ಧೋನಿ ನಾಯಕತ್ವದಲ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಆಟಗಾರರು ಯಾರೆಲ್ಲಾ ?
ಟೀಮ್ ಇಂಡಿಯಾ ಶ್ರೇಷ್ಠ ನಾಯಕ ಯಾರು ಅನ್ನೋ ಪ್ರಶ್ನೆ ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತನೇ ಇದೆ. ಆದ್ರೆ ಈ ಪ್ರಶ್ನೆಗೆ ನಿಖರವಾಗಿ ಉತ್ತರ ಹೇಳಲು ಸಾಧ್ಯವಿಲ್ಲ. ಆಯಾ ಕಾಲ ಘಟ್ಟದಲ್ಲಿ ನಾಯಕನಾದವರು ತಂಡವನ್ನು ಅವರ ಸಾಮಥ್ರ್ಯಕ್ಕೆ ತಕ್ಕಂತೆ ಮುನ್ನಡೆಸಿದ್ದಾರೆ.
ಅದ್ರಲ್ಲೂ ಕಳೆದ ಎರಡು ದಶಕಗಳಲ್ಲಿ ಭಾರತೀಯ ಕ್ರಿಕೆಟ್ ನ ಚಿತ್ರಣವೇ ಬದಲಾಗಿ ಹೋಗಿದೆ. ತಂಡದಲ್ಲಿ ಯಾರು ಕೂಡ ಖಾಯಂ ಆಟಗಾರ ಎಂದು ಹೇಳುವ ಹಾಗಿಲ್ಲ. ಯಾಕಂದ್ರೆ ಅಷ್ಟೊಂದು ಸ್ಪರ್ಧೆ ಇದೆ. ಒಂದು ಬಾರಿ ತಂಡದಿಂದ ಹೊರನಡೆದ್ರೆ ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಹರ ಸಾಹಸವನ್ನೇ ಪಡಬೇಕಾಗುತ್ತದೆ.
ಇತ್ತೀಚೆಗೆ ಭಾರಿ ಚರ್ಚೆ ನಡೆದಿರುವುದು ಅಂದ್ರೆ ನಾಯಕತ್ವ ವಿಚಾರವಾಗಿ. ಅದ್ರಲ್ಲೂ ಗೌತಮ್ ಗಂಭೀರ್ ಅವರಂತೂ ಧೋನಿ ಶ್ರೇಷ್ಠ ನಾಯಕ ಅನ್ನೋದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಬದಲಾಗಿ ಧೋನಿ ಅದೃಷ್ಟವಂತ ನಾಯಕ ಅಂತ ಹೇಳಿದ್ದರು. ಸೌರವ್ ಗಂಗೂಲಿ ಕಟ್ಟಿದ್ದ ತಂಡವನ್ನು ಧೋನಿ ಮುನ್ನಡೆಸಿಕೊಂಡು ಹೋಗಿದ್ದಾರೆ. ಹೀಗಾಗಿ ಅವರಿಗೆ ಯಶಸ್ಸು ಸಿಕ್ಕಿದೆ ಎಂದು ವಾದ ಮಾಡಿದ್ದರು.
ಅಂಕಿ ಅಂಶಗಳು ಏನು ಬೇಕಾದ್ರೂ ಹೇಳಲಿ.. ಸೌರವ್
ಗಂಗೂಲಿ ಕೂಡ ಶ್ರೇಷ್ಠ ನಾಯಕ. ಧೋನಿಯೂ ಶ್ರೇಷ್ಠ ನಾಯಕ. ರಾಹುಲ್ ದ್ರಾವಿಡ್ ಶ್ರೇಷ್ಠ ನಾಯಕ.. ಅನಿಲ್ ಕುಂಬ್ಳೆಯೂ ಶ್ರೇಷ್ಠ ನಾಯಕ. ಸದ್ಯ ವಿರಾಟ್ ಕೊಹ್ಲಿಯೂ ಶ್ರೇಷ್ಠ ನಾಯಕನಾಗಿ ಮುನ್ನಡೆಯುತ್ತಿದ್ದಾರೆ. ಇಲ್ಲಿ ನಾಯಕತ್ವ ಅಂದ್ರೆ ತಂಡದ ಸೋಲು ಗೆಲುವಿನ ಮೇಲೆ ನಿರ್ಧಾರವಾಗುತ್ತದೆ.
