ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಡಿ ವಿಚಾರಣೆ ವೇಳೆ ಮತ್ತೊಮದು ವಿಚಾರ ಬಯಲಾಗಿದೆ. ಸುಶಾಂತ್ ಖಾತೆಯಿಂದ ಮಾಜಿ ಪ್ರೇಯಸಿ ಅಂಕಿತಾ ಲೋಕಾಂಡೆ ಅವರ ಖಾತೆಗೆ ಹಣ ವರ್ಗಾವಣೆಯಾಗಿರುವ ಮಾಹಿತಿ ಸಿಕ್ಕಿದೆ.
ಅಲ್ಲದೇ ಅಂಕಿತಾ ವಾಸುತ್ತಿದ್ದ ಅಪಾರ್ಟ್ ಮೆಂಟ್ ನ ಇಎಂಐ ಬಿಲ್ ಅನ್ನು ಸುಶಾಂತ್ ಸಿಂಗ್ ಅವರ ಖಾತೆಯಿಂದಲೇ ಪಾವತಿಸಲಾಗುತ್ತಿತ್ತು ಎನ್ನಲಾಗಿದೆ. ಅದು ಕೂಡ ಬರೋಬ್ಬ4ರಿ 4.5 ಕೋಟಿ ರೂಪಾಯಿ.
ಆದರೆ ಅಂಕಿತಾ ಅವರು ಇದಕ್ಕೆ ಪ್ರತಿಯಾಗಿ ತಮ್ಮ ಅಪಾರ್ಟ್ ಮೆಂಟ್ ನ ಡೀಟೇಲ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಅಲ್ಲೆಗಳೆದಿದ್ದಾರೆ.
ಅಲ್ಲದೇ ಈ ಬಗ್ಗೆ ಮಾತನಾಡಿರುವ ಅಂಕಿತಾ ನಾನು ಸಾಧ್ಯವಾದಷ್ಟು ಪಾರದರ್ಶಕವಾಗಿರುತ್ತೇನೆ. ಎಲ್ಲಾ ವದಂತಿಗಳಿಗೆ ತೆರೆ ಎಳೆಯುತ್ತೇನೆ. ಇದು ನನ್ನ ಫ್ಲಾಟ್ ನೋಂದಣಿ ಮತ್ತು ನನ್ನ ಬ್ಯಾಂಕ್ ಸ್ಟೇಟ್ಮೆಂಟ್. ತಿಂಗಳ ಇಎಂಐ ನನ್ನ ಖಾತೆಯಿಂದ ಕಡಿತಕೊಂಡಿದೆ ನೋಡಿ. ಹೆಚ್ಚೇನು ಹೇಳಬೇಕಾಗಿಲ್ಲ “ ಎಂದು ಬರೆದುಕೊಂಡಿದ್ದಾರೆ. 
ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್
ಮುಂಬೈ: ಕನ್ನಡದ 'ಸೂರ್ಯವಂಶ' ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ವೀಡಿಯೊ ಮೂಲಕ ಭಾರಿ...








