ನವದೆಹಲಿ : ರಾಜಸ್ಥಾನದ ರಾಜಕೀಯ ಹೈಡ್ರಾಮಾಕ್ಕೆ 31 ದಿನಗಳ ಬಳಿಕ ಕೊನೆಗೂ ತೆರೆ ಬಿದ್ದಿದೆ. ಬಂಡಾಯದ ಬಾವುಟ ಹಾರಿಸಿ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ರೆಬೆಲ್ ನಾಯಕ ಸಚಿನ್ ಪೈಲಟ್ ಮುನಿಸು ಬಿಟ್ಟು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯಲು ಮುಂದಾಗಿದ್ದಾರೆ.
ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಚಿನ್ ಪೈಲಟ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಪಕ್ಷದಲ್ಲೇ ಮುಂದುವರಿಯಲು ತೀರ್ಮಾನಿಸಿದ್ದಾರೆ.
ಗೆಹ್ಲೋಟ್ ಗೆ ಕಡಿವಾಣ
ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಮುನಿಸಿಕೊಂಡು ಪಕ್ಷ ತೊರೆಯಲು ಮುಂದಾಗಿದ್ದ ಸಚಿನ್ ಪೈಲಟ್, ನಿನ್ನೆ ತಮ್ಮ ನಿರ್ಧಾರ ಬದಲಿದ್ದಾರೆ. ರೆಬೆಲ್ ನಾಯಕನ ಬೇಡಿಕೆಗಳನ್ನು ಈಡೇರಿಸಲು ಪಕ್ಷದ ಹೈಕಮಾಂಡ್ ಓಕೆ ಎಂದಿದ್ದು, ಅಹ್ಮದ್ ಪಟೇಲ್, ಕೆ.ಸಿ. ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಅಶೋಕ್ ಗೆಹ್ಲೋಟ್ ಗೆ ಕಡಿವಾಣ ಹಾಕಲು ಮುಂದಾಗಿದೆ.








