ವಿಶ್ವವನ್ನೆ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಈ ರಕ್ಕಸಿ ವೈರಸ್ ಬಗ್ಗೆ ಜನರು ತೀವ್ರ ಆತಂಕಗೊಂಡಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್ ಮೂಲದ ಟೆಕ್ಕಿಗೆ ಕೊರೊನಾ ಕಾಣಿಸಿಕೊಂಡ ಬಳಿಕ ಇಡೀ ಬೆಂಗಳೂರಿಗೆ ಬೆಂಗಳೂರೇ ಆತಂಕಕ್ಕೀಡಾಗಿದೆ.
ಇಟಲಿಯಿಂದ ಬೆಂಗಳೂರೀಗೆ ಬರೋ ಪ್ಲಾನೇ ಇಲ್ಲದ ಟೆಕ್ಕಿ, ಅನಿವಾರ್ಯವಾಗಿ ಇಲ್ಲಿಗೆ ಬಂದು ಕೊರೊನಾ ಭೀತಿ ಹರಡಿಸಿ ಹೋಗಿದ್ಹೇಗೆ ಎಂಬ ಕಹಾನಿ ಇಲ್ಲಿದೆ ನೋಡಿ…

ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯ ಉದ್ಯೋಗಿ ಕೆಲಸದ ನಿಮಿತ್ತ ಇಟಲಿಗೆ ಹೋಗಿದ್ದ. ಅಲ್ಲಿ ತನ್ನ ಕೆಲಸ ಮುಗಿಸಿಕೊಂಡು ನೇರವಾಗಿ ಹೈದರಾಬಾದ್ ಗೆ ಹೋಗಲು ಆತ ಪ್ಲಾನ್ ಮಾಡಿಕೊಂಡಿರುತ್ತಾನೆ. ಆದ್ರೆ ಅವನು ಹೋಗಬೇಕಿದ್ದ ಸಮಯಕ್ಕೆ ಹೈದರಾಬಾದ್ ಗೆ ಯಾವುದೇ ವಿಮಾನ ಇರುವುದಿಲ್ಲ. ಇದರಿಂದ ತಲೆ ಕೆಡಿಸಿಕೊಳ್ಳದ ಆತ ಬೆಂಗಳೂರಿಗೆ ಬಂದು ಇಲ್ಲಿನ ಸ್ನೇಹಿತರನ್ನು ಭೇಟಿ ಮಾಡಿ ನಂತರ ಹೈದರಾಬಾದ್ ಗೆ ಮರಳೋ ಯೋಚನೆ ಮಾಡ್ತಾನೆ. ಇಲ್ಲಿ ಅವನ ಅದೃಷ್ಟವೋ ಇಲ್ಲ ನಮ್ಮ ದುರಾಷ್ಟವೋ ಆತನಿಗೆ ಬೆಂಗಳೂರಿನ ವಿಮಾನದ ಟಿಕೆಟ್ ಸಿಕ್ಕೇ ಬಿಡುತ್ತದೆ. ಇಲ್ಲಿ ಗಮನಿಸಬೇಕಾದ ವಿಷ್ಯ ಅಂದ್ರೆ ಆತನಿಗೆ ಆವರೆಗೂ ಕೊರೊನಾ ಬಂದಿರುವ ಬಗ್ಗೆ ಯಾವುದೇ ಸುಳಿವೇ ಇರುವುದಿಲ್ಲ.

ಇನ್ನು ಟಿಕೆಟ್ ಸಿಗುತ್ತಿದ್ದಂತೆ ಆತ ಬೆಂಗಳೂರಿನ ತನ್ನ ಸ್ನೇಹಿತರಿಗೆ ಕಾಲ್ ಮಾಡಿ ತನ್ನ ಬರುವಿಕೆಯನ್ನು ತಿಳಿಸುತ್ತಾನೆ. ಆದ್ರೆ ದಾರಿ ಮಧ್ಯೆಯಲ್ಲೇ ಆತನಿಗೆ ಲೈಟಾಗಿ ಜ್ವರ ಕಾಣಿಸಿಕೊಳುತ್ತದೆ. ಆದ್ರೆ ಇದನ್ನು ನಿರ್ಲಕ್ಷಿಸಿದ ಆತ ಯಾವುದೇ ಆಸ್ಪತ್ರೆಗೆ ತೆರಳದೇ ನೇರವಾಗಿ ತನ್ನ ಸ್ನೇಹಿತನ ಅಪಾರ್ಟ್ ಮೆಂಟ್ ಗೆ ಬಂದುಬಿಡುತ್ತಾನೆ. ಈತನನ್ನು ಗಮನಿಸಿದ ಬೆಂಗಳೂರಿನ ಸ್ನೇಹಿತ “ಪ್ರಯಾಣದಿಂದ ನಿನಗೆ ಆಯಾಸವಾಗಿ ಜ್ವರ ಕಾಣಿಸಿಕೊಂಡಿರಬಹುದು. ನಾನು ಆಫೀಸ್ ಗೆ ಹೋಗಿ ಬರುತ್ತೇನೆ, ನೀನು ರೆಸ್ಟ್ ಮಾಡು ಎಂದೇಳಿ ಬೆಂಗಳೂರಿನ ಸ್ನೇಹಿತ ಆಫೀಸ್ ಗೆ ಹೋಗ್ತಾನೆ.

