ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಂಡಿಗನಾಳ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಜನರನ್ನು ಸತಾಯಿಸಿದ್ದ ಮಂಗನನ್ನು ಇದೀಗ ಗ್ರಾಮಸ್ಥರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಕಟ್ಟಿ ಗ್ರಾಮದ ಅಡಿವೆಪ್ಪ ತಳವಾರ ಗ್ರಾಮಸ್ಥರ ಸಹಕಾರದಿಂದ ಮಂಗವನ್ನು ಹಿಡಿದು ಕಾಡಿಗೆ ಬಿಡಲಾಗಿದೆ. ಮಂಡಿಗನಾಳ ಗ್ರಾಮದಲ್ಲಿ ಎಲ್ಲಿಂದಲೋ ಬಂದು ವಾಸವಾಗಿದ್ದ ಮಂಗ ಗ್ರಾಮಸ್ಥರಿಗೆ ತೊಂದರೆ ನೀಡುತಿದ್ದು ಜನರ ಬಳಿ ಆಹಾರ ಪದಾರ್ಥಗಳನ್ನ ಕಸಿದು ಓಡುವುದು, ಮನೆಗಳ ಮೇಲೆ ಉಳಿದ ಮಂಗಗಳ ಜೊತೆ ಕಾದಾಟ ಮಾಡುವುದು ಸೇರಿದಂತೆ ಮರ ಗಿಡಗಳನ್ನು ಹಾನಿ ಮಾಡುತ್ತಿತ್ತು. ಸದ್ಯ ಮಂಗವನ್ನು ಹಿಡಿದು ಕಾಡಿಗೆ ಬಿಡಲಾಗಿದ್ದು ಗ್ರಾಮಸ್ಥರು ನಿರಾಳವಾಗಿದ್ದಾರೆ.
ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ
ಡಿಕೆ ಶಿವಕುಮಾರ್ ಅವರು ತುಮಕೂರನ್ನು 2ನೇ ಬೆಂಗಳೂರು ಆಗಿ ಅಭಿವೃದ್ಧಿಪಡಿಸುವ ಆಲೋಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ತುಮಕೂರಿನಲ್ಲಿ ಆಯೋಜಿಸಿದ್ದ...








