ಬಿಜೆಪಿ ಶಾಸಕ ಯತ್ನಾಳ್ ವಿಚಾರವಾಗಿ ಬಜೆಟ್ ಅಧಿವೇಶನದಲ್ಲಿ ಅಬ್ಬರಿಸಿದ್ದ ಹುಲಿಯಾ ಸಿದ್ದರಾಮಯ್ಯ ರಾಜಾಹುಲಿ ಯಡಿಯೂರಪ್ಪ ಸ್ನೇಹಕ್ಕೆ ಸೋತ್ರಾ? ಸದ್ಯ ರಾಜಕೀಯ ವಲಯದಲ್ಲಿ ಮೂಡಿರುವ ಪ್ರಶ್ನೆ ಇದು. ಇದಕ್ಕೆ ಕಾರಣ ವಿಪಕ್ಷ ನಾಯಕ ಸಿದ್ದರಾಮಯ್ಯ ನಡೆದುಕೊಂಡ ರೀತಿ ಮತ್ತು ಇಂದಿನ ಬಜೆಟ್ ನಲ್ಲಿ ಬಾದಾಮಿಗೆ ಸಿಎಂ ಕೊಟ್ಟ ಬಂಪರ್ ಗಿಫ್ಟ್.
ಹೌದು..! ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿದ್ದರಾಮಯ್ಯ ಸಮರ ಸಾರಿದ್ದರು. ಯತ್ನಾಳ್ ಅವರನ್ನು ಅಧಿವೇಶನದಿಂದ ಅಮಾನತು ಮಾಡಬೇಕು. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಅಲ್ಲದೆ ಸದನದ ಬಾವಿಗೆ ಇಳಿದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಹಾಗೇ ರಾಜ್ಯಪಾಲರನ್ನು ಭೇಟಿ ಮಾಡಿ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಮಧ್ಯೆ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕರು ಭೇಟಿ ಮಾಡಿ ಅವರ ಮನವೊಲಿಕೆಗೆ ಪ್ರಯತ್ನಿಸಿದ್ದರು. ಇವರ ಮಾತಿಗೆ ಕ್ಯಾರೆ ಎನ್ನದ ಸಿದ್ದರಾಮಯ್ಯ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಲೇ ಇದ್ದರು. ಆದ್ರೆ ನಿನ್ನೆ ಸಡನ್ ಆಗಿ ಪ್ರತಿಭಟನೆಯನ್ನು ಕೈ ಬಿಟ್ಟ ಸಿದ್ದರಾಮಯ್ಯ ಸದನಕ್ಕೆ ಹಾಜರಾಗಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದರು.
ಯತ್ನಾಳ್ ವಿರುದ್ಧ ಮೊದಲೆರಡು ದಿನ ಅಬ್ಬರಿಸಿ ಬೊಬ್ಬಿರಿದ್ದ ಸಿದ್ದರಾಮಯ್ಯ ನಿನ್ನೆ ಸೈಲೆಂಟ್ ಆಗಲು ಬಿಎಸ್ ವೈ ಸ್ನೇಹ ಕಾರಣ ಎಂದು ಹೇಳಲಾಗುತ್ತಿದೆ. ಸಿಎಂ ಯಡಿಯೂರಪ್ಪ ಯತ್ನಾಳ್ ವಿಚಾರವಾಗಿ ಸಿದ್ದರಾಮಯ್ಯ ಅವರನ್ನು ಸ್ವತಃ ಭೇಟಿ ಮಾಡಿ ಅವರ ಮನವೊಲಿಸಿದ್ದರಂತೆ. ಸಿಎಂ ಅವರ ಸ್ನೇಹಕ್ಕೆ ಸೋತ ಸಿದ್ದರಾಮಯ್ಯ, ಯತ್ನಾಳ್ ವಿಚಾರವಾಗಿ ಮನಸ್ಸು ಬದಲಿಸಿ ಸದನಕ್ಕೆ ಹಾಜರಾದ್ರು ಎನ್ನಲಾಗಿದೆ. ಇನ್ನು ಇದಕ್ಕೆ ಪ್ರತಿಯಾಗಿ ಸಿಎಂ ಯಡಿಯೂರಪ್ಪ ಗೆಳೆಯ ಸಿದ್ದರಾಮಯ್ಯ ಕ್ಷೇತ್ರಕ್ಕೆ 25 ಕೋಟಿ ರೂ ಅನುದಾನ ನೀಡಿದ್ದಾರೆ.
FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?
FIFA 2026 : ಅದು ಹಚ್ಚ ಹಸಿರಿನ ಹೈಬ್ರಿಡ್ ಹುಲ್ಲು ಹಾಗೂ ಸ್ವಲ್ಪ ಕೃತಕ ಪ್ಲಾಸ್ಟಿಕ್ ನಾರುಗಳಿಂದ ಸಿದ್ದಗೊಂಡಿರುವ ಆಯತಾಕಾರದ ವಿನ್ಯಾಸದ ಫುಟ್‍ಬಾಲ್ ಮೈದಾನ. 105 ಮೀಟರ್...








