ಪಾರ್ಥ ‘ಅಪ್ರಬುದ್ಧ’ – ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್
ಮುಂಬೈ, ಅಗಸ್ಟ್ 13: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ತನಿಖೆ ಕೋರಿ ಹೇಳಿಕೆ ನೀಡಿದ್ದಕ್ಕಾಗಿ ಅವರು ಇನ್ನೂ ಅಪ್ರಬುದ್ಧ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್
ತಮ್ಮ ಸೋದರಳಿಯ ಪಾರ್ಥ ಪವಾರ್ ಅವರನ್ನು ಕರೆದಿದ್ದು, ಅವರ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ.

ನಾನು ಮಹಾರಾಷ್ಟ್ರ ಮತ್ತು ಮುಂಬೈ ಪೊಲೀಸರ ಮೇಲೆ ಶೇಕಡಾ 100 ರಷ್ಟು ನಂಬಿಕೆ ಹೊಂದಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಆದರೆ ಯಾರಾದರೂ ಇನ್ನೂ ಸಿಬಿಐ ತನಿಖೆ ಬಯಸಿದರೆ, ಅದನ್ನೂ ವಿರೋಧಿಸಲು ಯಾವುದೇ ಕಾರಣವಿಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರೌತ್ ಅವರೊಂದಿಗಿನ ಸಭೆಯ ನಂತರ ಪವಾರ್ ಹೇಳಿದರು.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಪಾರ್ಥ ಪವಾರ್ ಹಿಂದೆ ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಗೆ ಪತ್ರ ಬರೆದಿದ್ದರು.
ಇತ್ತೀಚಿನ ದಿನಗಳಲ್ಲಿ, ರಾಮ ಮಂದಿರ ವಿಷಯದಲ್ಲೂ ಎನ್‌ಸಿಪಿಯ ರಾಜ್ಯ ನಿಲುವಿಗೆ ವಿರುದ್ಧವಾಗಿ ಪಾರ್ಥ ಅಭಿಪ್ರಾಯಗಳು ವ್ಯಕ್ತವಾಗಿದ್ದವು.