ಅದೇನೂ ವಾದ ಬೇಕಾದ್ರೂ ಇರಲಿ, ಮಹೇಂದ್ರ ಸಿಂಗ್ ಧೋನಿ ಸರಿ ಸುಮಾರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಆರು ಮತ್ತು ಒಂಬತ್ತು ವರ್ಷಗಳ ಕಾಲ ಟೀಮ್ ಇಂಡಿಯವನ್ನು ಮುನ್ನೆಡೆಸಿದ್ದಾರೆ. ಇಲ್ಲಿ ಧೋನಿ ಮೂರು ಐಸಿಸಿ ಟ್ರೋಫಿ, ಟೆಸ್ಟ್ ಸರಣಿ, ಏಕದಿನ ಸರಣಿ, ಟ್ವಿ ಟ್ವೆಂಟಿ ಸರಣಿಗಳನ್ನು ಗೆದ್ದಿದ್ದಾರೆ. ಇದು ಅವರ ಸಾಧನೆಯ ಹೆಜ್ಜೆ ಗುರುತುಗಳು.
ಈ ನಡುವೆ ಧೋನಿ ನಾಯಕತ್ವದಲ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಸುಮಾರು 50 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿಕೊಟ್ಟಿದ್ದಾರೆ. (ಇಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಒಟ್ಟಾಗಿ ಸೇರಿಸಿಕೊಳ್ಳಲಾಗಿದೆ) ಇದ್ರಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಮ್ಯಾಚ್ ವಿನ್ನರ್‍ಗಳು ಇದ್ದಾರೆ. ಕೆಲವೊಂದು ಬಾರಿ ಹಿರಿಯ ಆಟಗಾರರನ್ನು ಕಡೆಗಣಿಸಿ ಧೋನಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ಸೆಹ್ವಾಗ್, ಗಂಭೀರ್, ಯುವರಾಜ್ ಸಿಂಗ್, ಸಚಿನ್ ತೆಂಡುಲ್ಕರ್ ಹೀಗೆ ಹಿರಿಯ ಆಟಗಾರರನ್ನು ದೂರ ಸರಿಯುವಂತೆ ಮಾಡಿದ್ದರು ಎಂಬ ಟೀಕೆಯೂ ಧೋನಿಯ ಮೇಲಿದೆ. ಆದ್ರೆ ಇದೆಲ್ಲಾ ಮಾಡಿರುವುದು ಧೋನಿ ತಂಡದ ಹಿತಕ್ಕಾಗಿ ಎಂಬುದನ್ನು ಮರೆಯುವ ಹಾಗಿಲ್ಲ.