ಸಂಜೆ ಟೆಕ್ಕಿಯ ಸ್ನೇಹಿತ ಮನಗೆ ಬಂದಾಗಲೂ ಆತನ ಮಲಗೇ ಇರುತ್ತಾನೆ. ಸ್ವಲ್ಪ ಸಮಯ ಬಿಟ್ಟು ಇಬ್ಬರು ಹೊರಗೆ ಹೋಟೆಲ್‌ಗೆ ಹೋಗಿ ಕಾಫಿ ಕುಡಿದು, ಮೆಡಿಸಿನ್ ತಗೊಂಡು ಮರಳುತ್ತಾರೆ.
ಆ ದಿನ ಕಳೆದು ಮರುದಿನ ಕೂಡ ಟೆಕ್ಕಿ ಜ್ವರ ಕಡಿಮೆಯಾಗದೇ, ತಲೆ ನೋವು, ಶೀತ, ಮೂಗಿನಲ್ಲಿ ನೀರು ಸೋರುವುದು, ಗಂಟಲು ಕೆರೆತ, ತಲೆ ನೋವು ಹೆಚ್ಚಾಗಿರುತ್ತೆ. ಆಗ ಕೂಡ ಆತನಿಗೆ ಮೆಡಿಸಿನ್ ಕೊಟ್ಟು ರೆಸ್ಟ್ ಮಾಡಲು ಹೇಳಿ ಮತ್ತೆ ತನ್ನ ಆಫೀಸ್ ಗೆ ಹೋಗ್ತಾನೆ ಟೆಕ್ಕಿಯ ಸ್ನೇಹಿತ.

ಇದೇ ರೀತಿ ಮೂರು ದಿನ ನಡೆಯುತ್ತೆ. ಆಗಲೂ ಜ್ವರ ಕಡಿಮೆಯಾಗೋ ಸೂಚನೆಯೇ ಕಾಣದಿದ್ದಾಗ, ಅನಿವಾರ್ಯವಾಗಿ ತೆಲಂಗಾಣಕ್ಕೆ ಹೋಗುವ ನಿರ್ಧಾರಕ್ಕೆ ಇಟಲಿಯಿಂದ ಬಂದ ಟೆಕ್ಕಿ ಮಾಡ್ತಾನೆ. ಅದರಂತೆ ಇಲ್ಲಿನ ಟೆಕ್ಕಿ ತನ್ನ ಸ್ನೇಹಿತನನ್ನು ಸುಮಾರು 30-40 ಪ್ರಯಾಣಿಕರು ಇರೋ ಬಸ್ ನಲ್ಲಿ ಕೂರಿಸಿ ಬೆಂಗಳೂರು ಟೆಕ್ಕಿ ಮರಳಿ ತನ್ನ ಫ್ಲ್ಯಾಟ್ ಗೆ ಬರ್ತಾನೆ.
ನಂತರದ ದಿನಗಳಲ್ಲಿ ಬೆಂಗಳೂರು ಟೆಕ್ಕಿಗೂ ಗಂಟಲು ಕೆರೆತ, ಶೀತ, ತಲೆನೋವು ಲೈಟಾಗಿ ಶುರುವಾಗಿರುತ್ತೆ. ಅಷ್ಟೊತ್ತಿಗೆ ಇಟಲಿಯಿಂದ ಬಂದ ಆ ಟೆಕ್ಕಿಗೆ ಕೊರೊನಾ ವೈರಸ್ ಅಟ್ಯಾಕ್? ಆಗಿರೋ ಸುದ್ದಿ ರಾಷ್ಟ್ರಾದ್ಯಂತ ಸದ್ದು ಮಾಡಲು ಆರಂಭಿಸಿರುತ್ತೆ.
ಸದ್ಯಕ್ಕಂತೂ ಬೆಂಗಳೂರು ಟೆಕ್ಕಿ, ಆತ ಇರೋ ಅಪಾರ್ಟ್ಮೆಂಟ್ ನಲ್ಲಿರೋ ಇತರೆ ಮನೆಗಳ ಜನರನ್ನೂ ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ.
ತೆಲಂಗಾಣ ಟೆಕ್ಕಿ ಸೇರಿದಂತೆ ಐವರನ್ನು ಈಗಾಗಲೇ ಕೊರೊನಾ ಸೊಂಕು ಶಂಕೆ ಹಿನ್ನೆಲೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಜೊತೆಗೆ ಈ ಟೆಕ್ಕಿ ಮನೆಯ 5 ಕಿಲೋಮೀಟರ್ ವ್ಯಾಪ್ತಿಯ ಶಾಲೆಗಳಿಗೂ ರಜೆ ಘೋಷಿಸಲಾಗಿದೆ ಅನ್ನೋ ಮಾಹಿತಿ ಲಭ್ಯವಾಗ್ತಿದೆ.








