ಜೈಪುರ : ಘರ್ ವಾಪ್ಸಿ ಅಲ್ಲ, ನಾನ್ಯಾವತ್ತೂ ಕಾಂಗ್ರೆಸಿಗನೇ ಎಂದು ರೆಬೆಲ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಬಂಡಾಯ ಈಗ ಶಮನವಾಗಿದ್ದು, ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಸಮರ ಸಾರಿ ಪಕ್ಷದಿಂದ ಒಂದು ಕಾಲು ಹೊರಗಿಟ್ಟ ಸಚಿನ್ ಪೈಲಟ್ ಈಗ ಮನಸ್ಸು ಬದಲಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ ಸಚಿನ್ ಪೈಲಟ್, ತಮ್ಮ ಹಲವು ಬೇಡಿಕೆಗಳೊಂದಿಗೆ ಘರ್ ವಾಪ್ಸಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ.
ರಾಹುಲ್ ಗಾಂಧಿ ಭೇಟಿ ಬಳಿಕ ಮಾತನಾಡಿದ ಸಚಿನ್, ಯಾವತ್ತಿದ್ರೂ ಅಶೋಕ್ ಗೆಹ್ಲೋಟ್ ನನ್ನ ನಾಯಕ. ಇದು ಪಕ್ಷಕ್ಕೆ ವಾಪಸ್ ಬರುತ್ತಿರುವುದಲ್ಲ, ನಾನ್ಯಾವತ್ತೂ ಕಾಂಗ್ರೆಸಿಗನೇ ಎಂದು ಹೇಳಿದ್ದಾರೆ.
ಇನ್ನು ಸಚಿನ್ ಪೈಲಟ್ ಕಾಂಗ್ರೆಸ್ ಗೆ ವಾಪಸ್ ಆಗಿರುವುದು ಹಿರಿಯ ನಾಯಕರಿಗೆ ಖುಷಿ ತಂದಿದ್ದು,ಟ್ವಿಟ್ಟರ್ ನಲ್ಲಿ ಅವರನ್ನು ಸ್ವಾಗತಿಸಿದ್ದಾರೆ.








