/status/1292682276195639298
ಅಷ್ಟೇ ಅಲ್ಲದೇ ಫ್ಯಾಂಟಮ್ ಪಾತ್ರಗಳು ಬರಲಿದೆ. ಇದೀಗ ಮೊದಲನೇಯದಾಗಿ ಚಿತ್ರದ ನಾಯಕ ವಿಕ್ರಾಂತ್ ರೋಣ ಅವರ ಪಾತ್ರದ ಲುಕ್ ಬಿಡುಗಡೆಯಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಒಂದೊಂದಾಗಿಯೇ ಪ್ರಮುಖ ಪಾತ್ರಗಳು ಅನಾವರಣಗೊಳ್ಳಲಿದೆ ಎಂದು ತಿಳಿಸುವ ಮೂಲಕ ಅಭಿಮಾನಿಗಳ ಕುತೂಹಲ ದುಪ್ಪಟ್ಟುಗೊಳಿಸಿದ್ದಾರೆ.
ಇನ್ನೂ ಈ ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ವಿಭಿನ್ನವಾದ ಸಿಂಹಾಸನದ ಮೇಲೆ ಸ್ಟೈಲ್ ಆಗಿ ಕುಳಿತು, ಕೈಯಲ್ಲಿ ಗನ್ ಹಿಡಿದು ಖಡಕ್ ಲುಕ್ ನೀಡಿದ್ದು, ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನೂ ಈ ಪೋಸ್ಟರ್ ಅಭಿಮಾನಿಗಳ ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದೆ.








