ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅವರು ಟ್ರೀಟ್ ಮೆಂಟ್ ಗಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು, ಸದ್ಯ ಕೆಲ ದಿನಗಳ ಕಾಲ ಚಿತ್ರರಂಗಕ್ಕೆ ಬ್ರೇಕ್ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಇದೇ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಪುನರಾರಂಭಕ್ಕೆ ಸಜ್ಜುಗೊಂಡಿರುವ ಕೆಜಿ ಎಫ್ ಚಾಪ್ಟರ್ 2 ಅಧೀರನ ಕಥೆಯೇನು ಎಂಬುದು ಇದೀಗ ಅಭಿಮಾನಿಗಳನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ. 
ಈ ಬಗ್ಗೆ ಟ್ವಿಟ್ ಮೂಲಕ ಮಾಹಿತಿ ನೀಡಿರುವ ಸಂಜಯ್ ದತ್ “ಹಾಯ್ ಫ್ರೆಂಡ್ಸ್, ನಾನು ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಶಾರ್ಟ್ ಬ್ರೇಕ್ ಪಡೆದುಕುಳ್ಳುತ್ತಿದ್ದೀನಿ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗೆ ಇದ್ದಾರೆ. ನನ್ನ ಹಿತೈಶಿಗಳು ಚಿಂತಿಸಬೇಡಿ. ಅನಗತ್ಯವಾಗಿ ಊಹಾಪೂಹಗಳನ್ನು ಹಬ್ಬಿಸಬೇಡಿ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳೊಂದಿಗೆ, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ತಮ್ಮ ನೆಚ್ಚಿನ ನಟನಿಗೆ ಅನಾರೋಗ್ಯ ಇರುವ ವಿಚಾರ ತಿಳಿದು ಆತಂಕಕ್ಕೊಳಗಾಗಿರುವ ಅಭಿಮಾನಿಗಳು ಸಂಜಯ್ ದತ್ ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ.








