ಬೆಂಗಳೂರು : ಜೂನ್, ಜುಲೈನಲ್ಲಿ ನಡೆದ 2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆ ಬರೆದ ಒಟ್ಟು 8,11,050 ವಿದ್ಯಾರ್ಥಿಗಳ ಪೈಕಿ 5,82,316 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.71.80 ಫಲಿತಾಂಶ ದಾಖಲಾಗಿದೆ. ಈ ಬಾರಿ 6 ಮಂದಿ 625 ಅಂಕ ಪಡೆದಿದ್ದಾರೆ.
625 ಅಂಕಗಳಿಗೆ 625 ಅಂಕ ಗಳಿಸಿದ ವಿದ್ಯಾರ್ಥಿಗಳ ಮಾಹಿತಿ
ಬೆಂಗಳೂರಿನ ಚಿರಾಯು 625ಕ್ಕೆ 625 ಅಂಕಗಳು
ಬೆಂಗಳೂರಿನ ನಿಖಿಲೇಶ್ 625ಕ್ಕೆ 625 ಅಂಕಗಳು
ಮಂಡ್ಯ ಜಿಲ್ಲೆಯ ಧೀರಜ್ ರೆಡ್ಡಿ 625ಕ್ಕೆ 625 ಅಂಕಗಳು
ಶಿರಸಿಯ ಸನ್ನಿಧಿ ಮಹಾಬಲೇಶ್ವರ ಹೆಗಡೆ 625/625
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅನುಷಾ 625/625
ಚಿಕ್ಕಮಗಳೂರಿನ ತನ್ಮಯಿ 625ಕ್ಕೆ 625 ಅಂಕಗಳು.









