ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಗಡಿ ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ರಾಜ್ಯದಲ್ಲಿ ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ ಧೂದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನೂ ರಾತೋರಾತ್ರಿ 5 ಅಡಿ ನೀರು ಏರಿಕೆಯಾಗಿ ಅಂತರರಾಜ್ಯ ಸಂಪರ್ಕ ಕಲ್ಪಿಸುವ ಕುಡಚಿ-ಉಗಾರ ಸೇತುವೆ ಜಲಾವೃತವಾಗಗಿದೆ. ರಾಯಭಾಗ ತಾಲೂಕಿನ ಕುಡಚಿ ಹಾಗೂ ಅಥಣಿ ತಾಲೂಕಿನ ಉಗಾರ ಮದ್ಯೆ ಇರುವ ಸೇತುವೆ ಇದಾಗಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಸಂಪರರ್ಕ ಕಲ್ಪಿಸುವ ಸೇತುವೆಯಾಗಿದೆ. ಇನ್ನೂ ಸೇತುವೆ ಎರಡು ಕಡೆ ಪೊಲಿಸ್ ಹಾಗೂ ಜಿಲ್ಲಾಡಳಿತದಿಂದ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿತ್ತಿರುವ ಮಹಾ ಮಳೆಗೆ ನದಿಗಳೆಲ್ಲಾ ಭರ್ತಿಯಾಗಿದೆ. ಪರಿಣಾಮ ಉಪನದಿಗಳು ನದಿತಟದಾಟಿ ಹರಿಯುತ್ತಿವೆ. ಕಳೆದ ಹದಿನೈದು ದಿನಗಳಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 7 ಸೇತುವೆಗಳು ಜಲಾವೃತವಾಗಿವೆ.
ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ...