ಧೋನಿ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟ ಆಟಗಾರರ ಪಟ್ಟಿ
ಯೂಸುಫ್ ಪಠಾಣ್, ಪ್ರವೀಣ್ ಕುಮಾರ್, ಮನೋಜ್ ತಿವಾರಿ. ಮನ್ ಪ್ರೀತ್ ಗೋನಿ, ಪ್ರಗ್ಯಾನ್ ಓಜ್ಹಾ , ವಿರಾಟ್ ಕೊಹ್ಲಿ, ಬದ್ರಿನಾಥ್, ರವೀಂದ್ರ ಜಡೇಜಾ, ಅಭಿಷೇಕ್ ನಾಯರ್, ಸುದೀಪ್ ತ್ಯಾಗಿ, ಅಭಿಮನ್ಯು ಮಿಥುನ್, ವಿನಯ್ ಕುಮಾರ್, ಮುರಳಿ ವಿಜಯ್, ಶಿಖರ್ ಧವನ್, ಸೌರಭ್ ತಿವಾರಿ, ಅಜ್ಯಂಕ್ಯಾ ರಹಾನೆ, ವರೋನ್ ಆರೋನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಸ್ಟುವರ್ಟ್ ಬಿನ್ನಿ, ಧವಳ್ ಕುಲಕರ್ಣಿ, ಬರಿಂದರ್ ಸ್ರನ್, ರೋಹಿತ್ ಧವನ್, ಗುರುಕೀರ್ತಿ ಸಿಂಗ್, ಜಸ್‍ಪ್ರಿತ್ ಬೂಮ್ರಾ, ಕೆ.ಎಲ್. ರಾಹುಲ್, ಯುಜ್ವೆಂದ್ರ ಚಾಹಲ್, ಫಝಲ್ ಫೈಝ್, ಹಾರ್ದಿಕ್ ಪಾಂಡ್ಯ, ಜಯದೇವ್ ಯಾದವ್, ದೀಪಕ್ ಚಾಹರ್.
ಧೋನಿ ಸಾರಥ್ಯದಲ್ಲಿ ಟೆಸ್ಟ್ ತಂಡಕ್ಕೆ ಎಂಟ್ರಿಕೊಟ್ಟ ಆಟಗಾರರು
ಮುರಳಿ ವಿಜಯ್, ಪ್ರಗ್ಯಾನ್ ಓಜ್ಹಾ, ಅಮಿತ್ ಮಿಶ್ರಾ, ಎಸ್. ಬದ್ರಿನಾಥ್, ವೃದ್ದಿಮಾನ್ ಶಾಹ, ಅಭಿಮನ್ಯು ಮಿಥುನ್, ಆರ್. ವಿನಯ್ ಕುಮಾರ್, ಸುರೇಶ್ ರೈನಾ, ಚೇತೇಶ್ವರ ಪೂಜಾರ, ಜಯದೇವ್ ಉನಾದ್ಕಟ್, ವಿರಾಟ್ ಕೊಹ್ಲಿ, ಪ್ರವೀಣ್ ಕುಮಾರ್, ಅಭಿನವ್ ಮುಕುಂದ್, ಆರ್. ಅಶ್ವಿನ್, ಉಮೇಶ್ ಯಾದವ್, ಆರೋನ್ ಫಿಂಚ್, ಭುವನೇಶ್ವರ್ ಕುಮಾರ್, ಶಿಖರ್ ಧವನ್, ಅಜ್ಯಂಕ್ಯಾ ರಹಾನೆ, ರೋಹಿತ್ ಶರ್ಮಾ, ಸ್ಟುವರ್ಟ್ ಬಿನ್ನಿ, ಪಂಕಜ್ ಸಿಂಗ್, ಕೆ.ಎಲ್. ರಾಹುಲ್.
ಸದ್ಯ ಟೀಮ್ ಇಂಡಿಯಾದಲ್ಲಿ ಧೋನಿ ನಾಯಕತ್ವದಲ್ಲಿ ಎಂಟ್ರಿಕೊಟ್ಟ ಆಟಗಾರರ ಅರ್ಭಟ ಜೋರಾಗಿಯೇ ನಡೆಯುತ್ತಿದೆ. ಅಂದು ಗಂಗೂಲಿ, ದ್ರಾವಿಡ್, ಕುಂಬ್ಳೆ ಕಟ್ಟಿ ಬೆಳೆಸಿದ್ದ ತಂಡವನ್ನು ಧೋನಿ ಯಶಸ್ಸಿನ ಉತ್ತುಂಗಕ್ಕೇರಿಸಿದ್ರು. ಹಾಗೇ ಧೋನಿ ಯಶಸ್ಸಿನ ಹಾದಿಯಲ್ಲೇ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಎಲ್ಲವೂ ಕಾಲದ ಮಹಿಮೆ.








