ರಾಷ್ಟ್ರದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಲು ‘ತ್ರಿವರ್ಣ ಮಾಸ್ಕ್’
ಕೊಲ್ಕತ್ತಾ, ಅಗಸ್ಟ್ 13: ಕೊರೋನವೈರಸ್ ನ ಈ ಕಾಲದಲ್ಲಿ ಮಾಸಯ ಧರಿಸುವುದು ಎಲ್ಲರಿಗೂ ಒಂದು ಜೀವನ ವಿಧಾನವಾಗಿದೆ. ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಅತ್ಯಗತ್ಯವಾದ ಪರಿಕರದ ವಿನ್ಯಾಸಗಳಲ್ಲಿ ಜನರು ಸೃಜನಶೀಲರಾಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು , ರಾಷ್ಟ್ರದ ಬಗ್ಗೆ ನಮಗಿರುವ ಹೆಮ್ಮೆಯನ್ನು ವ್ಯಕ್ತಪಡಿಸಲು ತ್ರಿವರ್ಣ ಮಾಸ್ಕ್ ತಯಾರಾಗಿದೆ.
ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯ ದಂಪತಿಗಳು ಮಾಸ್ಕ್ ಗೆ ದೇಸಿ ಟ್ವಿಸ್ಟ್ ನೀಡಿದ್ದಾರೆ.
ಅವರ ತ್ರಿವರ್ಣ ಮಾಸ್ಕ್ ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ. ಖೋಕಾನ್ ಶೇಖ್ ಮತ್ತು ಅವರ ಪತ್ನಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಭಾರತೀಯ ತ್ರಿವರ್ಣದೊಂದಿಗೆ ಮುಖವಾಡಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.
ಖೋಕಾನ್ ಎಂಬ ವಲಸೆ ಕಾರ್ಮಿಕ ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬಳಿಕ ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಕೆಲವು ವರ್ಷಗಳ ಹಿಂದೆ ಹುಟ್ಟೂರಿಗೆ ಮರಳಿದರು. ಆದರೆ ಲಾಕ್‌ಡೌನ್ ನ ಕಳೆದ ಕೆಲವು ತಿಂಗಳುಗಳಲ್ಲಿ ಅವರ ವ್ಯವಹಾರ ಕುಂಠಿತಗೊಂಡಿತು. ಜೀವನ ನಿರ್ವಹಣೆಗಾಗಿ ದಂಪತಿಗಳು ಬೇಡಿಕೆಯಲ್ಲಿದ್ದ ಮುಖವಾಡಗಳನ್ನು ತಯಾರಿಸಲು ಪ್ರಾರಂಭಿಸಿದರು.

ತ್ರಿವರ್ಣ ಮಾಸ್ಕ್ ಗಳನ್ನು ಏಕೆ ತಯಾರಿಸಬಾರದು ಎಂದು ನಾವು ಯೋಚನೆ ಮಾಡಿದೆವು. ಏಕೆಂದರೆ ಇದು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ಒಂದು ಜನರನ್ನು ವೈರಸ್‌ನಿಂದ ರಕ್ಷಿಸುತ್ತದೆ ಮತ್ತು ರಾಷ್ಟ್ರದ ಬಗ್ಗೆ ತಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ ಎಂದು ಖೋಕಾನ್ ಹೇಳಿದರು. ಕೇವಲ 20 ರೂ. ಬೆಲೆಯ ತ್ರಿವರ್ಣ ಮಾಸ್ಕ್ ಈಗಾಗಲೇ ಜನಪ್ರಿಯವಾಗಿದೆ.








