ಬೆಂಗಳೂರು : ಕೊರೊನಾ ಭೀತಿಯ ನಡುವೆ ಜೂನ್ ಜುಲೈನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ ಆಗಲಿದೆ. ಮಧ್ಯಾಹ್ನ 3 ಗಂಟೆಗೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಂಡಿರುವ ಮೊಬೈಲ್ ನಂಬರ್ ಗಳಿಗೆ ಫಲಿತಾಂಶ ಕಳಿಸಲಾಗುತ್ತದೆ. ಇದರ ಜೊತೆ ವೆಬ್ ಸೈಟ್ ನಲ್ಲೂ ಫಲಿತಾಂಶವನನು ಪ್ರಕಟಿಸಲಾಗುವುದು. ಜೂನ್ ಜುಲೈ ನಲ್ಲಿ ನಡೆದ ಪರೀಕ್ಷೆಯಲ್ಲಿ 8 ಲಕ್ಷಕ್ಕೂ ಅಧಿಕ ವಿಧ್ಯಾರ್ಥಿಗಳು ಭಾಗಿಯಾಗಿದ್ದರು.
ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯ
kseeb.kar.nic.in ಅಥವಾ karresults.nic.in ಅಥವಾ examresults.net ಅಥವಾ indiaresults.com ವೆಬ್ ತಾಣಕ್ಕೆ ಭೇಟಿ ನೀಡಿ ಫಲಿತಾಂಶವನ್ನು ನೋಡಬಹುದು.
kseeb.kar.nic.in ಅಥವಾ karresults.nic.in ವೆಬ್ ತಾಣಕ್ಕೆ ಭೇಟಿ ನೀಡಿದರೆ, ‘ಕರ್ನಾಟಕ ಎಸ್.ಎಸ್.ಎಲ್.ಸಿ’ ರಿಸಲ್ಟ್ ಆಪ್ಷನ್ ನ ಕ್ಲಿಕ್ ಮಾಡಿ, ಬಳಿಕ ರಿಜಿಸ್ಟರ್ ನಂಬರ್ ಹಾಕಿ ಫಲಿತಾಂಶ ನೋಡಬಹುದು.








